ವಿಶ್ವ ಜಲ ದಿನದ ಬಗ್ಗೆ ಪ್ರಬಂಧ Essay on World Water Day Vishva Jala Dinda Bagge Prabandha in Kannada
ವಿಶ್ವ ಜಲ ದಿನದ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ವಿಶ್ವ ಜಲ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ನೀರು ನಮ್ಮೆಲ್ಲರ ಜೀವನ, ಪ್ರತಿಯೊಂದು ಹನಿ ನೀರು ತುಂಬಾ ಮುಖ್ಯವಾಗಿದೆ. ಗಿಡ ಮರ ಪ್ರಾಣಿ ಪಕ್ಷಿ ಹಾಗೂ ಮಾನವರಿಗೆ ನೀರು ಬೇಕೆ ಬೇಕು. ಪ್ರತಿ ಹನಿ ನೀರಿಗೂ ನಾವು ಬೆಲೆ ತೆರವಬೇಕಾಗುತ್ತದೆ. ವಿಶ್ವ ಜಲದಿನವನ್ನು ಪ್ರತಿ ವರ್ಷ ಮಾರ್ಚ್ ೨೨ ರಂದು ವಿಶ್ವಜಲದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜಲದಿನವವನ್ನು ಆಚರಿಸಲು ಕಾರಣವೇನೆಂದರೆ ೧೯೯೩ ರಲ್ಲಿ ಬ್ರೆಜಿಲ್ ನ ರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ದಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನ ಕೈಗೊಂಡು ಪ್ರತಿ ವರ್ಷ ಮಾರ್ಚ್ ೨೨ ರಂದು ಆಚರಿಸಲು ತೀರ್ಮಾನಿಸಿತು.
ವಿಷಯ ವಿವರಣೆ
ಜಲ ಎಂದರೆ ನೀರು ಅತೀ ಅಮೂಲ್ಯವಾದ ಜೀವದ್ರವ್ಯವಾಗಿದೆ. ಇದರ ಸಂರಕ್ಷಣೆ ಮತ್ತು ಮಿತವಾಗಿ ನೀರು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜಲ ದಿನವನ್ನು ಆಚರಣೆಯನ್ನು ಮಾಡುತ್ತಾರೆ. ನೀರು ಈ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಕೊಡುಗೆಯಾಗಿದೆ. ಇದನ್ನು ಮಿತವಾಗಿ ಬಳಸಬೇಕು. ಪ್ರತಿಯೊಂದು ಜೀವಿಗೂ ನೀರು ಅತೀ ಮುಖ್ಯವಾಗಿದೆ. ಜೀವ ಸಂಕುಲಗಳು ಬದುಕಲು ನೀರು ಮುಖ್ಯವಾಗಿ ಬೇಕೆ ಬೇಕು. ಬೆಳೆಯುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ಕೈಗಾರಿಕರಣ, ಅರಣ್ಯ ನಾಶಗಳಿಂದ ಅಂತರ್ಜಲದ ಮಟ್ಟ ದಿನೆ ದಿನೇ ಕುಸಿಯುತ್ತಿದೆ. ಎಷ್ಟೋ ಪ್ರದೇಶಗಳಲ್ಲಿ ನೀರಿನ ಕೊರತೆ ಇದೆ. ನಾವು ಪ್ರತಿ ದಿನವೂ ಮಿತವಾಗಿ ನೀರು ಬಳಸಿದರೆ ಎಷ್ಟೋ ಜೀವರಾಶಿಗಳಿಗೆ ಸಹಾಯವಾಗುತ್ತದೆ. ಪ್ರತಿ ದಿನ ಎಷ್ಟೋ ಮಕ್ಕಳು ಶುದ್ದ ಕುಡಿಯುವ ನೀರಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನೀರಿನ ಮಾಲಿನ್ಯ ತಪ್ಪಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.
೨೦೨೨ ರ ಜಲ ದಿನದ ಥೀಮ್
Ground Water Making the invisible visible ಅನ್ನು IGRAC ನೀಡಿದೆ.
ನೀರನ್ನು ಮಿತವಾಗಿ ಬಳಸಿ ಪ್ರಕೃತಿಯನ್ನು ಉಳಿಸಬೇಕು, ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರವಾಗಿದೆ.
ಜಲಮಾಲಿನ್ಯಕ್ಕೆ ಕಾರಣಗಳ
- ಇತ್ತೀಚಿನ ದಿನಗಳಲ್ಲಿ ಜನರು ನೀರನಲ್ಲಿ ಕರಗದೆ ಇರುವ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಲಿನಗೊಳ್ಳುತ್ತದೆ.
- ಪಟ್ಟಣದಕಲ್ಲಿಯ ಚರಂಡಿ ನೀರನ್ನು ಕೆರೆ, ನದಿ, ಸಮುದ್ರಗಳಿಗೆ ಬಿಡುವುದರಿಂದ ಜಲಮಾಲಿನ್ಯವಾಗುತ್ತದೆ.
- ಪ್ರತಿ ವರ್ಷ ಸರಿಸುಮಾರು ಮೂರು ಮಿಲಿಯನ್ ತೈಲ ಸಮುದ್ರ ಸೇರುವುದರಿಂದ ಮಲಿನಗೊಳ್ಳುತ್ತದೆ.
- ಮೀನುಗಾರರು ಪ್ರತಿನಿತ್ಯ ಪ್ಲಾಸ್ಟಿಕ್ ನೆಟ್ ಗಳನ್ನು ಬಳಸುವುದರಿಂದ ಜಲ ಜೀವಿಗಳು ಹೊಂದಿರುತ್ತವೆ.
- ನೀರು ಜೀವಜಲ ಎಂದು ಕರೆಯುತ್ತಾರೆ. ಮನುಷ್ಯನಿಗೆ ನೀರಿನಿಂದಲೇ ಬದುಕು ನೀರು ದೇವರ ಸ್ವರೂಪವಾಗಿದೆ.
ವಿಶ್ವ ಜಲದಿನದ ಸಂರಕ್ಷಣೆಯ ಜಾಗೃತಿಯ ಕ್ರಮಗಳು
- ಪ್ರತಿ ವರ್ಷವೂ ಮಾರ್ಚ್ ೨೨ ರಂದು ವಿಶ್ವ ಜಲದಿನವನ್ನು ಆಚರಿಸುವುದರ ಮೂಲಕ ಪ್ರತಿಯೊಬ್ಬರಲ್ಲೂ ಕೂಡ ಈ ದಿನದ ಬಗ್ಗೆ ಅರಿವನ್ನು ಮೂಡಿಸಬೇಕು.
- ನೀರಿನ ಸಂರಕ್ಷಣೆಯ ಕುರಿತು ಜಾಗೃತಿಯನ್ನು ಹೆಚ್ಚಿಸಲು, ನಿಮ್ಮ ನೆರೆಹೊರೆಯಲ್ಲಿರುವ ಜನರನ್ನು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಲಸಂರಕ್ಷಣಾ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೀವು ಕರೆ ನೀಡಬಹುದು.
- ಮನೆಯಲ್ಲಿ ನೀರಿನ ಬಳಕೆಯನ್ನು ಮೇಲ್ವಿಚಾರಣೆ ಮಾಡಬಹುದು. ಮತ್ತು ಸಂಪನ್ಮೂಲವನ್ನು ಉಳಿಸುವ ಮಾರ್ಗಗಲನ್ನು ಜಕಂಡುಹಿಡಿಯಬಹುದಾಗಿದೆ.
- ನೀರನ್ನು ಸಂರಕ್ಷಿಸುವಲ್ಲಿ ಸಹಾಯ ಮಾಡುವ ವಿಧಾನಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸುವ ಬಗ್ಗೆ ನೀವು ಜನರಿಗೆ ತಿಳುವಳಿಕೆ ನೀಡಬಹುದು. ಉದಾಹರಣೆಗೆ, ಸ್ನಾನಕ್ಕಾಗಿ ಶವರ್ ಬದಲಿಗೆ ಬಕೆಟ್ ಅನ್ನು ಬಳಸುವುದು.
- ಕೆರೆ, ಬಾವಿ ಹಳ್ಳ ನದಿಗಳಲ್ಲಿ ನೀರು ಕಲುಷಿತವಾಗದಂತೆ ನೋಡಿಕೊಳ್ಳುವುದು.
- ಕಾರ್ಖಾನೆಗಳಿಂದ ಕಲುಷಿತ ನೀರುಗಳು ನದಿಗಳಿಗೆ ಹರಿ ಬಿಡುವುದನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಬಹುದು.
ಉಪಸಂಹಾರ
ನೀರು ಒಂದು ಪ್ರಮುಖ ಸಂಪನ್ಮೂಲವಾಗಿದೆ. ಪ್ರತಿಯೊಂದು ಜೀವ ಸಂಕುಲಕ್ಕೂ ಕೂಡ ನೀರು ಬೇಕು. ನೀರಿಲ್ಲದೆ ನಮ್ಮ ಜೀವನವವನ್ನು ಊಹಿಸಿಕೊಳ್ಳುವುದು ಕೂಡ ಕಷ್ಟಕರವಾದ ಸಂಗತಿಯಾಗಿದೆ. ನೀರು ಜೀವನದ ಕಣ್ಣು. ಗಿಡ – ಮರಗಳಿಗೂ ನೀರು ಬೇಕು. ನೀರು ಜೀವಕ್ಕೆ, ಜೀವನಕ್ಕೆ ನೀರು ಮುಖ್ಯವಾಗಿದೆ.
FAQ
ವಿಶ್ವ ಜಲದಿನವನ್ನು ಯಾವಾಗ ಆಚರಿಸುತ್ತಾರೆ ?
ಮಾರ್ಚ್ ೨೨
ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸುತ್ತಾರೆ ?
ಮಾರ್ಚ್ ೨೧
ಇತರೆ ವಿಷಯಗಳು :
ಡಾ ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆ