ಸಾಮಾಜಿಕ ಜಾಲತಾಣ ಪ್ರಬಂಧ | Social Networking Essay in Kannada

ಸಾಮಾಜಿಕ ಜಾಲತಾಣ ಪ್ರಬಂಧ Social Networking Essay samajika jalatanagala bagge prabandha in kannada

ಸಾಮಾಜಿಕ ಜಾಲತಾಣ ಪ್ರಬಂಧ

Social Networking Essay in Kannada
ಸಾಮಾಜಿಕ ಜಾಲತಾಣ ಪ್ರಬಂಧ

ಈ ಲೇಖನಿಯಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಪೀಠಿಕೆ:

ಸಮಾಜಿಕ ಜಾಲತಾಣ ಎಂಬುದು ಕಂಪ್ಯೂಟರ್ ಲೋಕದಲ್ಲಿ ಸದ್ದು ಮಾಡುತ್ತಿರುವ ಒಂದು ದೊಡ್ಡ ನೆಟ್‌ವರ್ಕ್.‌ ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲು ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಮೂಲೆ ಮೂಲೆಗಳಲ್ಲು ಸಮಾಜಿಕ ಜಾಲತಾಣದ ಸದ್ದು ಜಾಸ್ತಿಯಾಗಿದೆ. ಸಮಾಜಿಕ ಜಾಲತಾಣಗಳು ಇಲ್ಲದಿದ್ದರೆ ಬದುಕೆ ಇಲ್ಲ ಎನ್ನುವಷ್ಟು ಜನರು ಅದಕ್ಕೆ ಅವಲಂಭಿತರಾಗಿದ್ದಾರೆ. ಜನರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲೆ ಮುಳುಗಿರುತ್ತಾರೆ ಎಲ್ಲಾ ವಿಷಯಕ್ಕು ಅದನ್ನೆ ಅವಲಂಭಿಸಿಕೊಂಡಿದ್ದಾರೆ.ಎಲ್ಲಾ ವಿಷಯವನ್ನು ಕೂತಲ್ಲೆ ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣ ಸಹಯಕವಾಗಿದೆ.

ಬಿಡುವಿಲ್ಲದ ಕಾಲದಲ್ಲಿ ಜನರು ಮತ್ತು ಸಂಸ್ಥೆಗಳು ಪರಸ್ಪರ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣವನ್ನು ತಮ್ಮ ಆಧಾರವನ್ನಾಗಿ ಮಾಡಿಕೊಂಡಿವೆ. ದೂರವಿರುವ ಕುಟುಂಬಸ್ಥರೊಂದಿಗೆ ಮಾತನಾಡಲು ಇದು ಸಹಾಯಕವಾಗಿದೆ. ಇದರಿಂದ ದೂರವಿರುವವರು ಹತ್ತಿರವಾಗುತ್ತಾರೆ, ಹತ್ತಿರವಿರುವವರು ದೂರವಾಗುತ್ತಾರೆ. ಹತ್ತಿರವಿರುವವರ ಜೊತೆ ಮಾತನಾಡುವ ಬದಲು ದಿನವೆಲ್ಲಾ ಸಮಾಜಿಕ ಜಾಲತಾಣಗಳಲ್ಲೆ ಮುಳುಗಿ ಲೊಖವನ್ನೆ ಮರೆತು ಬಿಡುತ್ತಾರೆ.

ಸಾಮಾಜಿಕ ಜಾಲತಾಣ ಅರ್ಥ:

ಸಾಮಾಜಿಕ ಕಾರಣಗಳಿಗಾಗಿ ಸಂಪರ್ಕಗಳ ಮೂಲಕ ಸಂಪರ್ಕಿಸುವುದೆ ಸಾಮಾಜಿಕ ಜಾಲತಾಣವಾಗಿದೆ. ಸಾಮಾಜಿಕ ನೆಟ್‌ವರ್ಕಿಂಗ್ ಒಂದು ಸಂವಹನ ಪ್ರಕ್ರಿಯೆಯಾಗಿದೆ. ಜನರು ತಮ್ಮ ಅಭಿಪ್ರಾಯಗಳು,ಆಲೋಚನೆಗಳು ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಆನ್‌ಲೈನ್ ಪ್ರಪಂಚವು ವೇದಿಕೆಯನ್ನು ಒದಗಿಸಿಕೊಟ್ಟಿದೆ.

ಯಾವುದೇ ಸಮಸ್ಯೆಗಳಿಲ್ಲದೆ ಜನರು ಸಂವಹನ ನಡೆಸಲು ಸಹಾಯ ಮಾಡುತ್ತದೆ. ಸಾಮಾಜಿಕ ಜಾಲತಾಣದಿಂದ ಎಷ್ಟು ಉಪಯೋಗವಿದೆಯೊ ಅಷ್ಟೆ ದುಷ್ಪರಿಣಾಮಗಳನ್ನು ಕೂಡ ಒಳಗೊಂಡಿದೆ. ಸಮರ್ಪಕವಾಗಿ ಅದನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ.

ಸಾಮಾಜಿಕ ಜಾಲತಾಣ ವಿಧಗಳು:

 • ಸಾಂಪ್ರದಾಯಿಕ ಸಾಮಾಜಿಕ ಜಾಲತಾಣಗಳು: Facebook, LinkedIn, Twitter,WhatsAppಇನ್ನು ಮುಂತಾದವು
 • ಮಾಧ್ಯಮ ಹಂಚಿಕೆ ಜಾಲತಾಣಗಳು: ಉದಾಹರಣೆಗಳು: Instagram, Pinterest, ಇನ್ನು ಮುಂತಾದವು
 • ಚರ್ಚಾ ಜಾಲತಾಣಗಳು:ಉದಾಹರಣೆಗಳು Discord, Reddit, Quora ಇನ್ನು ಮುಂತಾದವು
 • ಸಾಮಾಜಿಕ ಬ್ಲಾಗಿಂಗ್ ನೆಟ್‌ವರ್ಕ್‌ಗಳು : Medium, Tumblr, Blog Meets Brand ಮುಂತಾದವು

ಸಾಮಾಜಿಕ ಜಾಲತಾಣ ಪ್ರಮುಖ ಲಕ್ಷಣಗಳು:

1.ಜನರ ಸಾಮಾಜಿಕ ಜಾಲತಾಣ:- ಸಾಮಾಜಿಕ ಜಾಲತಾಣ ಎಂಬುದು ಜನರ ಸಾಮಾಜಿಕ ನೆಟ್‌ವರ್ಕ್ ಆಗಿದೆ, ಪ್ರತಿಯೊಬ್ಬ ವ್ಯಕ್ತಿಯ ಸ್ವಂತ ಆಯ್ಕೆಯ ಇತರ ಬಳಕೆದಾರರೊಂದಿಗೆ ಚಾಟ್ ಮಾಡಬಹುದು. ಪ್ರಪಂಚದಾದ್ಯಂತದ ಜನರ ನೆಟ್‌ವರ್ಕ್ ಬಳಕೆದಾರರನ್ನು ಸರಳ ರೀತಿಯಲ್ಲಿ ಸಂಪರ್ಕಿಸಲು ಸಹಾಯ ಮಾಡುತ್ತದೆ.

2.ಜನರ ನಡುವೆ ಮಾಹಿತಿಗಳ ಹಂಚಿಕೆ  – ನಿಮಗೆ ಗೊತ್ತಿರುವ ಜನರೊಂದಿಗೆ ಸಂಪರ್ಕದಲ್ಲಿದ್ದು ಆಲೋಚನೆ, ಅಭಿಪ್ರಾಯ, ಸುದ್ದಿಗಳು, ಚಿತ್ರಗಳನ್ನು ನೀವು ಹಂಚಿಕೊಳ್ಳಬಹುದು. ಬೇರೊಬ್ಬರ ನೆಟ್‌ವರ್ಕ್‌ನಲ್ಲಿರುವ ಜನರೊಂದಿಗೆ, ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳೊಂದಿಗೆ ನೀವು ಸಂಪರ್ಕಿಸಬಹುದು. ನೀವು ಹೊಸ ಜನರನ್ನು ಮುಖಾಮುಖಿಯಾಗಿ ಬೇಟಿಯಾಗಬೇಕೆಂಬುದಿಲ್ಲ.

3. ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುವ ಜನರಿಗೆ  ಆನ್‌ಲೈನ್

4.ಎಲೆಕ್ಟ್ರಾನಿಕ್ ಸಂವಹನ: –  ಸಾಮಾಜಿಕ ಜಾಲತಾಣ ಎನ್ನುವುದು ಎಲೆಕ್ಟ್ರಾನಿಕ್ ಸಂವಹನದ ಪ್ರಕ್ರಿಯೆಯಾಗಿದೆ ಅದರಲ್ಲಿ ನೀವು ಸಂದೇಶಗಳು, ಟ್ವೀಟ್‌, ಚಾಟ್ , ಇಮೇಲ್‌ಗಳ ಸಹಾಯದಿಂದ ಇತರ ಬಳಕೆದಾರರೊಂದಿಗೆ ಸಂವಹನ ಮಾಡಬಹುದಾಗಿದೆ. 

5.ಲಿಂಕ್‌ಗಳನ್ನು ಹಂಚಿಕೊಳ್ಳುವುದು:-ಸಾಮಾಜಿಕ ಜಾಲತಾಣ ಹೆಚ್ಚು ಜನಪ್ರಿಯವಾಗಲು ಮತ್ತೊಂದು ಕಾರಣ ಬಳಕೆದಾರರು ತಮ್ಮ ಆಯ್ಕೆಯ ಲಿಂಕ್‌ಗಳನ್ನು ಹಂಚಿಕೊಳ್ಳಲು ಅನುಮತಿಸುವುದು.  ಲಿಂಕ್ ತಂತ್ರವನ್ನು ಮಾರಾಟಗಾರರು ಮತ್ತು ಉದ್ಯಮಿಗಳು ವ್ಯಾಪಕವಾಗಿ ಬಳಸುತ್ತಾರೆ.

6.ಸಾಮಾಜಿಕ ಸಂವಹನ  :-  ಸಾಮಾಜಿಕ ಸಂವಹನದಲ್ಲಿ ರಾಜಕಾರಣಿಗಳು ಇಂದು ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ.

7.ಕಂಟೆಂಟ್ , ಕಾಲ್-ಟು-ಆಕ್ಷನ್ ಮೂಲಕ ಅಭಿಪ್ರಾಯ

8.ಹುಡುಕಾಟ ಸೌಲಭ್ಯ  :- ಕಳೆದುಹೋದ ಸ್ನೇಹಿತನನ್ನು ಹುಡುಕಲು, ಕೆಲಸ ಹುಡುಕಲು, ವ್ಯಾಪಾರ ಪಾಲುದಾರರನ್ನು ಹುಡುಕಲು ಸಹಾಯಮಾಡುವುದು ನೆಟ್‌ವರ್ಕಿಂಗ್ ಸೈಟ್‌ಗಳ ಮತ್ತೊಂದು ಆಕರ್ಷಕ ವೈಶಿಷ್ಟ್ಯವಾಗಿದೆ.

9.ರಿಯಲ್ ಟೈಮ್ ಅಪ್‌ಡೇಟ್‌ಗಳು  :– ನೀವು ಎಲ್ಲಿದ್ದೀರಿ,ಹೇಗಿದ್ದಿರಿ,ಏನು ಮಾಡುತ್ತಿದ್ದೀರಿ ಎಂಬುದರ ಕುರಿತು ಇತ್ತೀಚಿನ ಮಾಹಿತಿ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ನಿಮ್ಮ ನೈಜ-ಸಮಯದ ಸ್ಥಿತಿಯನ್ನು ತಿಳಿಯಲು ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

10.ಆನ್‌ಲೈನ್ ಗುರುತನ್ನು ಒದಗಿಸುತ್ತದೆ 

ಸಾಮಾಜಿಕ ಜಾಲತಾಣ ಪ್ರಯೋಜನಗಳು:

 1. ಸಂವಹನವನ್ನುಸುಲಭಗೊಳಿಸಲಾಗಿದೆ: –  ಸಂವಹನದ ದೊಡ್ಡ ವಿಧಾನವೆಂದರೆ ಸಾಮಾಜಿಕ ಜಾಲತಾಣ ನಿಮ್ಮಿಂದ ದೂರವಿರುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರಬಹುದು,ಚಾಟ್ ಮಾಡಬಹುದು ವೀಡಿಯೊ ಕರೆ ಮಾಡಬಹುದು ಇದರಿಂದ ಅವರು ಹತ್ತರವಿದ್ದಾರೆ ಎಂಬ ಭಾವನೆ ಮೂಡುತ್ತದೆ. ದೊಡ್ಡ ವ್ಯವಹಾರಗಳು ,ಮಾರ್ಕೆಟಿಂಗ್ ಅನ್ನು ಸಾಮಾಜಿಕ ಜಾಲತಾಣ ಮೂಲಕ ಮಾಡಲಾಗುತ್ತದೆ. 
 2. ಸ್ನೇಹಿತರೊಂದಿಗೆ ಫೋಟೋಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳಿ:  – ನೀವು ಯಾವುದೇ ಮಾಹಿತಿ, ಚಿತ್ರ, ಫೈಲ್,ವಿಷಯ, ಚಿತ್ರಗಳನ್ನು ನಿಮ್ಮ ಸ್ನೇಹಿತರೊಂದಿಗೆ ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಹಂಚಿಕೊಳ್ಳಬಹುಅಗಿದೆ.
 3. ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುವ ಜನರನ್ನು ಹುಡುಕಿ :- ಒಂದೆ ರೀತಿಯ ಆಸಕ್ತಿ ಹೊಂದಿರುವ ಜನರನ್ನು ಆಧರಿಸಿದ ಅನೇಕ ಗುಂಪುಗಳು, ಸಮುದಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಅಂತಹ ಗುಂಪುಗಳಲ್ಲಿ ನೀವು ಸಹ ಚಾಟ್‌,ಚರ್ಚೆಗಳಲ್ಲಿ ಭಾಗವಹಿಸಬಹುದು.
 4. ವ್ಯಾಪಾರ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ವಿಸ್ತರಣೆ: – ನಿಮ್ಮ ವ್ಯಾಪಾರವನ್ನು ಉತ್ತೇಜಿಸಲು ಮತ್ತು ವಿಸ್ತರಿಸಲು ಸೂಪರ್-ಹಿಟ್ ಸ್ಥಳಗಳಾಗಿವೆ. ನಿಮ್ಮ ವೈಯಕ್ತಿಕ ಖಾತೆಯ ಮೂಲಕ ನಿಮ್ಮ ಉತ್ಪನ್ನಗಳು, ಬ್ರ್ಯಾಂಡ್‌ಗಳು, ಕೊಡುಗೆಗಳು ಇತ್ಯಾದಿಗಳನ್ನು ಪ್ರದರ್ಶಿಸಲು ಸಹಾಯಕವಾಗಿದೆ
 5. ಐಕಾಮರ್ಸ್ ಮತ್ತು ಆನ್‌ಲೈನ್ ವೆಬ್‌ಸೈಟ್‌ಗಳನ್ನು ಉತ್ತೇಜಿಸುತ್ತದೆ
 6. ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ: – ಸಾಮಾಜಿಕ ಜಾಲತಾಣ ಪ್ರತಿಯೊಂದು ವಿಷಯದ ಕುರಿತು ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತವೆ. 
 7. ಅಭಿಪ್ರಾಯಗಳನ್ನು ವ್ಯಕ್ತಪಡಿಸಿ :- ಇತರರು ಪೋಸ್ಟ್ ಮಾಡಿದ ಯಾವುದೇ ಪೋಸ್ಟ್, ಲಿಂಕ್‌ಗಳಿಗೆ ನಿಮ್ಮ ಅಭಿಪ್ರಾಯವನ್ನು ನೀವು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
 8. ವೆಚ್ಚ ಪರಿಣಾಮಕಾರಿ
 9. ಗ್ರಾಹಕರಿಗೆ ಶಿಕ್ಷಣ ನೀಡಿ :
 10. ಸಾಮಾಜಿಕ ಗುರುತು

ಸಾಮಾಜಿಕ ಜಾಲತಾಣ ಅನಾನುಕೂಲಗಳು:

 • ನಕಲಿ ಮತ್ತು ತಪ್ಪಾದ ಮಾಹಿತಿ ಹಂಚಿಕೆಯಾಗುವುದು.
 • ಮುಗ್ಧ ಜನರು ಸುಳ್ಳು ಯೋಜನೆಗಳಿಗೆ ಸುಲಭವಾಗಿ ಬಲಿಯಾಗುವುದು.
 • ಭಾವನಾತ್ಮಕ ಸಂಪರ್ಕದ ಕೊರತೆಯಾಗುವುದು.
 • ಸ್ವಾತಂತ್ರ್ಯದ ದುರುಪಯೋಗವಾಗುವುದು
 • ಹೆಚ್ಚಿದ ಸಂವಹನ ಅಂತರ ಉಂಟಾಗುವುದು.
 • ಸಮಯ, ಶಕ್ತಿ ಮತ್ತು ಹಣದ ವ್ಯರ್ಥವಾಗುವುದು.
 • ಗೌಪ್ಯತೆಯ ಬೆದರಿಕೆಗಳು .
 • ವೆಬ್ ಅಡಿಕ್ಷನ್ಗಳು.
 • ಕೃತಕ ಸಂತೋಷ ಸಿಗುವುದು.

ಸಾಮಾಜಿಕ ಜಾಲತಾಣ ವೈಯಕ್ತಿಕ ಸುರಕ್ಷತೆ:

ಸಮಾಜಿಕ ನೆಟ್‌ವರ್ಕಿಂಗ್ ಸೇವೆಗಳಲ್ಲಿ ಕೆಲವು ರೀತಿಯ ಮಾಹಿತಿಯನ್ನು ಪೋಸ್ಟ್ ಮಾಡುವಾಗ ಎಚ್ಚರವಹಿಸಬೇಕಾಗುತ್ತದೆ.ಅದರಲ್ಲು ನಿಮ್ಮ ವೈಯಕ್ತಿಕ ಜೀವನದ ಪೋಸ್ಟ್ ಗಳನ್ನು ಮಾಡುವಾಗ, ವಿಶೇಷವಾಗಿ ನಿಮ್ಮ ವಿಳಾಸವನ್ನು, ಫೋಟೋಗಳು, ವೈಯಕ್ತಿಕ ವಿವರಗಳನ್ನು ಪೋಸ್ಟ್ ಮಾಡುವಾಗ ಎಚ್ಚರವಹಿಸಿ. ದುರುದ್ದೇಶಪೂರಿತ ವ್ಯಕ್ತಿಗಳು ಇದರಿಂದ ನಿಮ್ಮ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಸಾಮಾಜಿಕ ನೆಟ್ವರ್ಕಿಂಗ್ ಬಳಕೆದಾರರು ಇತರ ಜನರ ಬಗ್ಗೆ ಮಾಹಿತಿಯನ್ನು ಪೋಸ್ಟ್ ಮಾಡುವುದು, ಅರಿವಿಲ್ಲದೆ, ಆ ವ್ಯಕ್ತಿಯ ಗೌಪ್ಯತೆ ಅಥವಾ ಭದ್ರತೆಗೆ ಧಕ್ಕೆ ತರುವಂತಹ ಕಾಮೆಂಟ್ ಮಾಡುವುದು ಅಥವಾ ಫೋಟೋವನ್ನು ಪೋಸ್ಟ್ ಮಾಡುವುದರ ಮೂಲಕ ನೀವು ಇನ್ನೊಬ್ಬರನ್ನು ಅಪಾಯಕ್ಕೆ ಸಿಲುಕಿಸುತ್ತಿರಿ. ಯಾವ ವಿಷಯವನ್ನು ಪೋಸ್ಟ್ ಮಾಡುವ ಮುನ್ನ ಆಲೋಚಿಸಿ ಮಾಡಬೇಕು.

ಉಪಸಂಹಾರ:

ಸಾಮಾಜಿಕ ಜಾಲತಾಣ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಮತ್ತು ಎಲ್ಲಾ ವಿಷಯದ ಬಗ್ಗೆ ಸಲಹೆ ಪಡೆಯಲು, ಮಾಹಿತಿಗಳನ್ನು ತಿಳಿದುಕೊಳ್ಳಲು ಸಹಾಯಕಾರಿಯಾಗಿದೆ. ನಮ್ಮ ಸಂತೋಷವೆಲ್ಲ ಮನೆಯಿಂದ ಹೊರಹೊಗುತ್ತಿದೆ. ಬಿಡುವಿನ ಸಮಯದಲ್ಲಿ ಎಲ್ಲರು ಕೂತು ಮಾತನಾಡುವ ಆ ಕಾಲ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಅಳಿದು ಹೋಗಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕು ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸುವುದು ಒಳ್ಳೆಯದಲ್ಲಾ. ಮಿತಿಯಲ್ಲಿ ಬಳಸಬೇಕು.

FAQ

1. ಸಾಮಾಜಿಕ ಜಾಲತಾಣ ಪ್ರಮುಖ ವಿಧಗಳಾವುವು?

Facebook, LinkedIn, Twitter, WhatsApp

2. ಸಾಮಾಜಿಕ ಜಾಲತಾಣ 2ಪ್ರಮುಖ ಅನಾನುಕೂಲಗಳು?

1.ನಕಲಿ ಮತ್ತು ತಪ್ಪಾದ ಮಾಹಿತಿ ಹಂಚಿಕೆಯಾಗುವುದು
2.ಮುಗ್ಧ ಜನರು ಸುಳ್ಳು ಯೋಜನೆಗಳಿಗೆ ಸುಲಭವಾಗಿ ಬಲಿಯಾಗುವುದು

ಇತರೆ ವಿಷಯಗಳು :

ಸಾಮಾಜಿಕ ಮಾಧ್ಯಮಗಳ ಬಗ್ಗೆ ಪ್ರಬಂಧ

ಇಂಟರ್ನೆಟ್ ಬಳಕೆಗಳ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *