ಕರ್ನಾಟಿಕ್‌ ಯುದ್ಧಗಳ ಬಗ್ಗೆ ಮಾಹಿತಿ | Information About the Karnatic Wars in Kannada

ಕರ್ನಾಟಿಕ್‌ ಯುದ್ಧಗಳ ಬಗ್ಗೆ ಮಾಹಿತಿ Information About the Karnatic Wars Karnataka Yuddagala Bagge Mahiti in Kannada

ಕರ್ನಾಟಿಕ್‌ ಯುದ್ಧಗಳ ಬಗ್ಗೆ ಮಾಹಿತಿ

Information About the Karnatic Wars in Kannada

ಈ ಲೇಖನಿಯಲ್ಲಿ ಪ್ರಥಮ ಕರ್ನಾಟಿಕ್‌ ಯುದ್ದದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕರ್ನಾಟಿಕ್‌ ಯುದ್ಧ

ಮೊಗಲ್‌ ಸಾಮ್ರಾಜ್ಯದ ಒಂದು ಪ್ರಾಂತ್ಯವೇ ಕರ್ನಾಟಿಕ್‌. ಕೋರಮಂಡಲ ತೀರ ಮತ್ತು ಅದರ ಹಿನ್ನಾಡನ್ನು ಯೂರೋಪಿಯನ್ನರು ಕರ್ನಾಟಿಕ್‌ ಎಂದು ಕರೆಯುತ್ತಿದ್ದರು. ಬ್ರಿಟಿಷರು ಮತ್ತು ಪ್ರೆಂಚರ ನಡುವೆ ದಕ್ಷಿಣ ಭಾರತದ ವ್ಯಾಪಾರದ ಮೇಲಿನ ನಿಯಂತ್ರಣಕ್ಕಾಗಿ ಪೈಪೋಟಿ ನಡೆದು ಅಲ್ಪ ಕಾಲದಲ್ಲೇ ಅದು ಕದನದ ಹಾದಿಯನ್ನು ಹಿಡಿಯುವಂತೆ ಮಾಡಿತು. ಈ ಹಿನ್ನೆಲೆಯಲ್ಲಿ ನಡೆದ ಮೂರು ಕದನಗಳಿಗೆ ಕರ್ನಾಟಿಕ್‌ ಪ್ರದೇಶ ಮುಖ್ಯ ಭೂಮಿಕೆಯಾಯಿತು. ಆದ್ದರಿಂದ ಈ ಕದನಗಳನ್ನು ಕರ್ನಾಟಿಕ್‌ ಕದನಗಳೆಂದು ಕರೆಯುತ್ತಾರೆ.

ಪ್ರಥಮ ಕರ್ನಾಟಿಕ್‌ ಯುದ್ದ

ಭಾರತದಲ್ಲಿ ಆಂಗ್ಲ ಮತ್ತು ಪ್ರೆಂಚರ ನಡುವೆ ವ್ಯವಹಾರಿಕ ಮತ್ಸರ, ಪೈಪೋಟಿ ಮತ್ತು ರಾಜಕೀಯ ಮಹದಾಸೆ ಯುದ್ದಕ್ಕೆ ಕಾರಣವಾಯಿತು. ಯುರೋಪ್‌ ಖಂಡದಲ್ಲಿ ಆರಂಭವಾಗಿದ್ದ ಆಸ್ಟ್ರೀಯಾದ ಉತ್ತರಾಧಿಕಾರತ್ವದ ಕಾರಣಕ್ಕಾಗಿ ಇಂಗ್ಲೆಂಡ್‌ ಮತ್ತು ಫ್ರಾನ್ಸಗಳ ನಡುವೆ ಯುದ್ದ ಆರಂಭವಾಯಿತು. ಇದು ಭಾರತದಲ್ಲಿ ನೆಲೆಯೂರಿದ ಇವರಿಬ್ಬರ ನಡುವೆ ಯುದ್ದಕ್ಕೆ ಕಾರಣವಾಯಿತು.

ಆರ್ಕಾಟ್‌ ಕರ್ನಾಟಿಕ ಸಂಸ್ಥಾನದ ರಾಜಧಾನಿಯಾಗಿತ್ತು. ಇಂಗ್ಲಿಷರು ಆಗ್ನೇಯ ಕರಾವಳಿಯನ್ನು ಗೆದ್ದುಕೊಂಡು ಫ್ರೆಂಚರ ಪಾಂಡಿಚೇರಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಫ್ರೆಂಚರ ಗವರ್ನರ್‌ ಡೂಪ್ಲೆ ಮದ್ರಾಸನ್ನು ವಶಪಡಿಸಿಕೊಂಡನು. ಇಂಗ್ಲಿಷರು ಆರ್ಕಾಟಿನ ನವಾಬ ಅನ್ವರುದ್ದೀನ್‌ ಸಹಾಯವನ್ನು ಬೇಡಿದರು. ನವಾಬನು ಮದ್ರಾಸನ್ನು ಪುನಃ ವಶಪಡಿಸಿಕೊಳ್ಳಲು ಕಳಹಿಸಿದನು. ಆದರೆ ನವಾಬನ ಸೇನೆ ಸೋಲನ್ನು ಅನುಭವಿಸಿತು. ಇಷ್ಟರಲ್ಲಿ ಯೂರೋಪಿನಲ್ಲಿ ಇಂಗ್ಲಿಷರು ಮತ್ತು ಫ್ರೆಂಚರ ನಡುವಣ ಯುದ್ದ ನಿಂತು ಒಪ್ಪಂದ ಏರ್ಪಟ್ಟಿತು. ಈ ಒಪ್ಪಂದ ಭಾರತದಲ್ಲಿದ್ದ ಬ್ರಿಟಿಷರಿಗೂ, ಫ್ರೆಂಚರಿಗೂ ಅನ್ವಯಿಸಿತು.

ಪ್ರಥಮ ಕರ್ನಾಟಿಕ್‌ ಯುದ್ದದ ಪರಿಣಾಮಗಳು :

  • ಮದ್ರಾಸ್‌ ಇಂಗ್ಲಿಷರ ಕೈ ವಶವಾಯಿತು.
  • ಫ್ರೆಂಚರು ಆರ್ಕಾಟ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇದರಿಂದ ಡೂಪ್ಲೆಯ ಪ್ರತಿಷ್ಠೆಯು ಹೆಚ್ಚಾಯಿತು.
  • ಪರಸ್ಪರ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಲಾಯಿತು.

ಎರಡನೇ ಕರ್ನಾಟಿಕ್‌ ಯುದ್ದ

ಆರ್ಕಾಟ್‌ ಮತ್ತು ಹೈದರಾಬಾದ್ ಗಳಲ್ಲಿ ಪಟ್ಟಾಧಿಕಾರದ ಸಮಸ್ಯೆಗಳು ಉದ್ಬವಿಸಿದವು. ಇದು ಯುದ್ದಕೆ ಪ್ರಮುಖ ಕಾರಣವಾಯಿತು. ಆರ್ಕಾಟಿನಲ್ಲಿ ಚಂದಾಸಾಹೇಬ ಮತ್ತು ಅನ್ವರುದ್ದೀನ್‌ ಹಾಗೂ ಹೈದರಾಬಾದಿನಲ್ಲಿ ನಾಸಿರ್‌ ಮತ್ತು ಮುಜಾಫರ್‌ ಜಂಗರ ನಡುವೆ ಸಿಂಹಾಸನಕ್ಕಾಗಿ ಪೈಫೋಟಿ ಆರಂಬವಾಯಿತು. ಗುಪ್ತ ಸಂದಾನದ ಮೂಲಕ ಡೂಪ್ಲೆಯು ಚಂದಾಸಾಹೇಬ್‌ ಮತ್ತು ಮುಜಾಫರ್‌ಜಂಗ್‌ ನಡುವೆ ಒಂದು ಕೂಟವನ್ನು ಮಾಡಿಕೊಂಡರು. ಅನ್ವರುದ್ದೀನನ್ನು ಸೋಲಿಸಿ ಕೊಂದು ಹಾಕಿದರು. ಅವನ ಮಗ ಮಹಮ್ಮದ್‌ ಅಲಿ ತಿರುಚನಾಪಳ್ಳಿಗೆ ಓಡಿಹೋದನು.

ಆರ್ಕಾಟಿನಲ್ಲಿ ಚಂದಾಸಾಹೇಬನು, ಹೈದರಾಬಾದಿನಲ್ಲಿ ಮುಜಾಫರ್‌ ಜಂಗನ್‌ ನವಾಬರಾಗಲು ಫ್ರೆಂಚರುನೆರವು ನೀಡಿದರು. ಕೆಲಕಾಲದ ನಂತರ ಮುಜಾಫರ್‌ ಜಂಗ್‌ ಕೊಲೆಗೀಡಾದನು. ಅವನ ಸ್ಥಾನಕ್ಕೆ ಫ್ರೆಂಚರು ಸಲಾಬತ್‌ ಜಂಗನನ್ನು ತಂದರು. ಇತ್ತ ಇದರಿಂದ ಕೋಪಗೊಂಡ ಇಂಗ್ಲಿಷರು ರಾಬರ್ಟ್‌ ಕ್ಲೈವನ ನಾಯಕತ್ವದಲ್ಲಿ ಅರ್ಕಾಟ್‌ ನಗರವನ್ನು ವಶಪಡಿಸಿಕೊಂಡು ಚಂದಾಸಾಹೇಬನನ್ನು ಕೊಂದರು. ಅಲ್ಲದೆ ಮಹಮ್ಮದ್‌ ಆಲಿಯನ್ನು ಅರ್ಕಾಟಿನ ನವಾಬನನ್ನಾಗಿ ಮಾಡಿದರು. ಈ ಯುದ್ದದ ನಂತರ ಡೂಪ್ಲೆಯನ್ನು ಫ್ರೆಂಚ್‌ ಸರ್ಕಾರವು ವಾಪಸ್ಸು ಕರೆಸಿಕೊಂಡಿತು. ೧೭೫೪ ರ ಪಾಂಡೀಚೇರಿ ಒಪ್ಪಂದದೊಂದಿಗೆ ಯುದ್ದ ಕೊನೆಗೊಂಡಿತು.

ಎರಡನೇ ಕರ್ನಾಟಿಕ್‌ ಯುದ್ದದ ಪರಿಣಾಮ :

  • ಆರ್ಕಾಟಿನಲ್ಲಿ ಫ್ರೆಂಚರ ಶಕ್ತಿ ಪ್ರಭಾವಗಳು ಕುಗ್ಗಿದವು.
  • ಬ್ರಿಟಿಷರು ಕಂದಾಯವನ್ನು ವಸೂಲು ಮಾಡುವ ಹಾಗೂ ಸೇನಾ ತುಕಡಿಗಳನ್ನು ಇರಿಸಿಕೊಳ್ಳುವ ಹಕ್ಕುಗಳನ್ನು ಪಡೆದುಕೊಂಡರು.

ಮೂರನೇ ಕರ್ನಾಟಿಕ್‌ ಯುದ್ಧ

ಯೂರೋಪಿನಲ್ಲಿ ಸಪ್ತ ವಾರ್ಷಿಕ ಯುದ್ದ ಸಾ. ಶಕ. ೧೭೫೬ರಲ್ಲಿ ಆರಂಭವಾಯಿತು. ಇದರ ಪರಿಣಾಮವಾಗಿ ಭಾರತದಲ್ಲಿಯೂ ಫ್ರೆಂಚ್‌ ಮತ್ತು ಇಂಗ್ಲಿಷರ ನಡುವೆ ಮೂರನೇ ಕರ್ನಾಟಿಕ್‌ ಯುದ್ದ ಆರಂಭವಾಯಿತು. ಸಾ. ಶಕ ೧೭೬೦ ರಲ್ಲಿ ಇಂಗ್ಲಿಷ್‌ ಸೇನಾನಿ ಸರ್‌ ಐರ್ಕೋಟನಿಗೂ ಫ್ರೆಂಚರ ಗವರ್ನರ್‌ ಕೌಂಟ್‌ ಡಿ ಲ್ಯಾಲಿಗೂ ಪಾಂಡಿಚೇರಿ ಸಮೀಪ ವಾಂವಾಷ್ ನಲ್ಲಿ ಯುದ್ದ ನಡೆಯಿತು. ಈ ಯುದ್ದದಲ್ಲಿ ಫ್ರೆಂಚರಿಗೆ ಸೋಲಾಯಿತು. ಫ್ರೆಂಚರು ಇಂಗ್ಲಿಷರಿಗೆ ಶರಣಾದರು. ಯೂರೋಪಿನಲ್ಲಿ ಈ ವೇಳೆಗೆ ಸಪ್ತವಾರ್ಷಿಕ ಯುದ್ದಗಳು ಕೊನೆಗೊಂಡು ಪ್ಯಾರಿಸ್‌ ಒಪ್ಪಂದದವಾಯಿತು. ಪರಿಣಾಮವಾಗಿ ಕರ್ನಾಟಿಕದಲ್ಲಿಯೂ ಯುದ್ದ ಮುಕ್ತಾಯವಾಯಿತು.

ಮೂರನೇ ಕರ್ನಾಟಿಕ್‌ ಯುದ್ಧದ ಪರಿಣಾಮಗಳು :

  • ಭಾರತದಲ್ಲಿ ಫ್ರೆಂಚರ ರಾಜಕೀಯ ಮತ್ತು ಸೈನಿಕ ಪ್ರಭಾವವು ಕೊನೆಗೊಂಡಿತು.
  • ಭಾರತದಲ್ಲಿ ಆಂಗ್ಲರು ಯೂರೋಪಿನ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದರು.

FAQ

ಮೂರನೇ ಕರ್ನಾಟಿಕ್‌ ಯುದ್ಧದ ಪರಿಣಾಮಗಳನ್ನು ತಿಳಿಸಿ ?

ಭಾರತದಲ್ಲಿ ಫ್ರೆಂಚರ ರಾಜಕೀಯ ಮತ್ತು ಸೈನಿಕ ಪ್ರಭಾವವು ಕೊನೆಗೊಂಡಿತು, ಭಾರತದಲ್ಲಿ ಆಂಗ್ಲರು ಯೂರೋಪಿನ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದರು.

ಪ್ರಥಮ ಕರ್ನಾಟಿಕ್‌ ಯುದ್ದದ ಪರಿಣಾಮಗಳನ್ನು ತಿಳಿಸಿ ?

ಮದ್ರಾಸ್‌ ಇಂಗ್ಲಿಷರ ಕೈ ವಶವಾಯಿತು, ಫ್ರೆಂಚರು ಆರ್ಕಾಟ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇದರಿಂದ ಡೂಪ್ಲೆಯ ಪ್ರತಿಷ್ಠೆಯು ಹೆಚ್ಚಾಯಿತು.

ಇತರೆ ವಿಷಯಗಳು :

ಸಾಮಾಜಿಕ ಮಾಧ್ಯಮಗಳ ಬಗ್ಗೆ ಪ್ರಬಂಧ 

ಮಂದಗಾಮಿ ಯುಗದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *