ಭೂಮಿಯ ಚಲನೆಗಳ ಬಗ್ಗೆ ಮಾಹಿತಿ Information About Earth’s Movements Bhumiya Chalnegala Bagge Mahiti in Kannada
ಭೂಮಿಯ ಚಲನೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭೂಮಿಯ ಚಲನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಭೂಮಿಯ ಚಲನೆಗಳು
ಭೂಮಿಯು ಈ ಕೆಳಗಿನ ೨ ರೀತಿಯ ಚಲನೆಗಳನ್ನು ಹೊಂದಿದೆ.
೧. ದೈನಂದಿನ ಚಲನೆ / ಭ್ರಮಣ ಚಲನೆ / ಅಕ್ಷ ಭ್ರಮಣ ( Rotation of the Earth )
ಭೂಮಿಯು ತನ್ನ ಅಕ್ಷದ ಮೇಲೆ ತಾನೆ ಸುತ್ತುವುದನ್ನು ಭೂಮಿಯ ದೈನಂದಿನ ಚಲನೆ ಎನ್ನುತ್ತೇವೆ. ಭೂಮಿಯು ತನ್ನ ಒಂದು ದೈನಂದಿನ ಚಲನವನ್ನು ಪೂರ್ಣಗೊಳಿಸಲು ಗಂಟೆ ೨೩/ ೫೬ ನಿಮಿಷ / ೪ ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.
ಒಂದು ನಾಕ್ಷತ್ರಿಕ ದಿನ / One Sidereal day ಎಂದರೆ ಒಂದು ನಿರ್ದಿಷ್ಟ ರೇಖಾಂಶವು ಒಂದು ನಿರ್ದಿಷ್ಟ ನಕ್ಷತ್ರದ ಕೆಳಗಡೆ ಬಂದು ಮರುದಿನ ಅದೇ ನಿರ್ದಿಷ್ಟ ರೇಖಾಂಶವು ಅದೇ ನಿರ್ದಿಷ್ಟ ನಕ್ಷತ್ರದ ಕೆಳಗಡೆ ನೇರವಾಗಿ ಬರಲು ೨೩ ಗಂಟೆ / ೫೬ ನಿಮಿಷ / ೪ ಸೆಕೆಂಡುಗಳನ್ನು ತೆಗೆದುಕೊಳ್ಳುವುದು ಇದನ್ನು ಒಂದು ನಾಕ್ಷತ್ರಿಕ ದಿನ ಎನ್ನುತ್ತಾರೆ.
ಒಂದು ಸೌರ ದಿನ / One Solar Day ಎಂದರೆ ಒಂದು ಸೂರ್ಯೋದಯ ಮತ್ತು ಮತ್ತೊಂದು ಸೂರ್ಯೋದಯದ ನಡುವಿನ ಅವಧಿಯನ್ನು ಒಂದು ಸೌರ ದಿನ ಎಂದು ಕರೆಯುತ್ತಾರೆ. ಒಂದು ಸೌರ ದಿನದ ಅವಧಿ ೨೪ ಗಂಟೆ ಆಗಿರುತ್ತದೆ.
ಭೂಮಿಯ ದೈನಂದಿನ ಚಲನೆಯ ಪರಿಣಾಮಗಳು
- ಹಗಲು – ರಾತ್ರಿ ಸಂಭವಿಸುವುದು.
- ದಿಕ್ಕುಗಳ ಪರಿಕಲ್ಪನೆ
- ದೈನಂದಿನ ಉಷ್ಣಾಂಶಗಳ ವ್ಯತ್ಯಾಸ
- ವೇಳೆಯ ಪರಿಕಲ್ಪನೆ
- ಸಾಗರ ಅಲೆ
- ಸಾಗರ ಪ್ರವಾಹ
- ಉಬ್ಬರ – ಇಳಿತ
- ಮಾರುತಗಳು
- ಕೋರಿಯಾಲಿಸಸ್ ಶಕ್ತಿ
- ಗುರುತ್ವ ಬಲ
ಭೂಮಿಯ ವಾಲುವಿಕೆ :
- ಭೂಮಿಯು ತನ್ನ ಅಕ್ಷ / AXIS ಕ್ಕೆ ಪೂರ್ವ, East ಕ್ಕೆ ೨೩ ೧/೨ ಡಿಗ್ರಿ ವಾಲಿಕೊಂಡಿದೆ.
- ಭೂಮಿಯು ತನ್ನ ಪಥ / Orbit ಕ್ಕೆ ಪೂರ್ವ, East ಕ್ಕೆ ೬೬ ೧/೨ ವಾಲಿಕೊಂಡಿದೆ.
೨. ಪರಿಭ್ರಮಣ ಚಲನೆ / ವಾರ್ಷಿಕ ಚಲನೆ
ಭೂಮಿಯು ತನ್ನ ಸುತ್ತಲು ಸುತ್ತುತ್ತ ಸೂರ್ಯನನ್ನು ಸುತ್ತುವುದನ್ನು ಪರಿಭ್ರಮಣ ಚಲನೆ ಎನ್ನುವರು. ಭೂಮಿಯು ತನ್ನ ಒಂದು ಪರಿಭ್ರಮಣ ಚಲನೆಯನ್ನು ಪೂರ್ಣಗೊಳಿಸಲು ೩೬೫ ದಿನ ೬ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಭೂಮಿಯ ವಾಲುವಿಕೆ / ಭೂಮಿಯ ಪರಿಭ್ರಮಣ ಚಲನೆಯಿಂದ ಉಂಟಾಗುವ ಪರಿಣಾಮಗಳು
ವಿಷವತ್ಸಾಕ್ರಾಂತಿ ದಿನಗಳು / Equinoxes Days :
- March ೨೧ ಸೆಪ್ಟೆಂಬರ್ ೨೩ ರಂದು ಸಮಭಾಜಕ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ವಿಷವತ್ಸಾಕ್ರಾಂತಿ ದಿನಗಳು ಎನ್ನುವರು.
- ಮಾರ್ಚ್ ೨೧ ರಂದು ಸಮಭಾಜಕ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಮೇಷಸಂಕ್ರಾಂತಿ ಎನ್ನುತ್ತೇವೆ.
- ಸೆಪ್ಟೆಂಬರ್ ೨೩ ರಂದು ಸಮಭಾಜಕ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಮೇಷ ಸಂಕ್ರಾಂತಿ ಎನ್ನುವರು.
- ವಿಷವತ್ಸಾಕ್ರಾಂತಿ ದಿನಗಳೆಂದು ೨ ಗೋಳಾರ್ಧಗಳಲ್ಲಿ ಸಮ ಹಗಲು ಸಮರಾತ್ರಿ ಗಳ ಸಂಭವಿಸುವುದು.
ಕಟಕಾಯನ :
- ಜೂನ್ ೨೧ ರಂದು ಕರ್ಕಾಟಕ ಸಂಕ್ರಾಂತಿ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಕಟಕಾಯನ ಎನ್ನುತ್ತೇವೆ.
- ಕಟಕಾಯನ ದಿನದಂದು ಉತ್ತರಗೋಳಾರ್ಧದಲ್ಲಿ ಅತಿದೊಡ್ಡ ಹಗಲು ಮತ್ತು ಅತಿ ಚಿಕ್ಕರಾತ್ರಿ ಸಂಭವಿಸುವುದು.
- ಮಕರಾಯನ ದಿನದಂದು ದಕ್ಷಿಣ ಗೋಳಾರ್ಧದಲ್ಲಿ ಅತಿ ಚಿಕ್ಕ ಹಗಲು ಮತ್ತು ಅತಿ ದೊಡ್ಡ ರಾತ್ರಿ ಸಂಭವಿಸುವುದು.
ಮಕರಾಯನ :
- ಡಿಸೆಂಬರ್ ೨೨ ರಂದು ಮಕರ ಸಂಕ್ರಾಂತಿ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಮಕರಾಯನ ಎಂದು ಕರೆಯುತ್ತೇವೆ.
- ಮಕರಾಯನ ದಿನದಂದು ದಕ್ಷಿಣ ಗೋಳಾರ್ಧದಲ್ಲಿ ಅತಿ ದೊಡ್ಡ ಹಗಲು ಮತ್ತು ಅತಿ ಚಿಕ್ಕ ರಾತ್ರಿ ಸಂಭವಿಸುವುದು.
- ಮಕರಾಯನ ದಿನದಂದು ಉತ್ತರ ಗೋಳಾರ್ಧದಲ್ಲಿ ಅತಿ ಚಿಕ್ಕ ಹಗಲು ಮತ್ತು ಅತಿ ದೊಡ್ಡ ರಾತ್ರಿ ಸಂಭವಿಸುತ್ತದೆ.
ಋತುಗಳು :
ಋತುಗಳು | ಉತ್ತರ ಗೋಳಾರ್ಧ | ದಕ್ಷಿಣ ಗೋಳಾರ್ಧ |
ಮಾರ್ಚ್ ೨೨ – ಜೂನ್ ೨೦ | ವಸಂತಕಾಲ | ಶರತ್ ಕಾಲ |
ಜೂನ್ ೨೨ – ಸೆಪ್ಟೆಂಬರ್ ೨೨ | ಬೇಸಿಗೆ ಕಾಲ | ಚಳಿಗಾಲ |
ಸೆಪ್ಟೆಂಬರ್ ೨೪ – ಡಿಸೆಂಬರ್ ೨೧ | ಶರತ್ ಕಾಲ | ವಸಂತಕಾಲ |
ಡಿಸೆಂಬರ್ ೨೩ – ಮಾರ್ಚ್ ೨೦ | ಚಳಿಗಾಲ | ಬೇಸಿಗೆ ಕಾಲ |
ಉಚ್ಚಸ್ಥಾನ / ನೀಚಸ್ಥಾನ :
ಉಚ್ಚಸ್ಥಾನ :
- ಭೂಮಿ ಮತ್ತು ಸೂರ್ಯನ ನಡುವಿನ ಗರಿಷ್ಟ ಅಂತರವನ್ನು ಉಚ್ಚಸ್ಥಾನ ಎನ್ನುವರು.
- ಇದು ಜುಲೈ ೧೪ ರಂದು ಸಂಭವಿಸುವುದು.
ನಿಚಸ್ಥಾನ :
- ಸೂರ್ಯ ಮತ್ತು ಭೂಮಿಯ ನಡುವಿನ ಕನಿಷ್ಟ ಅಂತರವನ್ನು ನಿಚಸ್ಥಾನ ಎನ್ನುವರು.
- ಇದು ಜನವರಿ ೩ ರಂದು ಸಂಭವಿಸುತ್ತದೆ.
- ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ ಅವಧಿಯು ದಕ್ಷಿಣ ಗೋಳಾರ್ಧಕ್ಕೆ ಹೋಳಿಸಿದರೆ ೮- ೧೦ ದಿನಗಳು ಹೆಚ್ಚಿರುತ್ತದೆ ಇದಕ್ಕೆ ಕಾರಣ ಉಚ್ಚಸ್ಥಾನ ಮತ್ತು ನಿಚಸ್ಥಾನವಾಗಿದೆ.
FAQ
ಭೂಮಿಯು ತನ್ನ ದೈನಂದಿನ ಚಲನೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ?
೨೩ ಗಂಟೆ / ೫೬ ನಿಮಿಷ / ೪ ಸೆಕೆಂಡು ಸಮಯವನ್ನು ತೆಗೆದುಕೊಳ್ಳುತ್ತದೆ.
ಭೂಮಿಯು ತನ್ನ ಒಂದು ಪರಿಭ್ರಮಣ ಚಲನೆಯನ್ನು ಪೂರ್ಣಗೊಳಿಸಲು ಎಷ್ಟು ಅವಧಿಯನ್ನು ತೆಗೆದುಕೊಳ್ಳುತ್ತದೆ ?
೩೬೫ ದಿನ ೫ ಗಂಟೆ ೪೫ ನಿಮಿಷ ಅಥವಾ ೩೬೫ ದಿನ ೬ ಗಂಟೆಯನ್ನು ತೆಗೆದುಕೊಳ್ಳುತ್ತದೆ.
ಯಾವ ದಿನಗಳಲ್ಲಿ ೨ ಗೋಳಾರ್ಧದಲ್ಲಿ ಸಮ ಹಗಲು ಸಮ ರಾತ್ರಿಗಳ ಸಂಭವಿಸುತ್ತವೆ ?
ವಿಷವತ್ಸಾಕ್ರಾಂತಿ ದಿನಗಳಂದು ಸಮ ಹಗಲು ಸಮ ರಾತ್ರಿಗಳ ಸಂಭವಿಸುತ್ತವೆ.
ಇತರೆ ವಿಷಯಗಳು :
ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ