ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ Information About 10 Districts in Karnataka Karnatakadallin ೧೦ Jillegala Bagge Mahiti in Kannada
ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಮೈಸೂರು ಜಿಲ್ಲೆ :
ಮೈಸೂರಿನ ತಲಕಾಡು ದೇವಾಲಯಗಳನ್ನು ಜಕಣಾಚಾರಿ ರಚಿಸಿದನು. ಇಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾನಮಗಳನ್ನು ಹೊಂದಿದೆ. ಭಾರತದ ಮೊದಲ ಆಕಾಶವಾಣಿ ಕೇಂದ್ರವನ್ನು ಡಾ. ಎಂ. ವಿ ಗೋಪಾಲಸ್ವಾಮಿರವರು ೧೯೩೫ ರಲ್ಲಿ ಮೈಸೂರಿನಲ್ಲಿ ಅರಂಭಿಸಿದರು. ಇಲ್ಲಿ ಕರ್ನಾಟಕದ ಅತಿ ದೊಡ್ಡ ದೇವಾಲಯವಾದ ನಂಜನಗೂಡಿನ ನಂಜುಡೇಶ್ವರ ದೇವಾಲಯವಿದೆ. ಇಲ್ಲಿ ಚಾಮುಂಡಿ ಬೆಟ್ಟವಿದೆ.
ಬೆಂಗಳೂರು ಜಿಲ್ಲೆ :
ಇದರ ಸ್ಥಾಪಕ ಒಂದನೇಯ ಕೆಂಪೇಗೌಡರು. ಇಲ್ಲಿ ಫ್ರೀಡಂ ಪಾರ್ಕ ಇದೆ. ಕರ್ನಾಟಕದ ವಿಸ್ತೀರ್ಣದಲ್ಲಿ ಅತಿ ಚಿಕ್ಕ ಜಿಲ್ಲೆಯಾಗಿದೆ. ಇಲ್ಲಿ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಇದೆ. ಇಲ್ಲಿ ಇಸ್ಕಾನ್ ದೇವಾಯವಿದೆ. ಭಾರತದಲ್ಲಿ ವಿದ್ಯುತ್ ಬೆಳಕನ್ನು ಕಂಡ ಪ್ರಥಮ ನಗರವಾಗಿದೆ. ರಾಷ್ಟ್ರೀಯ ಮರ ವಿಜ್ಞಾನ ಸಂಸ್ಥೆ ಇದೆ. ಸಂಸ್ಕೃತ ವಿಶ್ವ ವಿದ್ಯಾಲಯವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಯಾಗಿದೆ. ಇದನ್ನು ಉದ್ಯಾನ ನಗರವೆಂದು ಕರೆಯುತ್ತಾರೆ.
ರಾಮನಗರ ಜಿಲ್ಲೆ :
ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ. ಭಾರತದ ಏಕಮಾತ್ರ ಹದ್ದುಗಳ ಅಭಯಾಶ್ರಮ ಈ ಜಿಲ್ಲೆಯಲ್ಲಿದೆ. ಸಾಲುಮರದ ತಿಮ್ಮಕ್ಕರವರು ಈ ಜಿಲ್ಲೆಯವರಾಗಿದ್ದರು. ಇಲ್ಲಿ ಬ್ಯಾಲ್ಯಾಳು ಎಂಬ ಪ್ರದೇಶದಲ್ಲಿ ಮಂಗಳಯಾನ ಟ್ರ್ಯಾಕಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮೇಕೆದಾಟು ಜಲವಿದ್ಯುತ್ ಉತ್ಪಾದನಾ ಕೇಂದ್ರ ಕಾವೇರಿ ನದಿಗೆ ಸಂಬಂಧಿಸಿದೆ. ಇಲ್ಲಿಯ ಚೆನ್ನಪಟ್ಟಣವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಚೆನ್ನಪಟ್ಟಣದಲ್ಲಿ ಪೋಲಿಸ್ ತರಬೇತಿ ಶಾಲೆ ಇದೆ. ಇದನ್ನು ರೇಷ್ಮೆ ಪಟ್ಟಣ ಎಂದು ಕರೆಯಲಾಗಿದೆ.
ಮಂಡ್ಯ ಜಿಲ್ಲೆ :
ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ. ಶಿವಪುರ ಸತ್ಯಾಗ್ರಹವು ೧೯೩೮ ಎಪ್ರಿಲ್ ೧೧ ರಲ್ಲಿ ನಡೆಯಿತು. ಶಿವಪುರವು ಶಿಂಷಾ ನದಿ ದಂಡೆಯ ಮೇಲಿದೆ. ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯ ಇದೆ. ಇಲ್ಲಿ ವೈರಮುಡಿ ಉತ್ಸವ ನಡೆಯುತ್ತದೆ. ಮತ್ತು ಇಲ್ಲಿ ಶ್ರೀ ರಾಮಾನುಚಾರ್ಯರು ವಾಸವಾಗಿದ್ದರು. ಇದನ್ನು ಸಕ್ಕರೆ ಬೋಗುಣಿ ಎಂದು ಕರೆಯುತ್ತಾರೆ. ಇಲ್ಲಿ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನ ಕೇಂದ್ರ ಇದೆ.
ಕೋಲಾರ ಜಿಲ್ಲೆ :
ಇದು ಗಂಗರ ಮೊದಲ ರಾಜಧಾನಿಯಾಗಿತ್ತು. ಇಲ್ಲಿಯ ಶಿಡ್ಲಘಟ್ಟ ನಗರವು ರೇಷ್ಮೆಗೆ ಹೆಸರುವಾಸಿಯಾಗಿದೆ. ಬೂದಿಕೋಟೆ ಎಂಬಲ್ಲಿ ಹೈದರಾಲಿ ೧೭೨೧ ರಲ್ಲಿ ಜನಿಸಿದನು. ಮುಳುಬಾಗಿಲು ಕರ್ನಾಟಕದಲ್ಲಿ ಮೊದಲು ಸೂರ್ಯೋದಯವಾಗುವ ಸ್ಥಳವಾಗಿದೆ. ಇಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿದೆ. ಇದರ ಮೊದಲ ಹೆಸರು ಕುವಲಾಲ.
ಹಾಸನ ಜಿಲ್ಲೆ :
ಶ್ರವಣಬೆಳಗೋಳವನ್ನು ಜೈನರ ಕೇಂದ್ರ ಎಂದು ಕರೆಯುತ್ತಾರೆ. ಇಲ್ಲಿ ಬೇಲೂರು ತಾಲೂಕಿನ ಹಲ್ಮಿಡಿ ಎಂಬ ಗ್ರಾಮದಲ್ಲಿ ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸವವನ್ನು ಡಾ. ಎಂ. ಹೆಚ್ಚ್ . ಕೃಷ್ಣರವರು ೧೯೩೬ ರಲ್ಲಿ ಪತ್ತೆಹಚ್ಚಿದರು. ಈ ಶಾಸನದ ಕಾಲ ಕ್ರಿ. ಶಕ. ೪೫೦ ರ ಕಾಲದಾಗಿದೆ. ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕ್ರೋಮಿಯಂ ಉತ್ಪಾದಿಸುತ್ತದೆ. ಇಲ್ಲಿ ಬಿಸಿಲೆ ಕಾಡುಗಳು ಕಂಡು ಬರುತ್ತವೆ.
ಚಿಕ್ಕ ಬಳ್ಳಾಪುರ ಜಿಲ್ಲೆ :
ಇಲ್ಲಿಯ ವಿಧುರಾಶ್ವತ್ಥ ಎಂಬ ಸ್ಥಳವು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತದೆ. ಹೀಗೆ ಕರೆದವರು ಪಟ್ಟಾಭಿ ಸೀತಾರಾಮಯ್ಯನವರು. ಮುದ್ದೇನಹಳ್ಳಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೮೬೧ ಸೆಪ್ಟೆಂಬರ್ ೧೫ ರಂದು ಜನಿಸಿದರು. ಗೌರಿ ಬಿದನೂರಿನಲ್ಲಿ ಭೂಕಂಪನ ಮಾಪನ ಕೇಂದ್ರ ಇದೆ.
ತುಮಕೂರು ಜಿಲ್ಲೆ :
ಮಾರ್ಕೋನಹಳ್ಳಿ ಆಣೆಕಟ್ಟು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಕರ್ನಾಟಕದ ಅತೀ ಹೆಚ್ಚು ಕೆಂಪು ಮಣ್ಣು ಹೊಂದಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ರಾಗಿಬೆಳೆಯುವ ಹಾಗೂ ಅತೀ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ. ಇಲ್ಲಿ ಶಿರಾ ತಾಲೂಕು ಕರ್ನಾಟಕದಲ್ಲಿ ಮೊಘಲರ ಆಡಳಿತ ಕೇಂದ್ರವಾಗಿತ್ತು.
ಶಿವಮೊಗ್ಗ ಜಿಲ್ಲೆ :
ಇಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದೆ. ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರವು ಶರಾವತಿ ನದಿಗೆ ಸಂಬಂಧಿಸಿದೆ. ಕುಮಸಿ ಎಂಬ ಪ್ರದೇಶವು ಕಬ್ಬಿಣದ ಅದಿರಿಗೆ ಪ್ರಸಿದ್ದಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಎಂಬ ಸ್ಥಳದಲ್ಲಿ ಶರಾವತಿ ನದಿ ಉಗಮಿಸುತ್ತದೆ. ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯುತ್ತಿದ್ದರು.
ಹಾವೇರಿ ಜಿಲ್ಲೆ :
ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಹಾವೇರಿ ಜಿಲ್ಲೆಯವರು. ಮೈಲಾರ ಮಹಾದೇವಪ್ಪ ಗುಜರಾತಿನ ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಜೊತೆ ಭಾಗವಹಿಸಿದ ಏಕೈಕ ಕನ್ನಡಿಗರಿದ್ದಾರೆ. ರಾಣೆಬೆನ್ನೂರು ಎಂಬಲ್ಲಿ ಕೃಷ್ಣ ಮೃಗ ವನ್ಯಧಾಮ ಇದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕಪ್ಪು ಮಣ್ಣು ಹೊಂದಿದ ಜಿಲ್ಲೆಯಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹತ್ತಿಯನ್ನು ಬೆಳೆಯುವ ಜಿಲ್ಲೆಯಾಗಿದೆ.
FAQ
ಜೋಗ ಜಲಪಾತವು ಯಾವ ಜಿಲ್ಲೆಯಲ್ಲಿದೆ ?
ಶಿವಮೊಗ್ಗ
ಹಲ್ಮಿಡಿ ಶಾಸನವು ಯಾವ ಜಿಲ್ಲೆಯಲ್ಲಿದೆ ?
ಹಾವೇರಿ
ಇತರೆ ವಿಷಯಗಳು :
ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ
ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ