ಭೂಮಿಯ ಚಲನೆಗಳ ಬಗ್ಗೆ ಮಾಹಿತಿ | Information About Earth’s Movements in Kannada

ಭೂಮಿಯ ಚಲನೆಗಳ ಬಗ್ಗೆ ಮಾಹಿತಿ Information About Earth’s Movements Bhumiya Chalnegala Bagge Mahiti in Kannada

ಭೂಮಿಯ ಚಲನೆಗಳ ಬಗ್ಗೆ ಮಾಹಿತಿ

Information About Earth's Movements in Kannada
Information About Earth’s Movements in Kannada

ಈ ಲೇಖನಿಯಲ್ಲಿ ಭೂಮಿಯ ಚಲನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭೂಮಿಯ ಚಲನೆಗಳು

ಭೂಮಿಯು ಈ ಕೆಳಗಿನ ೨ ರೀತಿಯ ಚಲನೆಗಳನ್ನು ಹೊಂದಿದೆ.

೧. ದೈನಂದಿನ ಚಲನೆ / ಭ್ರಮಣ ಚಲನೆ / ಅಕ್ಷ ಭ್ರಮಣ ( Rotation of the Earth )

ಭೂಮಿಯು ತನ್ನ ಅಕ್ಷದ ಮೇಲೆ ತಾನೆ ಸುತ್ತುವುದನ್ನು ಭೂಮಿಯ ದೈನಂದಿನ ಚಲನೆ ಎನ್ನುತ್ತೇವೆ. ಭೂಮಿಯು ತನ್ನ ಒಂದು ದೈನಂದಿನ ಚಲನವನ್ನು ಪೂರ್ಣಗೊಳಿಸಲು ಗಂಟೆ ೨೩/ ೫೬ ನಿಮಿಷ / ೪ ಸೆಕೆಂಡ್‌ ಗಳನ್ನು ತೆಗೆದುಕೊಳ್ಳುತ್ತದೆ.

ಒಂದು ನಾಕ್ಷತ್ರಿಕ ದಿನ / One Sidereal day ಎಂದರೆ ಒಂದು ನಿರ್ದಿಷ್ಟ ರೇಖಾಂಶವು ಒಂದು ನಿರ್ದಿಷ್ಟ ನಕ್ಷತ್ರದ ಕೆಳಗಡೆ ಬಂದು ಮರುದಿನ ಅದೇ ನಿರ್ದಿಷ್ಟ ರೇಖಾಂಶವು ಅದೇ ನಿರ್ದಿಷ್ಟ ನಕ್ಷತ್ರದ ಕೆಳಗಡೆ ನೇರವಾಗಿ ಬರಲು ೨೩ ಗಂಟೆ / ೫೬ ನಿಮಿಷ / ೪ ಸೆಕೆಂಡುಗಳನ್ನು ತೆಗೆದುಕೊಳ್ಳುವುದು ಇದನ್ನು ಒಂದು ನಾಕ್ಷತ್ರಿಕ ದಿನ ಎನ್ನುತ್ತಾರೆ.

ಒಂದು ಸೌರ ದಿನ / One Solar Day ಎಂದರೆ ಒಂದು ಸೂರ್ಯೋದಯ ಮತ್ತು ಮತ್ತೊಂದು ಸೂರ್ಯೋದಯದ ನಡುವಿನ ಅವಧಿಯನ್ನು ಒಂದು ಸೌರ ದಿನ ಎಂದು ಕರೆಯುತ್ತಾರೆ. ಒಂದು ಸೌರ ದಿನದ ಅವಧಿ ೨೪ ಗಂಟೆ ಆಗಿರುತ್ತದೆ.

ಭೂಮಿಯ ದೈನಂದಿನ ಚಲನೆಯ ಪರಿಣಾಮಗಳು

 • ಹಗಲು – ರಾತ್ರಿ ಸಂಭವಿಸುವುದು.
 • ದಿಕ್ಕುಗಳ ಪರಿಕಲ್ಪನೆ
 • ದೈನಂದಿನ ಉಷ್ಣಾಂಶಗಳ ವ್ಯತ್ಯಾಸ
 • ವೇಳೆಯ ಪರಿಕಲ್ಪನೆ
 • ಸಾಗರ ಅಲೆ
 • ಸಾಗರ ಪ್ರವಾಹ
 • ಉಬ್ಬರ – ಇಳಿತ
 • ಮಾರುತಗಳು
 • ಕೋರಿಯಾಲಿಸಸ್‌ ಶಕ್ತಿ
 • ಗುರುತ್ವ ಬಲ

ಭೂಮಿಯ ವಾಲುವಿಕೆ :

 • ಭೂಮಿಯು ತನ್ನ ಅಕ್ಷ / AXIS ಕ್ಕೆ ಪೂರ್ವ, East ಕ್ಕೆ ೨೩ ೧/೨ ಡಿಗ್ರಿ ವಾಲಿಕೊಂಡಿದೆ.
 • ಭೂಮಿಯು ತನ್ನ ಪಥ / Orbit ಕ್ಕೆ ಪೂರ್ವ, East ಕ್ಕೆ ೬೬ ೧/೨ ವಾಲಿಕೊಂಡಿದೆ.

೨. ಪರಿಭ್ರಮಣ ಚಲನೆ / ವಾರ್ಷಿಕ ಚಲನೆ

ಭೂಮಿಯು ತನ್ನ ಸುತ್ತಲು ಸುತ್ತುತ್ತ ಸೂರ್ಯನನ್ನು ಸುತ್ತುವುದನ್ನು ಪರಿಭ್ರಮಣ ಚಲನೆ ಎನ್ನುವರು. ಭೂಮಿಯು ತನ್ನ ಒಂದು ಪರಿಭ್ರಮಣ ಚಲನೆಯನ್ನು ಪೂರ್ಣಗೊಳಿಸಲು ೩೬೫ ದಿನ ೬ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಭೂಮಿಯ ವಾಲುವಿಕೆ / ಭೂಮಿಯ ಪರಿಭ್ರಮಣ ಚಲನೆಯಿಂದ ಉಂಟಾಗುವ ಪರಿಣಾಮಗಳು

ವಿಷವತ್ಸಾಕ್ರಾಂತಿ ದಿನಗಳು / Equinoxes Days :

 • March ೨೧ ಸೆಪ್ಟೆಂಬರ್‌ ೨೩ ರಂದು ಸಮಭಾಜಕ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ವಿಷವತ್ಸಾಕ್ರಾಂತಿ ದಿನಗಳು ಎನ್ನುವರು.
 • ಮಾರ್ಚ್‌ ೨೧ ರಂದು ಸಮಭಾಜಕ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಮೇಷಸಂಕ್ರಾಂತಿ ಎನ್ನುತ್ತೇವೆ.
 • ಸೆಪ್ಟೆಂಬರ್‌ ೨೩ ರಂದು ಸಮಭಾಜಕ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಮೇಷ ಸಂಕ್ರಾಂತಿ ಎನ್ನುವರು.
 • ವಿಷವತ್ಸಾಕ್ರಾಂತಿ ದಿನಗಳೆಂದು ೨ ಗೋಳಾರ್ಧಗಳಲ್ಲಿ ಸಮ ಹಗಲು ಸಮರಾತ್ರಿ ಗಳ ಸಂಭವಿಸುವುದು.

ಕಟಕಾಯನ :

 • ಜೂನ್‌ ೨೧ ರಂದು ಕರ್ಕಾಟಕ ಸಂಕ್ರಾಂತಿ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಕಟಕಾಯನ ಎನ್ನುತ್ತೇವೆ.
 • ಕಟಕಾಯನ ದಿನದಂದು ಉತ್ತರಗೋಳಾರ್ಧದಲ್ಲಿ ಅತಿದೊಡ್ಡ ಹಗಲು ಮತ್ತು ಅತಿ ಚಿಕ್ಕರಾತ್ರಿ ಸಂಭವಿಸುವುದು.
 • ಮಕರಾಯನ ದಿನದಂದು ದಕ್ಷಿಣ ಗೋಳಾರ್ಧದಲ್ಲಿ ಅತಿ ಚಿಕ್ಕ ಹಗಲು ಮತ್ತು ಅತಿ ದೊಡ್ಡ ರಾತ್ರಿ ಸಂಭವಿಸುವುದು.

ಮಕರಾಯನ :

 • ಡಿಸೆಂಬರ್‌ ೨೨ ರಂದು ಮಕರ ಸಂಕ್ರಾಂತಿ ವೃತ್ತವು ಸೂರ್ಯನ ಕೆಳಗಡೆ ನೇರವಾಗಿ ಬರುವುದನ್ನು ಮಕರಾಯನ ಎಂದು ಕರೆಯುತ್ತೇವೆ.
 • ಮಕರಾಯನ ದಿನದಂದು ದಕ್ಷಿಣ ಗೋಳಾರ್ಧದಲ್ಲಿ ಅತಿ ದೊಡ್ಡ ಹಗಲು ಮತ್ತು ಅತಿ ಚಿಕ್ಕ ರಾತ್ರಿ ಸಂಭವಿಸುವುದು.
 • ಮಕರಾಯನ ದಿನದಂದು ಉತ್ತರ ಗೋಳಾರ್ಧದಲ್ಲಿ ಅತಿ ಚಿಕ್ಕ ಹಗಲು ಮತ್ತು ಅತಿ ದೊಡ್ಡ ರಾತ್ರಿ ಸಂಭವಿಸುತ್ತದೆ.

ಋತುಗಳು :

ಋತುಗಳುಉತ್ತರ ಗೋಳಾರ್ಧದಕ್ಷಿಣ ಗೋಳಾರ್ಧ
ಮಾರ್ಚ್ ೨೨ – ಜೂನ್‌ ೨೦ವಸಂತಕಾಲ ಶರತ್‌ ಕಾಲ
ಜೂನ್‌ ೨೨ – ಸೆಪ್ಟೆಂಬರ್‌ ೨೨ಬೇಸಿಗೆ ಕಾಲಚಳಿಗಾಲ
ಸೆಪ್ಟೆಂಬರ್‌ ೨೪ – ಡಿಸೆಂಬರ್‌ ೨೧ ಶರತ್‌ ಕಾಲವಸಂತಕಾಲ
ಡಿಸೆಂಬರ್‌ ೨೩ – ಮಾರ್ಚ್‌ ೨೦ಚಳಿಗಾಲಬೇಸಿಗೆ ಕಾಲ
ಋತುಗಳು

ಉಚ್ಚಸ್ಥಾನ / ನೀಚಸ್ಥಾನ :

ಉಚ್ಚಸ್ಥಾನ :

 • ಭೂಮಿ ಮತ್ತು ಸೂರ್ಯನ ನಡುವಿನ ಗರಿಷ್ಟ ಅಂತರವನ್ನು ಉಚ್ಚಸ್ಥಾನ ಎನ್ನುವರು.
 • ಇದು ಜುಲೈ ೧೪ ರಂದು ಸಂಭವಿಸುವುದು.

ನಿಚಸ್ಥಾನ :

 • ಸೂರ್ಯ ಮತ್ತು ಭೂಮಿಯ ನಡುವಿನ ಕನಿಷ್ಟ ಅಂತರವನ್ನು ನಿಚಸ್ಥಾನ ಎನ್ನುವರು.
 • ಇದು ಜನವರಿ ೩ ರಂದು ಸಂಭವಿಸುತ್ತದೆ.
 • ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ ಅವಧಿಯು ದಕ್ಷಿಣ ಗೋಳಾರ್ಧಕ್ಕೆ ಹೋಳಿಸಿದರೆ ೮- ೧೦ ದಿನಗಳು ಹೆಚ್ಚಿರುತ್ತದೆ ಇದಕ್ಕೆ ಕಾರಣ ಉಚ್ಚಸ್ಥಾನ ಮತ್ತು ನಿಚಸ್ಥಾನವಾಗಿದೆ.

FAQ

ಭೂಮಿಯು ತನ್ನ ದೈನಂದಿನ ಚಲನೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ?

೨೩ ಗಂಟೆ / ೫೬ ನಿಮಿಷ / ೪ ಸೆಕೆಂಡು ಸಮಯವನ್ನು ತೆಗೆದುಕೊಳ್ಳುತ್ತದೆ.

ಭೂಮಿಯು ತನ್ನ ಒಂದು ಪರಿಭ್ರಮಣ ಚಲನೆಯನ್ನು ಪೂರ್ಣಗೊಳಿಸಲು ಎಷ್ಟು ಅವಧಿಯನ್ನು ತೆಗೆದುಕೊಳ್ಳುತ್ತದೆ ?

೩೬೫ ದಿನ ೫ ಗಂಟೆ ೪೫ ನಿಮಿಷ ಅಥವಾ ೩೬೫ ದಿನ ೬ ಗಂಟೆಯನ್ನು ತೆಗೆದುಕೊಳ್ಳುತ್ತದೆ.

ಯಾವ ದಿನಗಳಲ್ಲಿ ೨ ಗೋಳಾರ್ಧದಲ್ಲಿ ಸಮ ಹಗಲು ಸಮ ರಾತ್ರಿಗಳ ಸಂಭವಿಸುತ್ತವೆ ?

ವಿಷವತ್ಸಾಕ್ರಾಂತಿ ದಿನಗಳಂದು ಸಮ ಹಗಲು ಸಮ ರಾತ್ರಿಗಳ ಸಂಭವಿಸುತ್ತವೆ.

ಇತರೆ ವಿಷಯಗಳು :

ವಾಯು ಮಾಲಿನ್ಯ ಬಗ್ಗೆ ಪ್ರಬಂಧ

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *