ವಿಶ್ವ ಅರಣ್ಯ ದಿನದ ಬಗ್ಗೆ ಪ್ರಬಂಧ | Essay on World Forestry Day in Kannada

ವಿಶ್ವ ಅರಣ್ಯ ದಿನದ ಬಗ್ಗೆ ಪ್ರಬಂಧ Essay on World Forestry Day Aranya Dinda Bagge Mahiti in Kannada

Essay on World Forestry Day in Kannada
Essay on World Forestry Day in Kannada

ಈ ಲೇಖನಿಯಲ್ಲಿ ವಿಶ್ವ ಅರಣ್ಯ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಅರಣ್ಯವು ನಮ್ಮೆಲ್ಲರ ಉಸಿರು, ಅರಣ್ಯವು ಪ್ರಕೃತಿದತ್ತವಾಗಿ ನಮ್ಮೆಲ್ಲರಿಗೂ ಸಿಕ್ಕಿರುವ ಅತ್ಯಮೂಲ್ಯವಾದ ಸಂಪತ್ತಾಗಿದೆ. ವಿಶ್ವ ಅರಣ್ಯ ದಿನವನ್ನು ಮಾರ್ಚ್‌ ೨೧ ರಂದು ಆಚರಿಸಲಾಗುತ್ತದೆ. ಜನರಲ್ಲಿ ಅರಣ್ಯದ ಬಗ್ಗೆ ಸಷ್ಟ ಕಲ್ಪನೆಯನ್ನು ಮೂಡಿಸಲು ವಿಶ್ವ ಅರಣ್ಯ ದಿನವನ್ನು ೧೯೭೧ ಮಾರ್ಚ್‌ ೨೧ ರಿಂದ ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಅಂದಿನಂದ ಇಂದಿನವರೆಗೂ ಕೂಡ ಮಾರ್ಚ್‌ ೨೧ ರಂದು ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಕೇವಲ ಅರಣ್ಯದ ಬಗ್ಗೆ, ಅರಣ್ಯದ ಸಂರಕ್ಷಣೆಯ ಬಗ್ಗೆ ಮಾರ್ಚ ೨೧ ಕೇವಲ ಈ ದಿನ ಮಾತ್ರ ಸೀಮಿತವಾಗದೆ ಅರಣ್ಯ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು.

ವಿಷಯ ವಿವರಣೆ

ನಮ್ಮ ಜೀವನದಲ್ಲಿ ಅರಣ್ಯಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆವು ಮಾರ್ಚ್‌ ೨೧ ರಂದು ವಿಶ್ವ ಅರಣ್ಯ ದಿನವನ್ನು ಆಚರಿಸುತ್ತಾರೆ. ಪರಿಸರ ಸಮತೋಲನ ಕಾಪಾಡಲು ೧೯೮೮ ರಾಷ್ಟ್ರೀಯ ಅರಣ್ಯ ನೀತಿಯು ಶೇ ೩೩ ರಷ್ಟು ಭೂ ಪ್ರದೇಶದಲ್ಲಿ ಅರಣ್ಯವಿರಬೇಕು ಎಂದು ಶಿಫಾರಸ್ಸು ಮಾಡಲಾಗಿತ್ತು. ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯಗಳು ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸಘಡ್‌, ಒಡಿಶಾ, ಮಹಾರಾಷ್ಟ್ರಗಳಲ್ಲಿ ಹೆಚ್ಚು ಅರಣ್ಯವನ್ನು ಹೊಂದಿದೆ. ಹಾಗೂ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರು ದೇಶ ರಷ್ಯಾವಾಗಿದೆ.

ವಿಶ್ವ ಅರಣ್ಯ ದಿನದ ಥೀಮ್‌

೨೦೨೨ ರ ಥೀಮ್‌ :

Forests and Sustainable Production and Consumption

ಅರಣ್ಯ ಸಂರಕ್ಷಣೆಯಿಂದಾಗಿ ಆಗುವ ಉಪಯೋಗಗಳು

  • ಗಿಡ ಮರ ಬಳ್ಳಿಗಳ ಸಮುದಾಯವನ್ನು ನಾಶ ಮಾಡದಂತೆ ರಕ್ಷಣೆ ಮಾಡುವುದನ್ನೇ ಅರಣ್ಯ ಸಂರಕ್ಷಣೆ ಎನ್ನುವರು. ಕಾಡಿನಲ್ಲಿರುವ ಪ್ರಾಣಿ – ಪಕ್ಷಿಗಳಿಗೆ ರಕ್ಷಣೆ ಮಾಡಬೇಕೆಂದರೆ ಮೊದಲು ಅರಣ್ಯ ರಕ್ಷಿಸಬೇಕು. ಭಾರತದಲ್ಲಿ ೨೫% ಪ್ರದೇಶವು ಕಾಡಿನಿಂದ ಆವರಿಸಿದೆ.ಅರಣ್ಯಗಳು ವಿಶೇಷ ರೀತಿಯ ಸಸ್ಯಗಳನ್ನು ಹೊಂದಿರುತ್ತವೆ.
  • ಸರಿಯಾದ ಸಮಯಕ್ಕೆ ಮಳೆ ಆಗಲು ಅರಣ್ಯಗಳು ಸಹಾಯಕವಾಗಿವೆ.
  • ಅರಣ್ಯಗಳಿಂದ ಮಣ್ಣಿನ ಸವೆತವನ್ನು ಕಡಿಮೆಗೊಳಿಸಬಹುದು.
  • ಅರಣ್ಯಗಳಿಂದಲೇ ಮನುಷ್ಯ ಮತ್ತು ಪ್ರಾಣಿಗಳಿಗೆ ಶುದ್ದ ಗಾಳಿ ಸಿಗುತ್ತದೆ.
  • ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದ ಇಂಗಾಲದ – ಡೈ – ಆಕ್ಸೈಡ್‌ ಹೆಚ್ಚಾಗಿದ್ದು ಇದರ ಪ್ರಮಾಣ ಕಡಿಮೆಯಾಗಿ ಆಮ್ಲಜನಕ ಹೆಚ್ಚಾಗಬೇಕೆಂದರೆ ಅರಣ್ಯನಾಶ ತಪ್ಪಿಸಿ, ಅರಣ್ಯ ಸಂರಕ್ಷಣೆ ಮಾಡಬೇಕು.
  • ಧೂಳಿನ ಕಣಗಳು ಕಡಿಮೆಯಾಗುತ್ತದೆ.

ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕೆಲವು ಕ್ರಮಗಳು

  • ಖಾಲಿ ಇರುವ ಸ್ವಲ್ಪ ಸ್ವಲ್ಪ ಜಾಗದಲ್ಲಿಯೇ ಗಿಡಗಳನ್ನು ನೆಡಬೇಕು. ಅಥವಾ ಬೀಜಗಳನ್ನು ಬಿತ್ತಬೇಕು.
  • ಹುಟ್ಟಿದ ಹೊಸ ಗಿಡಗಳಿಗೆ ಯಾವುದೇ ತೊದರೆಯಾಗದಂತೆ ಗಿಡಗಳಿಗೆ ಬೇಲಿಯನ್ನು ಹಾಕಿ ರಕ್ಷಿಸಬೇಕು.
  • ಕಾಡ್ಗಿಚ್ಚು ಉಂಟಾಗದಂತೆ ಮತ್ತು ಗಿಡ – ಮರಗಳಿಗೆ ಯಾವುದೇ ರೋಗ ಬರದಂತೆ ರಕ್ಷಿಸಬೇಕು.
  • ಮರವನ್ನು ನಾಶವಾಗದಂತೆ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು.

ಉಪಸಂಹಾರ

ಬಿದ್ದು ಹೋಗುವ ಮರಗಳನ್ನು ಗುರುತಿಸಿ, ಅದೇ ಜಾಗದಲ್ಲಿ ಬೇರೆ ಹೊಸ ಗಿಡಗಳನ್ನು ನನೆಡಬೇಕು, ಅರಣ್ಯ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಅರಣ್ಯವಿಲ್ಲದೆ ನಮ್ಮೆಲ್ಲರ ಜೀವನವನ್ನು ಕಲ್ಪಿಸಿಕೊಳ್ಲುವುದು ಕಷ್ಟಕರವಾದ ಸಂಗತಿ ಮತ್ತು ಅರಣ್ಯವಿಲ್ಲದೆ ಬದುಕಲು ಸಾಧ್ಯವಿಲ್ಲ. ಅರಣ್ಯ ಸಂಪತ್ತು ಚೆನ್ನಾಗಿದ್ದರೆ ನಾವೆಲ್ಲರೂ ಖುಷಿಯಿಂದ ಬದುಕಲು ಸಾಧ್ಯವಾಗುತ್ತದೆ.

FAQ

ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೨೧

ವಿಶ್ವ ಅರಣ್ಯ ದಿನದ ೨೦೨೨ ರ ಥೀಮ್‌ ಏನು ?

Forests and Sustainable Production and Consumption

ಇತರೆ ವಿಷಯಗಳು :

ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ‌

ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *