ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಮಾಹಿತಿ | Information About Important Committees in India in Kannada

ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಮಾಹಿತಿ Information About Important Committees in India Bhartadallina Pramuka smitigala Bagge Mahiti in Kannada

ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಮಾಹಿತಿ

Information About Important Committees in India in Kannada
Information About Important Committees in India in Kannada

ಈ ಲೇಕನಿಯಲ್ಲಿ ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಎಸ್‌. ಕೆ ಧಾರ್‌ ಸಮಿತಿ 1948 :

  • ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾಷೆ ಆಧಾರದ ಮೇಲೆ ರಾಜ್ಯ ರಚಿಸಿದ ಪ್ರಥಮ ಸಮಿತಿಯಾಗಿದೆ.
  • ಇದರಲ್ಲಿ ಜೆ. ಎನ್‌ ಲಾಲ್‌ ಮತ್ತು ಪನ್ನಾಲಾಲ್‌ ಎಂಬ ಸದಸ್ಯರಿದ್ದರು.
  • ಇದು ಭಾಷೆಯ ಆಧಾರದ ಮೇಲೆ ರಾಜ್ಯ ರಚಿಸಬಾರದೆಂದು ಶಿಫಾರಸ್ಸು ಮಾಡಿತು.

ಜೆ. ವಿ. ಪಿ ಸಮಿತಿ 1948 :

  • ಭಾಷೆಯ ಆಧಾರದ ಮೇಲೆ ರಾಜ್ಯ ರಚಿಸುವ ಕುರಿತು ಅಧ್ಯಯನ ಮಾಡಲು ರಚಿಸಿದ ೨ನೇ ಸಮಿತಿಯಾಗಿದೆ.
  • ಇದರಲ್ಲಿ ಇದ್ದ ಸದಸ್ಯರು

ಜೆ – ಜವಹರ್‌ ಲಾಲ್‌ ನೆಹರು.

ವಿ – ವಲ್ಲಭಭಾಯಿ ಪಟೇಲ್‌

ಪಿ – ಪಟ್ಟಾಭಿ ಸೀತಾರಾಮಯ್ಯ

ಈ ಸಮಿತಿಯು ಕೂಡ ಭಾಷೆಯ ಆಧಾರದ ಮೇಲೆ ರಾಜ್ಯ ರಚಿಸಬಾರದೆಂದು ಶಿಪಾರಸ್ಸು ಮಾಡಿತು.

ಪಜಲ್‌ ಅಲಿ ಸಮಿತಿ 1953 :

  • ಭಾಷೆಯ ಆಧಾರದ ಮೇಲೆ ರಾಜ್ಯ ರಚಿಸುವ ಕುರಿತು ಅಧ್ಯಯನ ಮಾಡಲು ರಚಿಸಿದ ೩ನೇ ಸಮಿತಿಯಾಗಿದೆ.
  • ಇದರಲ್ಲಿ ಎಚ್. ಎನ್‌. ಕುಂಜ್ರು ಮತ್ತು ಕೆ. ಎನ್‌ ಫಣಿಕರ್‌ ಎಂಬ ಸದಸ್ಯರಿದ್ದರು.
  • ಇದು ೨ ವರ್ಷ ಇಡೀ ಭಾರತದಾದ್ಯಂತ ಅಧ್ಯಯನ ಮಾಡಿ ೧೯೫೫ ರಲ್ಲಿ ತನ್ನ ವರದಿ ಸಲ್ಲಿಸಿತು.
  • ಇದು ದೇಶದ ಏಕೆತೆ ಸಾಂಸ್ಕೃತಿ ಸಾಮರಸ್ಯ ಮತ್ತು ಆಡಳಿತವನ್ನು ಗಮನದಲ್ಲಿಟ್ಟುಕೊಂಡು ೧೬ ರಾಜ್ಯಗಳನ್ನು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳನ್ನು ಭಾಷೆಯ ಆಧಾರದ ಮೇಲೆ ರಚಿಸಬೇಕೆಂದು ಶಿಫಾರಸ್ಸು ಮಾಡಿತು.

ಕಾಕಾ ಕೇಳ್ಕರ್‌ ಸಮಿತಿ 1955 :

  • ಭಾರತ ಸ್ವಾತಂತ್ರ ಸಿಕ್ಕ ನಂತರ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದವರು ಯಾರು ಎಂಬುದನ್ನು ಅಧ್ಯಯ ಮಾಡಲು ರಚಿಸಿದ ಸ್ವತಂತ್ರ ಭಾರತದ ಪ್ರಥಮ ಹಿಂದೂಳಿದ ವರ್ಗದ ಸಮಿತಿಯಾಗಿದೆ.
  • ಇದು ತನ್ನ ವರದಿಯಲ್ಲಿ ಎಲ್ಲಾ ವರ್ಗದ ಮಹಿಳೆಯರು ಹಿಂದುಳಿದಿದ್ದಾರೆ ಮತ್ತು ಜಾತಿ ಆಧಾರದ ಮೇಲೆ ಹಿಂದುಳಿದವರೆಂದು ಪರಿಗಣಿಸಬೇಕೆಂದು ಶಿಫಾರಿಸಿತು.

ಮಹಾಜನ್‌ ಸಮಿತಿ 1966 :

  • ಕರ್ನಾಟಕದ ಮಹರಾಷ್ಟ್ರ ಗಡಿವಿವಾದ ಮತ್ತು ಕರ್ನಾಟಕ ಕೇರಳ ಗಡಿ ವಿವಾದ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.
  • ಇದು ಬೆಳಗಾವಿ ಯಾವಾಗಲೂ ಕರ್ನಾಟಕದ್ದು ಮತ್ತು ಕರ್ನಾಟಕ ಕಾಸರಗೂಡು ಕೇರಳಕ್ಕೆ ಸೇರಬೇಕೆಂದು ಶಿಫಾರಸ್ಸು ಮಾಡಿತು.

ನ್ಯಾಯಮೂರ್ತಿ ಸ್ವರ್ಣಸಿಂಗ್‌ ಸಮಿತಿ 1966 :

  • ಭಾರತ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಬೇಕೆಂಬ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿ.
  • ಇದು ರಷ್ಯಾದಿಂದ ಎರವಲು ಪಡೆದ ೮ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿತು.

ಕೆ. ಶಿವರಾಮನ್‌ ಸಮಿತಿ 1976 :

  • ಭಾರತದಲ್ಲಿನ ಕೃಷಿ ಮತ್ತು ಗ್ರಾಮೀಣಭಿವೃದ್ದಿಗಾಗಿ ಹಣಕಾಸು ಸಂಸ್ಥೆಯನ್ನು ಸ್ಥಾಪನೆ ಮಾಡಬೇಕೆಂಬ ಸಮಿತಿಯಾಗಿದೆ.
  • ಇದು ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿಗಾಗಿ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತು.

ನ್ಯಾ ಸರ್ಕಾರಿಯ ಸಮಿತಿ 1981 :

  • ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವಿನ ಅಧಿಕಾರ ಹಂಚಿಕೆಯ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಯಾಗಿದೆ.
  • ಇದು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಶಿಫಾರಸ್ಸು ಮೂಡಿತು.

ವರದ್ ರಾಜನ್‌ ಸಮಿತಿ 1981 :

  • ೧೯೮೪ ರಲ್ಲಿ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಮಿಥೈಲ್‌ ಐಸೋ ಸೈನೆಡ್‌ ಅನಿಲ ಸೋರಿಕೆಯಿಂದ ಸಂಭವಿಸಿದ ಅನಿಲ ದುರಂತದ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.

ನ್ಯಾ ಲೆಬನಾನ್‌ ಸಮಿತಿ 1983 :

  • ೧೯೮೪ ರಲ್ಲಿ ಅಯೋಧ್ಯಯ ಬಾಬ್ರಿ ಮಸೀದಿ ದ್ವಂಸದ ತನಿಖೆ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿ
  • ಇದು ೧೦೦೦ ಪುಟಗಳ ವರದಿಯನ್ನು ೨೦೦೯ ರಲ್ಲಿ ಸುಪ್ರಿಂಕೋರ್ಟ್‌ಗೆ ಸಲ್ಲಿಸಿತು.

ಕೃಷ್ಣ ಮಹಾಜನ್‌ ಸಮಿತಿ 1985 :

  • ಆಗ್ರಾದ ಯಮುನಾ ನದಿ ದಂಡೆಯಲ್ಲಿರುವ ತಾಜ್ ಮಹಲ್‌ ಸುತ್ತಮುತ್ತಲಿನ ವಾಯುಮಾಲಿನ್ಯ ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.

ನರಸಿಂಹನ್‌ ಸಮಿತಿ 1996 :

  • ಭಾರತದ ಬ್ಯಾಕಿಂಗ್‌ ವಲಯದಲ್ಲಿ ಸುಧಾರಣಾ ಕ್ರಮಗಳನ್ನು ತರಬೇಕೆಂಬ ಉದ್ದೇಶದಿಂದ RBI ಮಾಜಿ ಗವರ್ನರ್‌ ನರಸಿಂಹನ್‌ ಸಮಿತಿಯನ್ನು ರಚಿಸಲಾಯಿತು.

ಅಸಿಂ ದಾಸ್‌ ಗುಪ್ತಾ ಸಮಿತಿ 2001 :

  • ಭಾರತದಲ್ಲಿ GST ತೆರಿಗೆಯನ್ನು ಜಾರಿಗೊಳಿಸಬೇಕೆಂಬ ಉದ್ದೇಶದಿಂದ ಅಧ್ಯಯನ ಮಾಡಲು ರಚಿಸಿದ ಪ್ರಪ್ರಥಮ ಸಮಿತಿಯಾಗಿದೆ.

ಸಾಚಾರ್‌ ಸಮಿತಿ 2005 :

  • ಭಾರತದಲ್ಲಿ GST ತೆರಿಗೆಯನ್ನು ಜಾರಿಗೊಳಿಸಬೇಕೆಂಬ ಅಧ್ಯಯನ ಮಾಡಲು ರಚಿಸಿದ ಪ್ರಪ್ರಥಮ ಸಮಿತಿಯಾಗಿದೆ.
  • ಇದು ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ನೀಡಬೇಕೆಂದು ಶಿಫಾರಸ್ಸು ಮಾಡಿತು.

ಬಿ. ಎನ್‌ ಶ್ರೀಕೃಷ್ಣ ಸಮಿತಿ 2009 :

  • ಆಂದ್ರಪ್ರದೇಶ ರಾಜ್ಯ ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸುವ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.
  • ಇದು ಪ್ರತ್ಯೇಕ ಆಂದ್ರಪ್ರದೇಶ ರಾಜ್ಯ ರಚಿಸುವ ಅವಶ್ಯಕತೆ ಇಲ್ಲ ಎಂದು ಶಿಫಾರಸ್ಸು ಮಾಡಿತು.

ಸಿ ರಂಗರಾಜನ್‌ 2012 :

  • ಭಾರದಲ್ಲಿ ಬಡತನ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.
  • ಇದು ತಿಂಗಳ ಖರ್ಚಿನ ಆಧಾರದ ಮೇಲೆ ಬಡತನವನ್ನು ಅಳೆಯಿತು. ಅಂದರೆ ನಗರ ಪ್ರದೇಶದ ವ್ಯಕ್ತಿಯ ತಿಂಗಳ ಖರ್ಚು ೧೪೦೭ ಮತ್ತು ಗ್ರಾಮೀಣ ಪ್ರದೇಶದ ವ್ಯಕ್ತಿಯ ತಿಂಗಳ ಖರ್ಚು ೯೪೩ ರಿಂದ ಕಡಿಮೆ ಇದ್ದರೆ ಬಡತನವೆಂದು ಶಿಫಾರಸ್ಸು ಮಾಡಿತು.

ಡಾ. ಕಸ್ತೂರಿ ರಂಗನ್‌ ಸಮಿತಿ 2012 :

  • ೬ ರಾಜ್ಯಗಳಲ್ಲಿ ವಿಸ್ತರಿಸಿರುವ ಭಾರತದ ಪ್ರಮುಖ ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟಗಳ ಸುರಕ್ಷತೆಯ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.
  • ಇದು ಪಶ್ಚಿಮ ಘಟ್ಟದ ೩೭% ಪ್ರದೇಶವನ್ನು ಸೂಕ್ಷ್ಮ ವಲಯ ಪ್ರದೇಶವನ್ನಾಗಿ ಘೋಷಿಸಬೇಕು ಅಲ್ಲಿ ಮಾನವ ನಿರ್ಮಿತ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಹೇಳಿತು.
  • ಈ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಕರ್ನಾಟಕದ ೧೦ ಜಿಲ್ಲೆಗಳ ೪೦ ತಾಲೂಕುಗಳ ೧೫೦೦ ಗ್ರಾಮಗಳು ಒಳಪಡಲಿವೆ.

ಜೆ. ಎಸ್‌ ವರ್ಮ ಸಮಿತಿ 2013 :

  • ೨೦೧೩ ನವದೆಹಲಿಯ ಸಾಮೂಹಿಕ ಅತ್ಯಾಚಾರದ ತನಿಖೆಯ ಕುರಿತು ಮತ್ತು ಮಹಿಳೆಯರಿಗೆ ಕೈಗೊಳ್ಳಬಹುದಾದ ಅಗತ್ಯ ಸುರಕ್ಷತಾ ಕ್ರಮಗಳ ಕುರಿತು ಅಧ್ಯಯನ ಮಾಡಲು ರಚಿಸಿದ ಸಮಿತಿಯಾಗಿದೆ.

FAQ

GVP ಸಮಿತಿಯ ಸದಸ್ಯರನ್ನು ತಿಳಿಸಿ ?

ಜವಹಾರ್ ಲಾಲ್‌ ನೆಹರು, ವಲ್ಲಭಬಾಯಿ ಪಟೇಲ್‌, ಪಟ್ಟಾಭಿ ಸೀತಾರಾಮಯ್ಯ

ಎಸ್‌. ಕೆ ಧಾರ್‌ ಸಮಿತಿಯು ಯಾವಾಗ ಜಾರಿಗೆ ಬಂದಿತು ?

೧೯೪೮ ರಲ್ಲಿ ಜಾರಿಗೆ ಬಂದಿತು.

ಇತರೆ ವಿಷಯಗಳು :

ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ

ಕರ್ನಾಟಕದಲ್ಲಿನ 10 ಜಿಲ್ಲೆಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *