ಕರ್ನಾಟಕದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ | Information About Historical Places in Karnataka in Kannada

ಕರ್ನಾಟಕದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ Information About Historical Places in Karnataka Karnatakada Itihasika Sthalagala Bagge Mahiti in Kannada

Information About Historical Places in Karnataka in Kannada
Information About Historical Places in Karnataka in Kannada

ಈ ಲೇಖನಿಯಲ್ಲಿ ಕರ್ನಾಟಕದ ಐತಿಹಾಸಿಕ ಸ್ಥಳಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕರ್ನಾಟಕದ ಐತಿಹಾಸಿಕ ಸ್ಥಳಗಳು

ಅಂಬಿಕಾ ನಗರ :

ಈ ನಗರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಕಾಳಿನದಿ ಯೋಜನಾ ಪ್ರದೇಶ, ನಾಗಝರಿ ವಿದ್ಯುತ್‌ ತ್ಪಾದನಾ ಕೇಂದ್ರವಿದೆ.

ಉತ್ತರ ಕರ್ನಾಟಕದ ವಿಹಾರಧಾಮವಾಗಿದೆ.

ಆಗುಂಬೆ :

ಶಿವಮೊಗ್ಗ ಜಿಲ್ಲೆಯಲ್ಲಿದೆ.

ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ, ಇಲ್ಲಿ ಸೂರ್ಯಾಸ್ತ ನೋಡಲು ಬಲು ಸುಂದರವಾಗಿದೆ.

ಇಕ್ಕೇರಿ :

ಶಿವಮೊಗ್ಗ ಜಿಲ್ಲೆಯಲ್ಲಿದೆ.

ಕೆಳದಿ ರಾಜರ ರಾಜಧಾನಿ, ಅಘೋರೇಶ್ವರ ದೇವಸ್ಥಾನವಿದೆ.

ಉಡುಪಿ :

ಜಿಲ್ಲಾ ಸ್ಥಳವಾಗಿದ್ದು ಕೃಷ್ಣಮಠಕ್ಕಾಗಿ ಪ್ರಸಿದ್ದವಾಗಿದೆ.

ಬೆಳ್ಳಿರಥ, ಕನಕನ ಕಿಂಡಿ, ಅಷ್ಟಮಠಗಳು, ಮತ್ತು ಮದ್ಯತೀರ್ಥ, ಅನಂತೇಶ್ವರ ದೇವಾಲಯ, ಮಲ್ಲೇತೀರ, ಸೇಂಟ್‌ ಮೇರಿಸ್‌ ದ್ವೀಪ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ.

ಉಳವಿ :

ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಶೈವ ಕ್ಷೇತ್ರ ಚೆನ್ನ ಬಸವಣ್ಣನವರು ದೇಶಾಂತರ ಕೈಕೊಂಡು ಕೊನೆಗೆ ಉಳವಿಯಲ್ಲಿ ತಮ್ಮ ಕೊನೆಯ ದಿನವನ್ನು ಕಳೆದರು.

ಐಹೊಳೆ :

ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ.

ನಾಗರ ಮತ್ತು ದ್ರಾವಿಡ ವಾಸ್ತುಶೈಲಿಗಳ ದೇವಾಲಯಗಳ ಪ್ರಯೋಗ ಶಾಲೆಯಾಗಿದ್ದ ಇತಿಹಾಸ ಪ್ರಸಿದ್ದ ಸ್ಥಳ, ಲಾಡಖಾನ್‌ ದೇವಾಲಯ, ಹುಚ್ಚುಮಲ್ಲಿ ಗುಡಿ, ಮೇಗುತಿ, ದುರ್ಗ ದೇವಾಲಯಗಳು ಇಲ್ಲಿವೆ.

ಕಾರ್ಕಳ :

ಇದು ಉಡುಪಿ ಜಿಲ್ಲೆಯಲ್ಲಿದೆ.

೪೧ ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿಯನ್ನು ಕ್ರಿ. ಶಕ ೧೪೩೨ ರಲ್ಲಿ ಭೈರರಸ ಮನೆತನದ ವೀರ ಪಾಂಡ್ಯ ದೇವನು ಸ್ಥಾಪಿಸಿದನು.

ಕಾರವಾರ :

ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಜಿಲ್ಲಾ ಕೇಂದ್ರ ಹಾಗೂ ಬಂದರು, ನಿಸರ್ಗ ರಮಣೀಯ ಪ್ರದೇಶಗಳಿವೆ. ಕಾಳಿನದಿ ಸಮುದ್ರವನ್ನು ಸೇರುವ ಅಳಿವೆ ಸುಂದರವಾದ ಪ್ರದೇಶವಿದೆ.

ನೌಕನೆಲೆ ಹಾಗೂ ಕೈಗಾ ಅಣುವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲಾಗಿದೆ.

ಕಿತ್ತೂರು :

ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚೆನ್ನಮ್ಮ ಅಳಿದ ಊರು.

ರಾಣಿ ಚೆನ್ನಮ್ಮನ ನೆನಪಿಗೆ ಒಂದು ವಸ್ತು ಸಂಗ್ರಹಾಲಯವಿದೆ.

ಸೈನಿಕ ಶಾಲೆ ಹಾಗೂ ಕೋಟೆಯಿದೆ.

ಕುದುರೆ ಮುಖ :

ಚಿಕ್ಕಮಗಳೂರು ಜಿಲ್ಲೆಗೆ ಸೇರಿದ.

೬೨೧೫ ಅಡಿ ಎತ್ತರದ ಬೆಟ್ಟ ನಿಸರ್ಗ ಸೌಂದರ್ಯಕ್ಕೆ ಹೆಸರಾದ ಪ್ರದೇಶ, ಸುಂದರ ಗಿರಿಧಾಮ, ಕಬ್ಬಿಣದ ಅದಿರು ತೆಗೆಯುವ ಕೈಗಾರಿಕೆಗೆ ಪ್ರಸಿದ್ದಿ.

ಕೂಡಲ ಸಂಗಮ :

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ.

ಪುಣ್ಯಸ್ಥಳ, ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಯವಾದ ಸ್ಥಳ.

ಇಲ್ಲಿ ವೀರಶೈವರ ಶರಣರ ಮಂಟಪ ಹಾಗೂ ಅನುಭವ ಮಂಟಪ ಇದೆ. ಮಲಫ್ರಭಾ, ಕೃಷ್ಣ ಈ ಸ್ಥಳದಲ್ಲಿ ಸಂಗಮವಾಗಿದೆ.

ಕೃಷ್ಣರಾಜಸಾಗರ :

ಇದು ಮಂಡ್ಯ ಜಿಲ್ಲೆಯಲ್ಲಿದೆ. ಸುಂದರ ಜಲಾಶಯ, ಕಾವೇರಿಗೆ ಕಟ್ಟಲಾಗಿರುವ ಅಣೆಕಟ್ಟು ವಿಶ್ವವಿಖ್ಯಾತ ಅಭಿಯಂತರ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ನಿರ್ಮಿಸಿದ್ದಾರೆ.

ಕೆ. ಜಿ. ಎಫ್‌ :

ಇದು ಕೋಲಾರ ಜಿಲ್ಲೆಯಲ್ಲಿದೆ.

ಪ್ರಪಂಚದಲ್ಲೇ ಆಳವಾದ ಚಿನ್ನದ ಗಣಿ ಇರುವ ಪ್ರದೇಶವಾಗಿದ್ದು, ಕರ್ನಾಟಕದ ಪ್ರಸಿದ್ದಿ ಚಿನ್ನದ ಗಣಿಯಾಗಿದೆ. ಬಿ. ಇ. ಎಂ. ಎಲ್.‌ ಕಾರ್ಖಾನೆ ಸಹ ಇದೆ.

ಕೆಮ್ಮಣ್ಣುಗುಂಡಿ :

ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.

ಕೃಷ್ಣರಾಜೇಂದ್ರ ಗಿರಿಧಾಮ, ಸುಸಜ್ಜಿತ ಬಂಗಲೆಗಳು ಉದ್ಯಾನವನ, ಸಿಂಕೋನ ವೃಕ್ಷಗಳಿಗೆ ಖ್ಯಾತಿ.

ಇಲ್ಲಿ ಅಧಿಕವಾಗಿ ಕಬ್ಬಿಣದ ಅದಿರು ದೊರೆಯುತ್ತಿದ್ದು, ಖ್ಯಾತ ಇಂಜಿನಿಯರ್‌ ಎಂ ವಿಶ್ವೇಶ್ವರಯ್ಯನವರು ಮೊಟ್ಟ ಮೊದಲು ಕಬ್ಬಿಣದ ಅದಿರನ್ನು ಬಳಸಿಕೊಳ್ಳಲುವ ಯೋಜನೆ ಕೈಗೊಂಡರು. ಈಗಲೂ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಕೊಲ್ಲೂರು :

ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.

ಮೂಕಾಂಬಿಕೆ ದೇವಾಲಯವಿದೆ. ಹಾಗೂ ಮೂಕಾಂಬಿಕಾ ಅಭಯಾರಣ್ಯ ಧಾಮವಾಗಿದೆ.

ಗದಗ :

ಜಿಲ್ಲಾ ಕೇಂದ್ರ, ವೀರನಾರಾಯಣ ದೇವಸ್ಥಾನದಿಂದ ಪ್ರಸಿದ್ದಿ.

ಕುಮಾರವ್ಯಾಸನು ಇಲ್ಲಿ ಗದುಗಿನ ಭಾರತವನ್ನು ಬರೆದನು.

ಪ್ರಸಿದ್ದವಾದ ತ್ರಿಕೋಟೇಶ್ವರ ದೇವಸ್ಥಾನವಿದೆ. ಡಾ ಪಂಡಿತ ಪುಟ್ಟರಾಜ ಗವಾಯಿಗಳವರ ಆಶ್ರಮವಿದೆ.

ಪ್ರಸಿದ್ದವಾದ ತೋಂಟದಾರ್ಯ ಮಠ ಇದೆ.

ಗುಲ್ಬರ್ಗಾ :

ಇದು ಜಿಲ್ಲಾ ಕೇಂದ್ರವಾಗಿದೆ.

ಬಂದೇ ನವಾಜ್‌ ದರ್ಗಾ, ಸಾತ್‌ ಗುಮ್ಮದ್‌, ಜಾಮೀ ಮಸೀದಿ ಕೋಟೆ ಇವುಗಳಿಂದ ಖ್ಯಾತಿ ಪಡೆದುಕೊಂಡಿದೆ.

ಇದು ಬಹಮನಿ ಸುಲ್ತಾನರ ರಾಜಧಾನಿಯಾಗಿತ್ತು.

ಇಲ್ಲಿ ವೀರಶೈವ ಶರಣ ಬಸವೇಶ್ವರ ಅಪ್ಪಗಳ ಮಠವಿದೆ.

ಐತಿಹಾಸಿಕ ಕರ್ನಾಟಕ ವಿಧಾನಸಭೆ ಅಧಿವೇಶನವು ಇತ್ತೀಚೆಗೆ ನಡೆಯಿತು ಮತ್ತು ರಾಜ್ಯದ ಎರಡನೆ ಸಂಚಾರಿ ಹೈಕೋರ್ಟ್‌ ಪೀಠ ಇಲ್ಲಿದೆ.

ಗೋರೂರು :

ಇದು ಹಾಸನ ಜಿಲ್ಲೆಯಲ್ಲಿದೆ.

ಇಲ್ಲಿ ಹೇಮಾವತಿ ನದಿಗೆ ದೊಡ್ಡ ಅಣೆಕಟ್ಟನ್ನು ಕಟ್ಟಲಾಗಿದೆ.

ಪ್ರಸಿದ್ದಿ ಕನ್ನಡ ಸಾಹಿತಿ ಗೋರೂರು ರಾಮಸ್ವಾಮಿ ಐಯ್ಯಂಗಾರ್‌ ರಿಂದ ಪ್ರಸಿದ್ದಿ ಹೊಂದಿದೆ.

ಗೋಕರ್ಣ :

ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಯಾತ್ರಸ್ಥಳ, ಮಹಾಬಲೇಶ್ವರ ದೇವಸ್ಥಾನ ಖ್ಯಾತಿ, ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ.

ರಾವಣನು ಈಶ್ವರನನ್ನು ಕುರಿತು ತಪಸ್ಸು ಮಾಡಿ ಅವನಿಂದ ಆತ್ಮಲಿಂಗವನ್ನು ಪಡೆದುಕೊಂಡು ಹೋಗುವಾಗ ಈ ಸ್ಥಳದಲ್ಲಿ ಕಾರಣಾಂತರದಿಂದ ಆತ್ಮಲಿಂಗವನ್ನು ಗಣಪತಿ ಕೈಯಲ್ಲಿ ಕೊಟ್ಟಿದ್ದರಿಂದ ನೆಲಕ್ಕೆ ಇಡಲಾಗಿ ಆತ್ಮಲಿಂಗವು ನೆಲದಲ್ಲಿ ಉಳಿಯಿತು ಎಂಬ ಪೌರಾಣಿಕ ಹಿನ್ನೆಲೆ ಇದೆ.

ತಲಕಾಡು :

ಮೈಸೂರು ಜಿಲ್ಲೆಯಲ್ಲಿದೆ.

೧೨ ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನ ನಡೆಯುವ ಸ್ಥಳ.

ಕೀರ್ತಿನಾರಾಯಣ ದೇವಾಲಯ, ಪಾತಾಳೆಶ್ವರ ದೇವಾಲಯಗಳು ಪ್ರಸಿದ್ದವಾಗಿದೆ.

ತಲಕಾಡು ಗಂಗರ ರಾಜಧಾನಿಯಾಗಿತ್ತು.

FAQ

ತಲಕಾಡು ಯಾವ ಜಿಲ್ಲೆಯಲ್ಲಿದೆ ?

ಮೈಸೂರು

ಗೋಕರ್ಣ ಯಾವ ಜಿಲ್ಲೆಯಲ್ಲಿದೆ ?

ಉತ್ತರ ಕನ್ನಡ

ಇತರೆ ವಿಷಯಗಳು :

ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ಬಗ್ಗೆ ಮಾಹಿತಿ

ಭಾರತಕ್ಕೆ ಯೂರೋಪಿಯನ್ನರ ಆಗಮನ

Leave a Reply

Your email address will not be published. Required fields are marked *