ನನ್ನ ಕನಸಿನ ಭಾರತದ ಬಗ್ಗೆ ಪ್ರಬಂಧ | Essay on my dream India in Kannada

ನನ್ನ ಕನಸಿನ ಭಾರತದ ಬಗ್ಗೆ ಪ್ರಬಂಧ Essay on my dream India Nanna Kanasina Bharta Prabandha in Kannada

ನನ್ನ ಕನಸಿನ ಭಾರತದ ಬಗ್ಗೆ ಪ್ರಬಂಧ

Essay on my dream India in Kannada
Essay on my dream India in Kannada

ಈ ಲೇಖನಿಯಲ್ಲಿ ನನ್ನ ಕನಸಿನ ಭಾರತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಪ್ರಗತಿಯನ್ನು ಹೊಂದಬೇಕು. ಭಾರತವು ತಾಂತ್ರಿಕವಾಗಿ ಮುಂದುವರೆದಿದೆ, ಕೃಷಿಯಲ್ಲಿ ಮುಂದುವರೆದಿದೆ ಜೊತೆಗೆ ವೈಜ್ಞಾನಿಕವಾಗಿಯೂ ಉತ್ತಮವಾಗಬೇಕೆಂದು ನಾನು ಬಯಸುತ್ತೇನೆ. ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಭಾರತವು ಪ್ರಗತಿಯನ್ನು ಸಾಧೀಸಬೇಕು.

ವಿಷಯ ವಿವರಣೆ

ನನ್ನ ಕನಸಿನ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿ ಮತ್ತು ರಸ್ತೆಯಲ್ಲಿ ಮುಕ್ತವಾಗಿ, ಸ್ವಾತಂತ್ರವಾಗಿ ಬದುಕುಂತಿರಬೇಕು. ಇದು ಎಲ್ಲರಿಗೂ ಸಮಾನತೆಯ ಸ್ವಾತಂತ್ರ್ಯವನ್ನು ಹೊಂದಿರುವ ಸ್ಥಳವಾಗಿದೆ ಮತ್ತು ಪ್ರತಿಯೊಬ್ಬರೂ ಅದನ್ನು ತಮ್ಮ ನಿಜವಾದ ಅರ್ಥದಲ್ಲಿ ಆನಂದಿಸಬಹುದು. ಇದಲ್ಲದೆ, ಇದು ಜಾತಿ, ಬಣ್ಣ, ಲಿಂಗ, ಧರ್ಮ, ಸಾಮಾಜಿಕ ಅಥವಾ ಆರ್ಥಿಕ ಸ್ಥಿತಿ ಮತ್ತು ಜನಾಂಗದ ಯಾವುದೇ ತಾರತಮ್ಯದ ಸ್ಥಳವಾಗಿದೆ. ಜೊತೆಗೆ, ನಾನು ಅಭಿವೃದ್ಧಿ ಮತ್ತು ಬೆಳವಣಿಗೆಯ ಸಮೃದ್ಧಿಯನ್ನು ನೋಡುವ ಸ್ಥಳವಾಗಿ ನೋಡುತ್ತೇನೆ.

ನನ್ನ ಕನಸಿನ ಭಾರತದಲ್ಲಿ,

ಶಿಕ್ಷಣ :

ನನ್ನ ಕನಸಿನ ಭಾರತದಲ್ಲಿ ಶಿಕ್ಷಣದಿಂದ ಯಾರು ಕೂಡ ವಂಚಿತರಾಗಬಾರದು. ಸಂಪೂರ್ಣವಾಗಿ ಎಲ್ಲರಿಗೂ ಶಿಕ್ಷಣವು ದೊರಕುವಂತೆ ಆಗಬೇಕು. ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರವು ಹಲವಾರು ಯೋಜನೆಗಳು ಮತ್ತು ಕಡ್ಡಾಯ ಶಿಕ್ಷಣವನ್ನು ಎಲ್ಲರೂ ಹೊಂದುವಂತಹ ಕ್ರಮಗಳನ್ನು ಜಾರಿಗೆ ತರುವುದು. ನನ್ನ ಕನಸಿನ ಭಾರತವು ಎಲ್ಲರಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸ್ಥಳವಾಗಬೇಕು. ನನ್ನ ಕನಸಿನ ಭಾರತದಲ್ಲಿ ಅನಕ್ಷರತೆಯೆಂಬುದು ಇರಬಾರದು. ಪ್ರತಿಯೊಬ್ಬ ವ್ಯಕ್ತಿಯು ಜೀವನೋಪಾಯವನ್ನು ಗಳಿಸಲು ಅನುವು ಮಾಡಿಕೊಡುವ ಶಿಕ್ಷಣದ ವ್ಯವಸ್ಥೆಯನ್ನು ಭಾರತವು ಜಾರಿಗೆ ತರಲು ನಾನು ಬಯಸುತ್ತೇನೆ. ನನ್ನ ಕನಸಿನ ಭಾರತದಲ್ಲಿ ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕೀಳು ವೃತ್ತಿಯಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಶಾಲೆಗೆ ಸೇರಿಸಲು ಪ್ರೋತ್ಸಾಹಿಸಬೇಕೆಂದು ನಾನು ಬಯಸುತ್ತೇನೆ.

ಮಹಿಳೆಯರಿಗೆ ಸ್ವಾತಂತ್ರ :

ನನ್ನ ಕನಸಿನ ಭಾರತದಲ್ಲಿ ಮಹಿಳೆಯರಿಗೆ ಗೌರವವನ್ನು ನೀಡಬೇಕು, ಯಾರು ಕೂಡ ಮಹಿಳೆಯರನ್ನು ಬೋಗದ ವಸ್ತುವಿನಂತೆ ಕಾಣಬಾರದು. ಮಹಿಳೆಯರ ವಿರುದ್ಧ ಸಾಕಷ್ಟು ತಾರತಮ್ಯವಿದೆ. ಈಗ ಮಹಿಳೆಯರು ಮನೆಯಿಂದ ಹೊರಬಂದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ಮುಂದಾಗುತ್ತಿದ್ದಾರೆ ಇದು ನಮ್ಮೆಲ್ಲರಿಗೂ ಕೂಡ ಹೆಮ್ಮೆ ತರುವಂತಹ ವಿಷಯವಾಗಿದೆ. ಸಮಾಜದ ಮನಸ್ಥಿತಿಯನ್ನು ಬದಲಾಯಿಸಲು ನಾವು ಶ್ರಮಿಸಬೇಕು ನನ್ನ ಕನಸಿನ ಭಾರತ ಮಹಿಳೆಯರನ್ನು ಸಮಾನ ಮಟ್ಟದಲ್ಲಿ ಇರಿಸಲು ಬಯಸುತೇನೆ. ಮಹಿಳೆಯರು ಸುರಕ್ಷಿತವಾಗಿ ಮತ್ತು ರಸ್ತೆಯಲ್ಲಿ ಮುಕ್ತವಾಗಿ ನಡೆಯುವಂತೆ ನಮ್ಮ ದೇಶವಾಗಲಿ. ಮಹಿಳೆಯರಿಗೆ ಸ್ವಾತಂತ್ರರಾಗಿರುವಂತೆ ಅಗಲಿ. ಮಹಿಳೆಯರು ಮನೆಯಿಂದ ಹೊರಬಂದು ಎಲ್ಲರೂ ಶಿಕ್ಷಣವನ್ನು ಪಡೆಯುವಂತೆ ಅಗಬೇಕು. ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು.

ಉದ್ಯೋಗಗಳು :

೧. ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಉತ್ತಮವಾದ ಕೆಲಸದ ಅಗತ್ಯವಿರುತ್ತದೆ. ಅವರ ಅರ್ಹತೆಗೆ ಸರಿಯಾದ ಕೆಲಸಗಳು ದೊರಕುವಂತಾಗಬೇಕು.

೨. ದೇಶದ ದುರ್ಬಲ ಕೈಗಾರಿಕಾ ಬೆಳವಣಿಗೆಯೂ ಇದಕ್ಕೆ ಒಂದು ಕಾರಣ, ಜೊತೆಗೆ ಮೀಸಲಾತಿಯು ಈ ಹಾದಿಯಲ್ಲಿ ಅಡ್ಡಿಯಾಗಿದೆ. ಅರ್ಹತೆವುಳ್ಳಂತಹ ಅಭ್ಯರ್ಥಿಗಳು ತಮ್ಮ ಉತ್ತಮ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಅರ್ಹತೆ ಇಲ್ಲದವರು ಲಂಚವನ್ನು ನೀಡಿ ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

೩.ಭಾರತದಲ್ಲಿ ಸಾಕಷ್ಟು ವಿದ್ಯಾವಂತರಿದ್ದರೂ ಭ್ರಷ್ಟಾಚಾರ ಮತ್ತು ಇತರೆ ಕಾರಣದಿಂದ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ.

ಉತ್ತಮ ಮೂಲಸೌಕರ್ಯ :

ಉತ್ತಮ ಮೂಲಸೌಕರ್ಯಗಳನ್ನು ನೀಡುವುದು. ಮನೆ ಇಲ್ಲದವರಿಗೆ ಮನೆಯ ವ್ಯವಸ್ಥೆ ಮಾಡಬೇಕು. ಸುಂದರವಾದ ಜೀವನ ನೆಡೆಸಲು ಸಾದ್ಯವಾಗುತ್ತದೆ. ಸರ್ಕಾರದ ಸಹಾಯದಿಂದ ಅವರ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ. ಮಹಿಳೆಯರಿಗೆ ಬಯಲು ಶೌಚ ಮಾಡುವುದು ಅವರಿಗೆ ಹಿಂಸೆಯಾಗುತ್ತದೆ. ಸರ್ಕಾರವು ಬಯಲು ಶೌಚ ನಿಲ್ಲಿಸುವಂತೆ ಮಾಡುವುದು, ಹಾಗೆ ಅವರಿಗೆ ಉತ್ತಮ ಶೌಚಲಯದ ವ್ಯವಸ್ಥೆ ಮಾಡಬನೇಕು. ಮಹಿಳೆಯರ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನವನ್ನು ನೀಡುವುದು. ಸರ್ಕಾರದಿಂದ ಉಚಿತ ವಸತಿ ಮತ್ತು ಊಟ ನೀಡುವುದು. ಬಡವರ ಮಕ್ಕಳಿಗೆ ತರಗತಿ ಶುಲ್ಕವನ್ನು ಕಡಿಮೆ ಮಾಡಬೇಕು. ಬಡವರ ಜೀವನಕ್ಕೆ ಬೇಕಾಗುವ ಎಲ್ಲ ಮಾಹಿತಿ ಮತ್ತು ಸವಲತ್ತುಗಳನ್ನು ನೀಡುವುದು, ಅವರ ಜೀವನ ಸುಧಾರಿಸುವಂತೆ ಮಾಡುವುದು.

ನೈರ್ಮಲ್ಯ ಕಾಪಾಡುವುದು :

ಭಾರತದಲ್ಲಿ ಜನಸಂಖ್ಯೆ ಹೆಚ್ಚಾದಂತೆ ನೈರ್ಮಲ್ಯವು ಕೂಡ ಹೆಚ್ಚಾಗುತ್ತದೆ. ನಮ್ಮ ದೇಶ ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ನಮ್ಮ ಸುಂದರವಾದ ದೇಶವನ್ನು ನೈರ್ಮಲ್ಯದಿಂದ ಕಾಪಾಡಿಕೊಳ್ಳಬೇಕು. ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿದೆ ಸರ್ಕಾರ ಅದರ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳುವುದು ಸೂಕ್ತ. ನೈರ್ಮಲ್ಯವನ್ನು ಕಾಪಾಡುವುದಕ್ಕೆ ಶೌಚಾಲಯದ ವ್ಯವಸ್ಥೆಯನ್ನು ಸರ್ಕಾರ ಒದಗಿಸಬೇಕು. ಹಸಿ ಕಸ ಮತ್ತು ಒಣ ಕಸಗಳ ವಿಲೇವಾರಿ ಸರಿಯಾದ ಮಾರ್ಗದಲ್ಲಿ ಕೆಲಸವನ್ನು ನಿರ್ವಹಿಸಬೇಕು. ಆಗ ನೈರ್ಮಲ್ಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ನನ್ನ ಕನಸಿನ ಭಾರತವನ್ನು ಈಡೇರಿಸುವುದು ಹೇಗೆ

ನಾವು ಎಲ್ಲವನ್ನೂ ಒಟ್ಟಾಗಿ ನೋಡಿದರೆ, ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಕಾರಣಗಳು ಮತ್ತು ಪರಿಹಾರಗಳನ್ನು ನಾವು ಗುರುತಿಸಲು ಸಾಧ್ಯವಾಗುತ್ತದೆ. ಒಂದು ಶ್ರೇಷ್ಠ ರಾಷ್ಟ್ರವನ್ನು ನಿರ್ಮಿಸುವುದು ಮತ್ತು ಅದರ ಆಳವಾಗಿ ಬೇರೂರಿರುವ ಸಮಸ್ಯೆಗಳನ್ನು ಪರಿಹರಿಸುವುದು, ಸಾಧಿಸಬಹುದಾದ ಗುರಿಯಾಗಿದೆ. ಭಾರತವು ಶ್ರೇಷ್ಠ ದೇಶವಾಗಲು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರಬೇಕು.

ನ್ಯಾಯಯುತ ಮತ್ತು ಪರಿಣಾಮಕಾರಿ ಕಾನೂನು
ಶಾಂತಿಯ ಸಮಾಜವನ್ನು ನಿರ್ಮಿಸುವುದು.
ಎಲ್ಲರಿಗೂ ಸಮಾನವಾದ ಅವಕಾಶವನ್ನು ಕಲ್ಪಿಸುವುದು.
ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವುದು.
ಭ್ರಷ್ಟವಲ್ಲದ ವ್ಯವಸ್ಥೆಗಳು
ಭ್ರಷ್ಟವಲ್ಲದ ವ್ಯವಸ್ಥೆಗಳು
ಪಕ್ಷಪಾತವಿಲ್ಲದ ಶೈಕ್ಷಣಿಕ ವ್ಯವಸ್ಥೆ

ಉಪಸಂಹಾರ

ನನ್ನ ಕನಸಿನ ಭಾರತವು ಬೇರೆ ದೇಶಕ್ಕೆ ಆದರ್ಶ ದೇಶವಾಗಬೇಕು, ಮುಂಬರುವ ಪೀಳಿಗೆಯು ಉತ್ತಮ ಜೀವನವನ್ನು ಹೊಂದಲು ಮತ್ತು ಈ ದೇಶದಲ್ಲಿ ವಾಸಿಸಲು ಅರ್ಹವಾದ ಎಲ್ಲವನ್ನೂ ಪಡೆಯಬೇಕೆಂದು ನಾನು ಬಯಸುತ್ತೇನೆ. ನನ್ನ ದೇಶವು ರಾಜಕೀಯವಾಗಿ ಸದೃಢವಾಗಿರಬೇಕು ಮತ್ತು ಪಕ್ಷಪಾತರಹಿತವಾಗಿರಬೇಕು, ನನ್ನ ದೇಶದ ಪ್ರಜಾಪ್ರಭುತ್ವವು ಬಲಿಷ್ಠ ಮತ್ತು ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ. ನಮ್ಮ ಜೀವನದ ಪ್ರತಿಯೊಂದು ಅಂಶದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಬೇಕು.

FAQ

ಜನಸಂಖ್ಯೆಯಲ್ಲಿ ಭಾರತದ ಸ್ಥಾನವೇನು ?

೨ನೇ ಸ್ಥಾನವನ್ನು ಹೊಂದಿದೆ.

ನನ್ನ ಕನಸಿನ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ?

ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರವು ಅನೇಕ ಉಪಕ್ರಮಗಳನ್ನು ಹೊಂದಿದ್ದರೂ. ಆದರೆ ಅದರ ನಿಜವಾದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳದ ಅನೇಕ ಜನರಿದ್ದಾರೆ. ನನ್ನ ಕನಸಿನ ಭಾರತವು ಎಲ್ಲರಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸ್ಥಳವಾಗಲಿದೆ.

ಇತರೆ ವಿಷಯಗಳು :

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಬಂಧ

ಸಾವಿತ್ರಿಬಾಯಿ ಫುಲೆ ಜೀವನ ಚರಿತ್ರೆ

Leave a Reply

Your email address will not be published. Required fields are marked *