ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ಬಗ್ಗೆ ಮಾಹಿತಿ | Information About Major Rivers of India and Their Tributaries in Kannada

ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ಬಗ್ಗೆ ಮಾಹಿತಿ Information About Major Rivers of India and Their Tributaries Bharatada Nadigalu Mattu Upanadigala Bagge Mahiti in Kannada

ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ಬಗ್ಗೆ ಮಾಹಿತಿ

Information About Major Rivers of India and Their Tributaries in Kannada
Information About Major Rivers of India and Their Tributaries in Kannada

ಈ ಲೇಖನಿಯಲ್ಲಿ ನದಿಗಳು ಮತ್ತು ಉಪನದಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ನದಿಗಳು ಮತ್ತು ಉಪನದಿಗಳು

ನದಿ ಉಗಮ ಸ್ಥಾನದಿಂದ ಸಮುದ್ರವನ್ನು ಸೇರುವ ವರೆಗಿನ ಸಿಹಿ ನೀರಿನ ಜಲಧಾರೆಗೆ ನದಿ ಎಂದು ಕರೆಯುವರು. ನದಿ ಉಗಮವಾಗುವ ಸ್ಥಳಕ್ಕೆ ನದಿಯ ಮೂಲ ಎಂದು ಕರೆಯುವರು. ನದಿಯು ಸಮುದ್ರವನ್ನು ಸೇರುವ ಅಂತ್ಯಭಾಗಕ್ಕೆ ನದಿಯ ಮುಖ ಎನ್ನುವರು. ನದಿಯು ನದಿಯ ಮೂಲದಿಂದ ಅಂತ್ಯಕ್ಕೆ ವರೆಗಿನ ನದಿಯು ಹರಿಯುವ ಮಾರ್ಗಕ್ಕೆ ನದಿಯ ಪಾತ್ರ ಎನ್ನುವರು. ಒಂದು ಪ್ರಮುಖವಾದ ನದಿಗೆ ಬಂದು ಸೇರುವ ಅಥವಾ ಅದರಿಂದ ವಿಘಟನೆಯಾಗುವ ಚಿಕ್ಕ ಪುಟ್ಟ ನದಿಗಳಿಗೆ ನದಿಯ ಉಪ ನದಿಗಳು ಎನ್ನುವರು.

ಉತ್ತರ ಭಾರತದ ನದಿಗಳು

ಉತ್ತರ ಭಾರದ ನದಿಯನ್ನು ೩ ಪ್ರಕಾರಗಳವಾಗಿ ವಿಂಗಡಿಸಲಾಗಿದೆ.

೧ ಬ್ರಹ್ಮಪುತ್ರ ನದಿ

ಇದನ್ನು ಟಿಬೆಟಿನಲ್ಲಿ – ಸ್ಯಾಂಗಪೋ ಎಂದು, ಚೀನಾದಲ್ಲಿ ಯಾರ್ಲೂಂಗ್‌ ಜಾಗ್ಬೋ ಜಿಯಾ, ಬಾಂಗ್ಲಾದೇಶದಲ್ಲಿ ಜುಮುನಾ ಎಂದು ಕರೆಯುವರು.

ಉಗಮ – ಟಿಬೆಟಿನ ಕೈಲಾಸ ಪರ್ವತ ಚೆಮು – ಯಂಗ್ – ಡಂಗ್‌ ಎಂಬಲ್ಲಿ ಉಗಮವಾಗುವುದು.

ಉದ್ದ – ೨೯೦೦ ಕಿ. ಮೀ, ಭಾರತದಲ್ಲಿ ೮೮೫ ಕಿ. ಮೀ

ಜಲಾನಯನ ಕ್ಷೇತ್ರ – ೫,೮೦,೦೦೦ ಚ. ಕಿ. ಮೀ, ಭಾರತದಲ್ಲಿ ೨,೮೫,೩೦೦ ಚ. ಕಿ. ಮೀ.

ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಬಾಂಗ್ಲಾದೇಶವನ್ನು ಸಂಧಿಸಿ ಪದ್ಮಾ ಎಂಬ ಹೆಸರಿನಿಂದ ಹರಿಯುತ್ತದೆ.

ಬ್ರಹ್ಮ ಪುತ್ರ ನದಿಯು ಅತ್ಯಂತ ದೊಡ್ಡದಾದ ಅಂತರ ದ್ವೀಪ ಮಜುಲಿಯನ್ನು ನಿರ್ಮಿಸಿದೆ.

ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದನದಿ ಮುಖಜ ಭೂಮಿ ಸುಂದರ್‌ ಬನ್ಸ ಅನ್ನು ನಿರ್ಮಿಸಿದೆ.

ಇದು ಪಶ್ಚಿಮ ಬಂಗಾಳದಲ್ಲಿದೆ. ಇದು ತ್ರಿಕೋನ ಆಕಾರದಲ್ಲಿದೆ.

ಉಪನದಿಗಳು

ದಿಹಾಂಗ, ಮೊರಮಾನಸ, ದಬಾಂಗ, ಗಂಗಾಧರ್‌, ಸುಧಸಿರಿ, ಕಾಮೆಂಗ, ಸನಕೋಶ, ಜಿಯಾಬೆರೆಲಿ, ಲೊಂಕಿತಾ, ಮೇಘನಾ, ಮಾನಸ ಮುಂತಾದವು.

ತೀಸ್ತಾ ನದಿಯು ಬ್ರಹ್ಮಪುತ್ರ ನದಿಯ ಬಲದಂಡೆಯ ಉಪನದಿಯಾಗಿದ್ದು ಇದಕ್ಕೆ ಅಸ್ಸಾಂದ ಕಣ್ಣೀರಿನ ನದಿ ಎನ್ನುವರು.

ಈ ನದಿಯು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿಯುತ್ತವೆ.

೨. ಸಿಂಧೂ ನದಿ

ಉಗಮ – ಟಿಬೆಟಿನ್‌ ಕೈಲಾಸ ಪರ್ವತ

ಉದ್ದ -೨೮೮೦ ಕಿ. ಮೀ, ಭಾರತದಲ್ಲಿ ಉದ್ದ – ೭೦೯ ಕಿ. ಮೀ.

ಜಲಾನಯನ ಕ್ಷೇತ್ರ – ೧,೧೭,೮೬೪ ಚ. ಕಿ. ಮೀ

ಇದು ವಾಯುವ್ಯ ಭಾರತದ ಅತಿ ಪ್ರಮುಖವಾದ ನದಿ.

ಇದು ಪಾಕಿಸ್ಥಾನದ ಕರಾಚಿ ಬಳಿ ಅರಬ್ಬಿ ಸಮುದ್ರ ಸೇರುವುದು.

ಇದನ್ನು ಟಿಬಟಿನಲ್ಲಿ ಸಿಂಗ್ಗೆ ಕಬಾಬ್‌ ಎಂದು ಕರೆಯುವರು.

ಇದು ಜಮ್ಮು ಮತ್ತುಕಾಶ್ಮೀರ ಮತ್ತು ಪಂಜಾಬ್‌ ಗಳ ಮೂಲಕ ಹರಿದು ಪಾಕಿಸ್ಥಾನದ ಕರಾಚಿ ಬಳಿ ಅರಬ್ಬಿ ಸಮುದ್ರ ಸೇರುವುದು.

ಉಪನದಿಗಳು

ಜೀಲಂ :

ಉಗಮ – ಜಮ್ಮ ಕಾಶ್ಮೀರದ ಶೇಷನಾಗ ಅಥವಾ ವೇರಿನಾಗ

ಉದ್ದ – ೪೦೦ ಕಿ. ಮೀ

ಜಲಾನಯನ ಕ್ಷೇತ್ರ – ೨೮, ೪೯೦ ಚ. ಕಿ. ಮೀ

ಪಾಕಿಸ್ತಾನದ ಟ್ರಮೂವಿನಲ್ಲಿ ಚಿನಾಬ್‌ ನದಿಯನ್ನು ಸೇರುವುದು.

ಚಿನಾಬ :

ಉಗಮ – ಹಿಮಾಚಲ ಪ್ರದೇಶದ ಚಂದ್ರಭಾಗ

ಉದ್ದ – ೧೧೮೦ ಕಿ. ಮೀ

ಜಲಾನಯನ ಕ್ಷೇತ್ರ – ೨೬,೭೫೫

ಇದು ಪಾಕಿಸ್ತಾನದ ಪಂಚನಾಡಿನ ಬಳಿ ಸಟ್ಲೆಜ ನದಿಯನ್ನು ಸೇರುವುದು.

ಇದಿ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಪಂಜಾಬಗಳ ಮೂಲಕ ಹರಿಯುತ್ತದೆ.

ರಾವಿ ನದಿ :

ಉಗಮ – ಹಿಮಾಚಲ ಪ್ರದೇಶದ ಲಾಹೂಲಸ್ಪತಿ ಕಣಿವೆಯ ಸಮೀಪ ರೋಟಾಂಗ್‌ ಕಣಿವೆ

ಉದ್ದ – ೭೨೫ ಕಿ. ಮೀ

ಜಲಾನಯನದ ಕ್ಷೇತ್ರ – ೫೯೫೭ ಚ. ಕಿ. ಮೀ

ಇದು ಪಾಕಿಸ್ತಾನದ ರಂಗಪುರ ಬಳಿ ಚಿನಾಬ ನದಿಯನ್ನು ಸೇರುವುದು.

ಇದು ಪುಲು ಮತ್ತು ಕಾಂಗ್ರಾ ಬೆಟ್ಟಗಳಲ್ಲಿಯೂ ಹರಿಯುತ್ತದೆ.

ಬಿಯಾಸ್‌ :

ಉಗಮ – ಹಿಮಾಚಲ ಪ್ರದೇಶದ ಪುಲು ಮತ್ತು ಕಾಂಗ್ರಾ ಬೆಟ್ಟಗಳ ರೊಟಾಂಗ್‌ ಕಣಿವೆಯ ಬಿಯಾಸ್‌ ಕುಂಡ

ಉದ್ದ – ೪೬೦ ಕಿ. ಮೀ

ಜಲಾನಯನ ಕ್ಷೇತ್ರ -೨೫,೯೦೦ ಚ. ಕಿ. ಮೀ

ಇದು ಹಿಮಾಚಲ ಪ್ರದೇಶದ ಪಂಜಾಬಗಳ ಮೂಲಕ ಹರಿದು ಪಾಕಿಸ್ತಾನದ ಹರಿಕೆಯ ಬಳಿ ಸಟ್ಲೇಜ್‌ ನದಿಯನ್ನು ಸೇರುವುದು.

ಸಟ್ಲೇಜ ನದಿ :

ಉಗಮ – ಟಿಬೆಟಿನ ರಾಕಾಸ ಸರೋವರ

ಉದ್ದ – ೧೦೫೦ ಕಿ. ಮೀ

ಜಲಾನಯನ ಕ್ಷೇತ್ರ – ೨೪೦೮೭ ಚ. ಕಿ. ಮೀ

ಭಾರತದ ಗಡಿಯಾಚೆ ಉಗಮ ಹೊಂದಿ ಭಾರತದಲ್ಲಿ ಹರಿಯುವ ಸಿಂಧೂ ನದಿಯ ಉಪನದಿ ಸಟ್ಲೆಜ್‌

ಇದು ಹಿಮಾಚಲ ಪ್ರದೇಶ, ಪಂಜಾಬದ ಮೂಲಕ ಹರಿದು ಪಾಕಿಸ್ತಾನದ ಪಂಚನಾಡಿನ ಬಳಿ ಚೀನಾಬ್‌ ನದಿಯನ್ನು ಸೇರುವುದು.

೩. ಗಂಗಾ ನದಿ

ಉಗಮ – ಟಿಬೆಟಿನ ಕೈಲಾಸ, ಪರ್ವತ ಮತ್ತು ಉತ್ತರ ಖಂಡದ ಮಧ್ಯೆ ಇರುವ ಗಂಗೋತ್ರಿಯಿಂದ ೨೮ ಕಿ. ಮೀ ದೂರದಲ್ಲಿರುವ ಗೋಮುಖ.

ಉದ್ದ – ೨೪೬೫ ಕಿ. ಮೀ

ಭಾರತದಲ್ಲಿ ಉದ್ದ – ೨೦೭೧ ಕಿ. ಮೀ

ಜಲಾನಯನ ಕ್ಷೇತ್ರ – ೯,೫೧, ೬೦೦ ಚ. ಕಿ. ಮೀ

ಭಾರತದ ಜಲಾನಯನ ಕ್ಷೇತ್ರ ೯,೫೧,೬೦೦ ಚ. ಕಿ. ಮೀ

ಭಾರತದ ಜಲಾನಯನ ಕ್ಷೇತ್ರ – ೫,೦೦,೦೦೦ ಚ. ಕಿ. ಮೀ

ಗಂಗಾನದಿ ಮೂಲಗಳು – ಭಾಗೀರಥಿ ಮತ್ತು ಅಲಕನಂದ ಇವುಗಳು ದೇವ ಪ್ರಯಾಗದಲ್ಲಿ ಸೇರುತ್ತದೆ.

ಇದು ಉತ್ತರಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಪಶ್ಚಿಮ ಬಂಗಾಳದಲ್ಲಿ ಹರಿಯುತ್ತವೆ.

ಉಪನದಿಗಳು

ಯಮುನಾ ನದಿ :

ಉಗಮ – ಉತ್ತರ ಪ್ರದೇಶದ ತೆಹರಿ ಗಡವಾಲ ಜಿಲ್ಲೆಯ ಯಮುನೋತ್ತಿ ಎಂಬಲ್ಲಿ ಉಗಮವಾಗುವುದು.

ಉದ್ದ – ೧೩೬೦ ಕಿ. ಮೀ

ಜಲಾನಯನ ಕ್ಷೇತ್ರ – ೩,೭೧,೮೫೧ ಚ. ಕಿ. ಮೀ

ಉಪನದಿ ಚಂಚಲ ಬೆಟ್ಟಾ ಮುಂತಾದವುಗಳು.

ಇದು ಅಲಹಾಬಾದ ಬಳಿ ಗಂಗಾ ನದಿಯನ್ನು ಸೇರುವುದು.

ಇದು ಉತ್ತರ ಪ್ರದೇಶ, ಉತ್ತರ ಖಂಡ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿಯಲ್ಲಿ ವಿಸ್ತರಿಸಿದೆ.

ಗಂಗಾ ನದಿ ಉಪನದಿಗಳಲ್ಲಿ ಅತೀ ಉದ್ದವಾದ ನದಿಯಾಗಿದೆ.

ಘಗ್ಗರ್‌ ನದಿ :

ಉಗಮ – ಟಿಬೆಟಿನ್‌ ಗುರ್ಲಾ ಮಂದಾದ ಶಿಖರದಲ್ಲಿ ಉಗಮವನ್ನು ಹೊಂದಿದೆ.

ಉದ್ದ ೧೦೮೦ ಕಿ. ಮೀ

ಜಲಾನಯನ ಕ್ಷೇತ್ರ – ೧,೨೭,೫೦೦ ಚ. ಕಿ. ಮೀ

ಇದು ಬಿಹಾರದ ಚಪ್ರಾ ಬಳಿ ಗಂಗಾ ನದಿಯನ್ನು ಸೇರುವುದು.

ಇದು ಹಿಮಾಚಲ ಪ್ರದೇಶ ಹರಿಯಾಣ, ಬಿಹಾರದಲ್ಲಿ ವಿಸ್ತರಿಸಿದೆ.

ಕೋಸಿ ನದಿ :

ಉಗಮ – ಟಿಬೆಟಿನ್‌ ಶೇಷಪಗ್ಮ

ಉದ್ದ – ೭೩೦ ಕಿ. ಮೀ

ಜಲಾನಯನ ಕ್ಷೇತ್ರ – ೨೧೫೦೦ ಚ. ಕಿ. ಮೀ

ಬಿಹಾರದ ಬಾಗಲ್ಪುರ ಎಂಬಲ್ಲಿ ಗಂಗಾ ನದಿಯನ್ನು ಸೇರುವದು.

ಈ ನದಿಗೆ ಬಿಹಾರದ ಕಣ್ಣಿರಿನ ನದಿ ಎನ್ನುವರು.

ದಾಮೋದರ ನದಿ :

ಉಗಮ – ಛೋಟಾನಾಗಪುರ ಪ್ರಸ್ಥಭೂಮಿ ಥೋರಿ

ಉದ್ದ – ೫೪೧ ಕಿ. ಮೀ

ಜಲಾನಯನ ಕ್ಷೇತ್ರ – ೨೨೦೦ ಚ. ಕಿ. ಮೀ

ಇದಕ್ಕೆ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂತಲೂ ಕರೆಯುವರು.

FAQ

ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಯಾವುದು ?

ದಾಮೋದರ

ಬಿಹಾರದ ಕಣ್ಣೀರಿನ ನದಿ ಯಾವುದು ?

ಕೋಸಿ

ಇತರೆ ವಿಷಯಗಳು :

ಮಳೆಯ ಬಗ್ಗೆ ಮಾಹಿತಿ

ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *