ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ Essay on Independence Day Swatantra Dinacharane Bagge Prabandha in Kannada
ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಈ ದಿನವು ಭಾರತೀಯರಿಗೆ ಅತಿ ಮುಖ್ಯವಾದುದ್ದಾಗಿದೆ. ಸ್ವಾತಂತ್ರ ಸಿಕ್ಕ ಸಂತೋಷಕ್ಕೆ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿ, ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಕಾರ್ಯಕ್ರಮವು, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಇದರಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ತಿಳಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ನೆನಪಿಸಲಾಗುತ್ತದೆ.
ವಿಷಯ ವಿವರಣೆ
ಭಾರತದ ಸ್ವಾತಂತ್ರ್ಯ ದಿನಾಚರಣೆ ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ, ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯು ಹಳೆಯದನ್ನು ಮರೆತು ಹೊಸದನ್ನು ಪ್ರಾರಂಭಿಸುವುದಾಗಿದೆ. ನಮ್ಮ ದೇಶವು ದುರಾದೃಷ್ಟದ ಕಾಲವನ್ನು ಮುಗಿಸಿ, ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ. ಭಾರತವು ವಿಶಾಲವಾದ ದೇಶವಾಗಿದ್ದು, ಅದರೊಳಗೆ ವಿವಿಧ ಧರ್ಮದ ಜನರು ವಾಸಿಸುತ್ತಿದ್ದಾರೆ, ವಿವಿಧ ಜಾತಿಗಳ ಜನರು ಇದ್ದರೂ, ಇಲ್ಲಿ ಎಲ್ಲಾ ಜನರು ಒಂದೇ ಸಂಸ್ಕೃತಿಯನ್ನು ಅನುಸರಿಸುತ್ತಾರೆ, ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರು ಆಗಸ್ಟ್ 15 ನ್ನು ರಾಷ್ಟ್ರೀಯ ಹಬ್ಬವಾಗಿ, ಇದೊಂದು ಶುಭಸಂದರ್ಭವೆಂದು ಎಲ್ಲರು ಒಟ್ಟಿಗೆ ವಿಜೃಂಭಣೆಯಿಂದ ಆಚರಿಸುತ್ತಾರೆ.
ಸ್ವಾತಂತ್ರ್ಯ ಹೋರಾಟಗಾರ ಪಾತ್ರ
ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನವಿಲ್ಲದೆ ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲ್ಲಿ. ಭಗತ್ ಸಿಂಗ್, ಝಾನ್ಸಿಯ ರಾಣಿ, ಚಂದ್ರಶೇಖರ್ ಆಜಾದ್, ಸುಭಾಸ್ ಚಂದ್ರ ಬೋಸ್, ಮೋಹನ್ ದಾಸ್ ಕರಮಚಂದ್ ಗಾಂಧಿ, ಜವಾಹರಲಾಲ್ ನೆಹರು, ರಾಮ್ ಪ್ರಸಾದ್ ಬಿಸ್ಮಿಲ್, ಮತ್ತು ಅಶ್ಫಾಕುಲ್ಲಾ ಖಾನ್ ಮುಂತಾದವರು ಗಮನಾರ್ಹ ಹೆಸರುಗಳು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹಲವಾರು ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ. ಸಾವಿತ್ರಿಬಾಯಿ ಫುಲೆ, ಮಹಾದೇವಿ ವರ್ಮಾ, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ರಾಣಿ ಲಕ್ಷ್ಮೀಬಾಯಿ ಮತ್ತು ಬಸಂತಿ ದೇವಿ ನೆನಪಿಡುವ ಕೆಲವು ಪ್ರಮುಖ ಹೆಸರುಗಳು. ಈ ಮಹಿಳೆಯರು ಅನೇಕ ಇತರರೊಂದಿಗೆ ಭಾರತವನ್ನು ಅದರ ಸ್ವಾತಂತ್ರ್ಯದ ಕಡೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಹಲವರು ಕೂಡ ಭಾರತದ ಸ್ವಾತಂತ್ಯ್ರಕ್ಕೆ ತಮ್ಮ ಪಾತ್ರವನ್ನು ವಹಿಸಿದ್ದಾರೆ.
ಸ್ವಾತಂತ್ರ ದಿನದ ಆಚರಣೆ
ಸ್ವಾತಂತ್ರ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಪರಿಗಣಿಸಿ, ಆಚರಿಸಲಾಗಿದೆ. ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ದಿನವು ಪ್ರತಿಯೊಬ್ಬ ಭಾರತೀಯನಿಗೆ ಬಹಳ ಮುಖ್ಯವಾಗಿದೆ. ನಾವು ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ಹಬ್ಬವೆಂದು ಪರಿಗಣಿಸುತ್ತೇವೆ. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸುವುದಾಗಿದೆ. ಈ ದಿನ ಇಡೀ ದೇಶದಲ್ಲಿ ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಾಗು ಶಾಲಾ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಆಚರಿಸುತ್ತಾರೆ. ರಾಷ್ಟ್ರದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ, ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವುದು. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿದ ನಂತರ ರಾಷ್ಟ್ರವನ್ನು ಕುರಿತು ಭಾಷಣವನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.
ಉಪಸಂಹಾರ
ಭಾರತೀಯ ಸ್ವಾತಂತ್ರ ಹೋರಾಟಗಾರರ ಆದರ್ಶಗಳನ್ನು ಇಂದಿನ ಯುವಕರು ಪ್ರೇರಕವಾಗಿ ತೆಗೆದುಕೊಳ್ಳಬೇಕು. ಮತ್ತು ಅವರ ವಿಚಾರಧಾರೆಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಎಂಬುದರ ಸಲುವಾಗಿ ಮತ್ತು ದೇಶಕ್ಕಾಗಿ ಹೋರಾಡಿದವರನ್ನ, ಪ್ರಾಣ ತ್ಯಾಗವನ್ನು ಮಾಡಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದಾಗಿದೆ.
FAQ
ಸ್ವಾತಂತ್ರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಆಗಸ್ಟ ೧೫
ಗಾಂಧೀಜಿಯವರು ಯಾವಾಗ ಜನಿಸಿದರು ?
ಅಕ್ಟೋಬರ್ ೨
ಇತರೆ ವಿಷಯಗಳು :
ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪ್ರಬಂಧ