ಸಂವಿಧಾನದ ಪೂರ್ವ ಪೀಠಿಕೆಯ ಬಗ್ಗೆ ಮಾಹಿತಿ | Information About the Preamble to the Constitution in Kannada

ಸಂವಿಧಾನದ ಪೂರ್ವ ಪೀಠಿಕೆಯ ಬಗ್ಗೆ ಮಾಹಿತಿ Information About the Preamble to the Constitution Samvidanada Purva Piikeya Bagge Mahiti in Kannada

ಸಂವಿಧಾನದ ಪೂರ್ವ ಪೀಠಿಕೆಯ ಬಗ್ಗೆ ಮಾಹಿತಿ

Information About the Preamble to the Constitution in Kannada
Information About the Preamble to the Constitution

ಈ ಲೇಖನಿಯಲ್ಲಿ ಸಂವಿಧಾನದ ಪೂರ್ವ ಪೀಠಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಂವಿಧಾನದ ಪೂರ್ವ ಪೀಠಿಕೆ

ಪ್ರಪಂಚದ ಅನೇಕ ರಾಷ್ಟ್ರಗಳು ಸಂವಿಧಾನದ ಪೂರ್ವ ಪೀಠಿಕೆಯನ್ನು ಹೊಂದಿವೆ. ಹಾಗೆ ಭಾರತದ ಸಂವಿಧಾನವೂ ಪೂರ್ವ ಪೀಠಿಕೆ ಹೊಂದಿದೆ. ಭಾರತದ ಸಂವಿಧಾನದ ಪೂರ್ವ ಪೀಠಿಕೆಯನ್ನು ಅಮೇರಿಕಾ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಇದು ಸಂವಿಧಾನದ ತತ್ವಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಜವಾಹರಲಾಲ ನೆಹರು ಅವರು ೧೯೪೬ ಡಿಸೆಂಬರ್‌ ೧೩ ರಂದು ಪೂರ್ವ ಪೀಠಿಕೆಯ ಧ್ಯೇಯ ನಿರ್ಣಯವನ್ನು ಮಂಡಿಸಿದರು. ನಂತರ ಅನೇಕ ಮಾರ್ಪಾಡು ಹೊಂದಿ ೧೯೪೭ ಜನೆವರಿ ೨೨ ರಂದು ಸಂವಿಧಾನದ ಭಾಗವಾಗಿ ಅಂಗೀಕರಿಸಿ ಸಂವಿಧಾನದ ಭಾಗವಾಗಿ ರೂಪಿಸಲಾಯಿತು. ಪೂರ್ವ ಪೀಠಿಕೆಯನ್ನು ಠಾಕೂರ್ ದಾಸ್‌ ಭಾರ್ಗವ್‌ ರವರು ಸಂವಿಧಾನ ಹೃದಯ ಮತ್ತು ಒಡವೆ ಎಂದಿದ್ದಾರೆ. ಪೂರ್ವಪೀಠಿಕೆಯನ್ನು ಕೆ. ಎಂ. ಮುನ್ಷಿರವರು ಸಂವಿಧಾನ ಜಾತಕ ಎಂದಿದ್ದಾರೆ. ಮಂಗೋಲಿಯನ್‌ ದೇಶದ ಪೂರ್ವ ಪೀಠಿಕೆಯು ಸಹ ಭಾರತದಂತೆ We the People ಎಂದೇ ಆರಂಭವಾಯಿತು.

ಪೂರ್ವ ಪೀಠಿಕೆಯ ವಿಷಯವಸ್ತು

ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು, ಮತ್ತು ಅದರ ಎಲ್ಲ ಪೌರರಿಗೆ,ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಮತ್ತು ಉಪಾಸನಾ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ಎಲ್ಲರಿಗೂ ದೊರೆಯುವಂತೆ ಮಾಡುವುದಕ್ಕೆ, ವ್ಯಕ್ತಿ ಗೌರವ, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ ಭ್ರಾತೃತ್ವ ಭಾವನೆಯನ್ನು ಎಲ್ಲರಲ್ಲಿಯೂ ವೃದ್ದಿಗೊಳಿಸುವುದಕ್ಕಾಗಿ ಧೃಢ ಸಂಕಲ್ಪ ಮಾಡಿ ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್‌ ೨೬/ ೧೯೪೯ ರಂದು ಈ ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ಪೂರ್ವಪೀಠಿಕೆ ಸಂವಿಧಾನದ ಭಾಗವಾಗಿದೆಯೇ

೧೯೬೦ ರಲ್ಲಿ ಬೇರುಬಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಪೂರ್ವ ಪೀಠಿಕೆಯನ್ನು ಸಂವಿಧಾನ ಭಾಗವಲ್ಲವೆಂದು ತೀರ್ಪು ನೀಡಿತು. ೧೯೭೩ ರಲ್ಲಿ ಕೇಶಾವಾನಂದ ಭಾರತಿ V/S ಕೇರಳ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತಾನು ಹಿಂದೆ ನೀಡಿದ ಆದೇಶವನ್ನು ಹಿಂಪಡೆದುಕೊಂಡು ಪೂರ್ವ ಪೀಠಿಕೆಯನ್ನು ಸಂವಿಧಾನದ ಭಾಗವೆಂದು ತೀರ್ಪು ನೀಡಿತು. ಜೊತೆಗೆ ಇದೇ ಪ್ರಕರಣದಲ್ಲಿ ಮೂಲ ಅರ್ಥಕ್ಕೆ ಭಂಗ ಬರದಂತೆ ಪೂರ್ವ ಪೀಠಿಕೆಯನ್ನು ತಿದ್ದುಪಡಿ ಮಾಡಬಹುದು ಎಂದು ತಿಳಿಸಿತು. ೧೯೯೫ ರಲ್ಲಿ L. I. C of India ಪ್ರಕರಣ ಸಂವಿಧಾನದ ಭಾಗ ಎಂದು ತಿಳಿಸಿತು. ಈ ಮೇಲಿನ ಪ್ರಕರಣಗಳನ್ವಯ ಪೂರ್ವ ಪೀಠಿಕೆಯನ್ನು ಸಂವಿಧಾನದ ಭಾಗ ಎಂದು ತಿಳಿಸಿತು.

ಪೂರ್ವ ಪೀಠಿಕೆಯಲ್ಲಿರು ಪ್ರಮುಖ ಪದಗಳು

ಭಾರತದ ಪ್ರಜೆಗಳಾದ ನಾವು :

ಈ ಪದವನ್ನು ಬಳಸುವ ಕಾರನ ಭಾರತದ ಸಂವಿಧಾನ ಭಾರತೀಯರಿಂದಲೇ ರಚಿತವಾದ ಸಂವಿಧಾನ ಎಂಬ ಅರ್ಥಕೊಡಲು ಬಳಸಲಾಗಿದೆ. ಮತ್ತು ಪೂರ್ವ ಪೀಠಿಕೆಯ ಅಂತಿಮ ವಾಕ್ಯದಲ್ಲಿ ಅಂಗೀಕರಿಸಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ ಎಂಬ ವಾಕ್ಯವಿದೆ.

ಗಣರಾಜ್ಯ :

ರಾಷ್ಟ್ರದ ಮುಖ್ಯಸ್ಥರು ಅನುವಂಶಿಕ ರಾಜನಾಗಿರದೇ ಒಂದು ನಿಗಧಿತ ಅವಧಿಗೆ ಚುನಾಯಿತ ಕಾರ್ಯ ನಿರ್ವಾಹಕ ಎಂ ಅರ್ಥ ಹೊಂದಿದೆ. ಭಾರತದ ಒಕ್ಕೂಟದ ಮುಖ್ಯಸ್ಥರು ರಾಷ್ಟ್ರಪತಿಯವರನ್ನು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತಿರುವುದರಿಂದ ನಮ್ಮ ರಾಷ್ಟ್ರ ಗಣರಾಜ್ಯವಾಗಿದೆ.

ಸಾರ್ವಭೌಮ :

ಭಾರತವು ಯಾವುದೇ ರಾಷ್ಟ್ರದ ಅಧೀನಕ್ಕೆ ಒಳಗಾಗದೇ ಆಂತರಿಕ ಮತ್ತು ಬಾಹ್ಯವಾದ ನಿರ್ಧಾರ ತೆಗೆದುಕೊಳ್ಳಲು ನಮ್ಮ ದೇಶ ಸ್ವತಂತ್ರಟವಾಯಿತು. ಹೀಗಾಗಿ ನಮ್ಮ ರಾಷ್ಟ್ರ ಸಾರ್ವಭೌಮ ರಾಷ್ಟ್ರವಾಗಿದೆ.

ಸಮಾಜವಾದಿ :

೧೯೭೬ ರಲ್ಲಿ ೪೨ ನೇ ತಿದ್ದುಪಡಿ ಮಾಡುವ ಮೂಲಕ ಈ ಪದ ಸೇರಿಸಲಾಗಿದೆ ಈ ಪದ ಸೇರಿಸಲು ಮುಖ್ಯ ಕಾರಣ ಬಂಡವಾಳಶಾಹಿಗಳ ಮತ್ತು ಕಾರ್ಮಿಕರ ಮಧ್ಯ ಇರುವ ತಾರತಮ್ಯವನ್ನು ಹೋಗಲಾಡಿಸಲು ಸೇರಿಸಿದೆ.

ಜಾತ್ಯಾತೀತ :

ಇದನ್ನು ಸಹ ೧೯೭೬ ರಲ್ಲಿ ೪೨ ನೇ ತಿದ್ದುಪಡಿ ಮಾಡುವ ಮೂಲಕ ಸೇರಿಸಿದೆ. ಭಾರತದಲ್ಲಿ ಎಲ್ಲಾ ಧರ್ಮಗಳ ಅಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದ ೨೫ ನೇ ವಿಧಿಯಿಂದ ೨೮ನೆಯ ವಿಧಿಯವರೆಗೂ ಧಾರ್ಮಿಕ ಸ್ವಾತಂತ್ರ್ಯದ ಕುರಿತು ವಿವರಿಸಲಾಗಿದೆ.

ಐಕ್ಯತೆ :

ಇದನ್ನು ಸಹ ೧೯೭೬ ರಲ್ಲಿ ೪೨ ನೇಯ ತಿದ್ದುಪಡಿ ಮಾಡುವ ಮೂಲಕ ಸೇರಿಸಲಾಗಿದೆ. ನಾವೆಲ್ಲರೂ ಸಹೋದರತ್ವ ಭಾವದಿಂದ ಬದುಕಲು ಈ ಪದವನ್ನು ಸೇರಿಸಲಾಗಿದೆ.

ಸಮಾನತೆ :

ಭಾರತದ ಪ್ರಜೆಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಸ್ಥಾನಮಾನ ಮತ್ತು ಅವಕಾಶಗಳನ್ನು ಸಮಾನತೆಯಲ್ಲಿ ಪಡೆಯುವರು. ಈ ಪದವು ಫ್ರೆಂಚ್‌ ದೇಶದಿಂದ ಪಡೆಯಲಾಗಿದೆ.

ನ್ಯಾಯ :

ಈ ಪದವನ್ನು ರಷ್ಯಾ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಎಲ್ಲಾ ಪ್ರಜೆಗಳಿಗೆ ತಾರತಮ್ಯವಿಲ್ಲದೇ ಆರ್ಥಿಕ, ಸಾಮಾಜಿಕ, ರಾಜಕೀಯದಲ್ಲಿ ನ್ಯಾಯ ಒದಗಿಸುವುದಾಗಿದೆ.

ಸ್ವಾತಂತ್ರ್ಯ :

ಈ ಪದವನ್ನು ಫ್ರೆಂಚ್‌ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನದ ೧೯ ನೇ ಯ ವಿಧಿಯಲ್ಲಿ ವ್ಯಕ್ತಿಗೆ ೬ ಸ್ವಾತಂತ್ರ್ಯಗಳನ್ನು ನೀಡಿ ಸ್ವತಂತ್ರವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

FAQ

ಭಾರತದ ಪೂರ್ವ ಪೀಠಿಕೆಯನ್ನು ಯಾವ ದೇಶದಿಂದ ಎರವಲಾಗಿ ಪಡೆಯಲಾಗಿದೆ ?

ಅಮೇರಿಕಾ.

ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಹೇಳಿದವರು ಯಾರು?

ಕೆ. ಎಂ ಮುನ್ಷಿ.

ಇತರೆ ವಿಷಯಗಳು :

ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಮಾಹಿತಿ

ಸಮಾಜ ಸುಧಾರಕರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *