ರಾಷ್ಟ್ರಕವಿ ಗೋವಿಂದ ಪೈ ರವರ ಕವಿತೆ | Poem by National Poet Govinda Pai in Kannada

ರಾಷ್ಟ್ರಕವಿ ಗೋವಿಂದ ಪೈ ರವರ ಕವಿತೆ Poem by National Poet Govinda Pai Rashtra kavi Govinda Pai kaviteya Bagge Mahiti In Kannada

ರಾಷ್ಟ್ರಕವಿ ಗೋವಿಂದ ಪೈ ರವರ ಕವಿತೆ

Poem by National Poet Govinda Pai in Kannada
Poem by National Poet Govinda Pai in Kannada

ಈ ಲೇಖನಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ರವರ ಕವಿತೆಯ ಬಗ್ಗೆ ಸಂಪೂರ್ನವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ರಾಷ್ಟ್ರಕವಿ ಗೋವಿಂದ ಪೈ ರವರ ಕವಿತೆ

ತಾಯಿ ನಾಡು ನುಡಿಯ ಮೇಲಿನ ಅಭಿಮಾನದಿಂದ ಈ ಕವಿತೆಯನ್ನು ರಾಷ್ಟ್ರಕವಿಯಾದ ಗೋವಿಂದ ಪೈ ರವರು ಕನ್ನಡಿಗರ ತಾಯಿ ಎಂಬ ಕವಿತೆಯನ್ನು ಬರೆದಿದ್ದಾರೆ.

ಕನ್ನಡಿಗರ ತಾಯಿ

ತಾಯೇ ಬಾರೆ, ಮೊಗವ ತೋರೆ, ಕನ್ನಡಿಗರ ಮಾತೆಯೇ !

ಹರಸು ತಾಯೇ, ಸುತರ ಕಾಯೇ, ನಮ್ಮ ಜನ್ಮದಾತೆಯೇ !

ನಮ್ಮ ತಪ್ಪನೆನಿತೋ ತಾಳ್ವೆ,

ಅಕ್ಕರೆಯಿಂದೆಮ್ಮನಾಳ್ವೆ,

ನೀನೆ ಕಣಾ ನಮ್ಮ ಬಾಳ್ವೆ,

ನಿನ್ನ ಮರೆಯಲಮ್ಮೆವು !

ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು……..

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,

ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,

ತೆನೆಯ ಕೆನೆಯ ಗಾಳಿಯೊ,

ಖಗಮೃಗೋರಗಾಳಿಯೊ,

ನದಿ ನಗರ ನಗಾಳಿಯೊ !

ಇಲ್ಲಿಲ್ಲದುದುಲಿದುದೆ ?

ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೇ ?…….

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,

ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,

ಶರ್ವ ಪಂಪ ರನ್ನರ,

ಷಡಕ್ಷರಿ ಮುದ್ದಣ್ಣರ,

ಪುರಂದರ ವರೇಣ್ಯರ,

ತಾಯೆ, ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ !……..

ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ !

ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ !

ಇಲ್ಲಿಲ್ಲದ ಶಿಲ್ಪಮಿಲ್ಲ;

ನಿನ್ನ ಕಲ್ಲೆ ನುಡಿವುದಲ್ಲ !

ಹಿಂಗತೆಯಿನಿವಾಲ ಸೊಲ್ಲ

ನೆಮ್ಮತೃಷೆಗೆ ದಕ್ಕಿಸು !

ಹೊಸತು ಕಿನ್ನರಿಯಲ್ಲಿ ನಿನ್ನ ಹಳೆಯ ಹಾಡನುಕ್ಕಿಸು !

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ !

ಕನ್ನಡ ಕಸ್ತೂರಿಯನ್ನ

ಹೊಸತುಸಿರಿಂ ತೀಡದನ್ನ

ಸುರಭಿ ಎಲ್ಲಿ ? ನೀನದನ್ನ

ನವಶಕ್ತಿಯಿನೆಬ್ಬಿಸು

ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು !…..

ನಮ್ಮದೆಯಂ ತಾಯೆ, ಬಲಿಸು,

ಎಲ್ಲರ ಬಾಯಲ್ಲಿ ನೆಲಸು,

ನಮ್ಮ ಮನಮನೊಂದೆ ಕಲಸು !

ಇದನೊಂದನೆ ಕೋರುವೆ !

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ !

FAQ

ರಾಷ್ಟ್ರಕವಿ ಎಂದು ಯಾರನ್ನು ಕರೆಯುತ್ತಾರೆ ?

ಗೋವಿಂದ ಪೈ

ಗೋವಿಂದ ಪೈ ರವರು ಎಲ್ಲಿ ಜನಿಸಿದರು ?

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಜನಿಸಿದರು.

ಇತರೆ ವಿಷಯಗಳು :

ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಮಾಹಿತಿ

ಸಮಾಜ ಸುಧಾರಕರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *