ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಮಾಹಿತಿ | Information About Famous Dances of ndia in Kannada

ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಮಾಹಿತಿ Information About Famous Dances of India Bhartada Nrutyagala Bagge Mahiti in Kannada

ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಮಾಹಿತಿ

Information About Famous Dances of ndia in Kannada
Information About Famous Dances of India in Kannada

ಈ ಲೇಖನಿಯಲ್ಲಿ ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭರತನಾಟ್ಯಂ – ತಮಿಳುನಾಡು :

  • ಇದು ತಮಿಳುನಾಡಿನ ಶಾಸ್ತೀಯ ನೃತ್ಯವಾಗಿದ್ದು ಪ್ರಾಚೀನ ಕಾಲದಿಂದಲೂ ನಟುವಾಂಗ್‌ ಜನಾಂಗದವರು ದೇವತಾ ತೃಪ್ತಿಗಾಗಿ ದೇವಸ್ಥಾನಗಳಲ್ಲಿ ಈ ನೃತ್ಯವನ್ನು ಪ್ರಸ್ತುತ ಪಡಿಸುತ್ತಿದ್ದರು.
  • ಇಲ್ಲಿ ಕೇವಲ ಮಹಿಳೆಯರು ಮಾತ್ರ ಭಾಗವಹಿಸುತ್ತಿದ್ದ ಚೋಳರ ಕಾಲದಲ್ಲಿ ತಂಜಾವೂರಿನ ಬೃಹದೀಶ್ವರ ದೇವಾಲಯ ಹೆಚ್ಚು ಪ್ರಸಿದ್ದಿಯನ್ನು ಹೊಂದಿದೆ.
  • ತಮಿಳು ಕವಿ ಭರತಮುನಿ ಬರೆದಿರುವ ನಾಟ್ಯಶಾಸ್ತ್ರ ಗ್ರಂಥದಲ್ಲಿ ಈ ನೃತ್ಯವನ್ನು ಉಲ್ಲೇಖಿಸಲಾಗಿದೆ.
  • ಪ್ರಸಿದ್ದ ಕಲಾವಿದರೆಂದರೆ ಬಾಲಸರಸ್ವತಿ, ರುಕ್ಮಿಣಿದೇವಿ, ಅರುಂಧತಿ, ಯಾಮಿನಿ ಕೃಷ್ಣಮೂರ್ತಿ, ವೈಗಾಲಿನಿ ಸಾರಾಬಾಯಿ, ಪದ್ಮಾಸುಬ್ರಮಣ್ಯಂ, ಸಂಯುಕ್ತ ಪಾನಿ ಗ್ರಹಿ ಹೆಮಾಮಾಲಿನಿ.

ಯಕ್ಷಗಾನ – ಕರ್ನಾಟಕ :

  • ಇದು ಕರ್ನಾಟಕದ ಶಾಸ್ತ್ರೀಯ ನೃತ್ಯವಾಗಿದ್ದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.
  • ಇದನ್ನು ಹಬ್ಬ, ಜಾತ್ರೆಗಳಿಂದ ಬಯಲಾಟವಾಗಿ ಪ್ರಸ್ತುತಪಡಿಸಲಾಗುವುದು.
  • ಇಲ್ಲಿ ಪುರುಷರು ಮಾತ್ರ ಭಾಗವಹಿಸುತ್ತಿದ್ದು ರಾಮಾಯಣ ಮತ್ತು ಮಹಾಭಾರತ ಕಥಾ ಪ್ರಸಂಗಗಳನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಲಾಯಿತು.
  • ಇದರಲ್ಲಿ ೨ ಪ್ರಕಾರಗಳಿವೆ

*ಮೂಡಲಪಾಯ

*ಪಡುವಲ ಪಾಯ

ಕಥಕಳಿ – ಕೇರಳ :

  • ಇದು ಕೇರಳದ ಶಾಸ್ತ್ರೀಯ ನೃತ್ಯವಾಗಿದೆ. ಪ್ರಮುಖ ಉದ್ದೇಶ ದೇವತಾ ತೃಪ್ತಿಯಾಗಿದೆ.
  • ಇದು ರಾಮಾಯಣದ ಮತ್ತು ಮಹಾಭಾರತದ ಕಥಾ ಪ್ರಸಂಗಗಳನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ.
  • ಆಕರ್ಷಕ ವರ್ಣಮಯ ವಸ್ತ್ರಾಭರಣ ಆಂಗೀಕ ಅಭಿನಯಕ್ಕೆ ಹೆಚ್ಚು ಪ್ರಶಸ್ತ್ಯವಿದೆ.
  • ಇಲ್ಲಿ ಪುರುಷರು ಮಾತ್ರ ಭಾಗವಹಿಸುತ್ತಾರೆ. ಇದರಲ್ಲಿ ೨ ಪ್ರಕಾರಗಳಿವೆ.

* ತಾಂಡವ ಪ್ರಧಾನ * ರೌದ್ರರಸ

ಮೋಹಿನಿ ಅಟ್ಟಂ – ಕೇರಳ :

  • ಇದು ಕೇರಳದ ಶಾಸ್ತ್ರೀಯ ನೃತ್ಯವಾಗಿದ್ದು ದೇವದಾಸಿ ಪದ್ದತಿ ಮೂಲಕ ಬೆಳೆದು ಬಂದ ನೃತ್ಯವಾಗಿದೆ.
  • ಇಲ್ಲಿ ಮಹಿಳೆಯರು ಮಾತ್ರ ಭಾಗವಹಿಸುತ್ತಿದ್ದು ವಿಷ್ಣು ಮೋಹಿನಿಯಾಗಿ ಭಸ್ಮಾಸುರನನ್ನು ಸಂಹರಿಸುವ ಪ್ರಸಂಗವನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಲಾಗುವುದು.
  • ಇದು ೧೬ ನೇ ಶತಮಾನದಲ್ಲಿ ಸಂಪೂರ್ಣವಾಗಿ ನಿಂತು ಹೋಗಿತ್ತು ಮತ್ತೆ ೧೯ನೇ ಶತಮಾನದಲ್ಲಿ ತಿರುವನಂತಪುರದ ಅರಸ ತಿರುನಾಡರಿಂದ ಪುನರ್‌ ಜನ್ಮ ಪಡೆಯಿತು.
  • ಇದರಲ್ಲಿ ೨ ಪ್ರಕಾರಗಳಿವೆ

*ನೃತ *ನೃತ್ಯ

ಕುಚಿಪುಡಿ – ಆಂದ್ರಪ್ರದೇಶ ಮತ್ತು ತೆಲಂಗಾಣ :

  • ಇದು ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಶಾಸ್ತ್ರೀಯ ನೃತ್ಯವಾಗಿದ್ದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕುಚಿಪುಡಿ ಎಂಬ ಗ್ರಾಮದಲ್ಲಿ ತೀರ್ಥನಾರಾಯಣ ಸಿದ್ದೇಂದ್ರಯೋಗಿಗಳು ಈ ನೃತ್ಯವನ್ನು ಹುಟ್ಟು ಹಾಕಿದರು.
  • ಇಲ್ಲಿ ಕೃಷ್ಣ ಮತ್ತು ರುಕ್ಮಿಣಿಯರ ಮೇಲಿನ ಭಕ್ತಿಯನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಗಿದೆ.
  • ಇದರ ಕಲಾವಿದರನ್ನು ಭಾಗವತರು ಎಂದು ಕರೆಯಲಾಗುತ್ತದೆ.
  • ಇದರಲ್ಲಿ ೩ ಪ್ರಕಾರಗಳಿವೆ

*ಭಾವುಕಲಾಪ *ವಲ್ಲಿಕಲಾಪ * ಭಾಗವತ ಮೇಳ

ಓಡಿಸ್ಸಾ – ಓಡಿಸ್ಸಾ :

ಇದು ಓಡಿಸ್ಸಾ ರಾಜ್ಯದ ಶಾಸ್ತ್ರೀಯ ನೃತ್ಯವಾಗಿದೆ. ಕಳಿಂಗವನ್ನಾಳಿದ ಖಾರವೇಲ ಮನೆತನದಿಂದ ಬೆಳೆದು ಬಂದಿದೆ. ಇದನ್ನು ಭುವನೇಶ್ವರ ಮತ್ತು ಪುರಿಜಗ್ನನಾಥ ದೇವಾಲಯದಲ್ಲಿ ಪ್ರಸ್ತುತ ಪಡಿಸಲಿದ್ದಾರೆ.

ಇದರ ಉದ್ದೇಶ ದೇವತಾ ತೃಪ್ತಿಯೊಂದು ಜಯದೇವ ರಚಿಸಿದ ಗೀತಗೋವಿಂದ ಗ್ರಂಥದಲ್ಲಿನ ಕೃಷ್ಣನ ಮೇಲಿನ ಭಕ್ತಿಯನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಗುವುದು. ಇಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸುವರು.

ಕಥಕ್‌ – ಉತ್ತರ ಪ್ರದೇಶ :

  • ಇದು ಉತ್ತರ ಪ್ರದೇಶದ ಶಾಸ್ತ್ರೀಯ ನೃತ್ಯವಾಗಿದ್ದು, ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಹೆಚ್ಚು ಪ್ರಚಲಿತವಿದೆ.
  • ಪ್ರಾರಂಭದಲ್ಲಿ ಭಕ್ತಿ ಪ್ರಧಾನವಾದ ಈ ನೃತ್ಯ ಮೊಘಲ್‌ ಸುಲ್ತಾನರ ಆಡಳಿತದಲ್ಲಿ ಪರ್ಶಿಯನ್‌, ಅರೇಬಿಯ, ಸಂಸ್ಕೃತದಿಂದ ಪ್ರಭಾವಗೊಂಡು ಮನರಂಜನೆಯ ರೂಪ ಪಡೆಯಿತು.
  • ಚಕ್ಕರ್‌ ಎಂಬುದು ವೃತ್ತಾಕಾರದಲ್ಲಿ ನಟಿಸುವುದು. ಈ ನೃತ್ಯದ ವಿಶೇಷತೆಯಾಗಿದೆ.

ಮಣಿಪುರಿ – ಮಣಿಪುರಿ :

  • ಇದು ಮಣಿಪುರದ ಶಾಸ್ತ್ರೀಯ ನೃತ್ಯವಾಗಿದ್ದು, ಪುರುಷರು ಮತ್ತು ಮಹಿಳೆಯರು ಕೈಕಾಲುಗಳಿಗೆ ಗೆಜ್ಜೆಕಟ್ಟಿಕೊಂಡು ನೃತ್ಯ ಮಾಡುತ್ತಾರೆ.
  • ಇದರ ಉದ್ದೇಶ ದೇವತಾ ತೃಪ್ತಿಯಾಗಿದ್ದು ಕೃಷ್ಣ ಮತ್ತು ರಾಧೆಯ ಸರಸಲ್ಲಾಪದ ಪ್ರಸಂಗವನ್ನು ನೃತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತದೆ.

FAQ

ಭರತನಾಟ್ಯಂ ಯಾವ ರಾಜ್ಯದ ನೃತ್ಯವಾಗಿದೆ ?

ತಮಿಳುನಾಡು

ಕರ್ನಾಟಕದ ನೃತ್ಯವಾಗಿದೆ ?

ಯಕ್ಷಗಾನ

ಇತರೆ ವಿಷಯಗಳು :

ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ

ಕರ್ನಾಟಕದಲ್ಲಿನ 10 ಜಿಲ್ಲೆಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *