ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ Information About Major Tourist Places in Karnataka Karnatakada Pramuka Pravasi Stalagala Bagge Mahiti in Kannada
ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ನಂದಿಬೆಟ್ಟ :
- ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ.
- ನೊಳಂಬರ ಕಾಲದ ಭೋಗ ನಂದೀಶ್ವರ ದೇವಾಲಯ ಪ್ರಸಿದ್ದವಾಗಿದೆ.
- ಇಲ್ಲಿಗೆ ಮಾಹಾತ್ಮಾ ಗಾಂಧಿಜಿ ಭೇಟೆ ಮಾಡಿದ್ದರು. ಅವರು ತಂಗಿದ್ದ ಸ್ಥಳಕ್ಕೆ ಗಾಂಧಿ ನಿಲಯ ಎನ್ನುವರು.
- ಇಲ್ಲಿ ಕನ್ನಿಂಗಹ್ಯಾಮ್ ನಿಂದ ನಿರ್ಮಿತವಾದ ಓಕ್ ಲ್ಯಾಂಡ್ ಕಟ್ಟಡವಿದೆ.
- ಇಲ್ಲಿಂದ ಚಿತ್ರಾವತಿ, ಆರ್ಕಾವತಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ.
ಆಗುಂಬೆ :
- ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ.
- ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲಾಗಿದೆ.
- ಇಲ್ಲಿನ ಸೂರ್ಯಾಸ್ತ ರಮಣೀಯ ದೃಶ್ಯವಾಗಿದೆ.
- ಇದನ್ನು ಕಾಳಿಂಗಸರ್ಪಗಳ ರಾಜಧಾನಿ ಎನ್ನುವರು.
- ಇಲ್ಲಿ ಭಾರತದ ಏಕೈಕ ಹರಿಧ್ವರ್ಣವನ ಸಂಶೋಧನಾ ಕೇಂದ್ರವಿದೆ.
ನಾಗರಹೊಳೆ :
- ಇದು ಕೊಡಗು ಜಿಲ್ಲೆಯಲ್ಲಿದೆ.
- ಕರ್ನಾಟಕದ ಪ್ರಸಿದ್ದ ಹುಲಿ, ಚಿರತೆ, ಕಾಡಾನೆಗಳಿಗೆ ಪ್ರಸಿದ್ದವಾದ ನೈಸರ್ಗಿಕ ಅಭಯಾರಣ್ಯವಾಗಿದೆ.
- ಕೇಶವ ದೇವಾಲಯ ಪ್ರಸಿದ್ದವಾಗಿದೆ.
- ಹೊಯ್ಸಳ ಕಾಲದ ದೇವಾಲಯವಾಗಿದೆ.
- ಇಲ್ಲಿ ರಾಷ್ಟ್ರೀಯ ಉದ್ಯಾನವನವಿದೆ. ಇದನ್ನು ರಾಜೀವ ಗಾಂಧಿ ನ್ಯಾಷನಲ್ ಪಾರ್ಕ್ ಎಂದು ಕರೆಯುವರು.
ಮೂಡುಬಿದರೆ :
- ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.
- ಇಲ್ಲಿ ೧೦೦೦ ಕಂಬಗಳ ಬಸದಿ ಇದೆ.
- ಇದನ್ನು ಜೈನರ ಕಾಶಿ ಎಂದು ಕರೆಯುತ್ತಾರೆ.
- ಇದಕ್ಕೆ ತುಳುವಿನಲ್ಲಿ ಬೇದ್ರ ಎಂದು ಕರೆಯುತ್ತಾರೆ.
- ಇಲ್ಲಿ ೧೮ ಜೈನರ ಬಸಿದಿಗಳಿವೆ.
- ಇಲ್ಲಿ ೮ ನೇ ತೀರ್ಥಂಕರನಾದ ಚಂದ್ರನಾಥರ ಪಂಚ ಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ.
ಚಿತ್ರದುರ್ಗ :
- ಇದನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಚಿತ್ತಾಲದುರ್ಗ್ ಎಂದು ಕರೆಯುತ್ತಾರೆ.
- ಇದು ಏಳು ಸುತ್ತಿನ ಕೋಟೆ ಹೊಂದಿದ ನಗರ.
- ಇಲ್ಲಿ ಓಬವ್ವನ ಕಿಂಡಿ ಪ್ರಸಿದ್ದಿಯನ್ನು ಹೊಂದಿದೆ.
- ಸಂಪಿಗೆ ಸಿದ್ಧೇಶ್ವರ ದೇವಾಲಯ, ಸುಬ್ರಮಣ್ಯ ದೇವಾಲಯ, ಉಚ್ಚಂಗೆಮ್ಮನ ದೇವಾಲಯ ಇದೆ.
ಹಂಪಿ :
ಇದು ತುಂಗಾಭದ್ರಾ ದಕ್ಷಿಣ ದಂಡೆಯ ಮೇಲಿದೆ.
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.
ಕಡಲೇಕಾಳು ಗಣೇಶ, ಸಾಸಿವೆಕಾಳು ಗಣೇಶ, ವಿರೂಪಾಕ್ಷ ದೇವಾಲಯ, ಹಜಾರ ರಾಮಸ್ವಾಮಿ ದೇವಾಲಯ, ಕೃಷ್ಣಸ್ವಾಮಿ ದೇವಾಲಯ, ಗಜಶಾಲೆ, ಕಮಲ ಮಹಲ್, ಮಹಾನವಮಿ ದಿಬ್ಬ ಇವುಗಳು ಪ್ರೇಕ್ಷಣೀಯ ಸ್ಥಳವಾಗಿದೆ.
ಇದನ್ನು ಕಿಷ್ಕಿಂದೆ ಎನ್ನುತ್ತಿದ್ದರು.
ಬಾದಾಮಿ :
- ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ.
- ಚಾಲುಕ್ಯರ ರಾಜಧಾನಿಯಾಗಿತ್ತು.
- ಇದನ್ನು ವಾತಾಪಿ ಎಂದು ಕರೆಯುವರು.
- ಪ್ರಸಿದ್ದ ಗುಹಾಂತರ ದೇವಾಲಯಗಳಿವೆ.
- ಇಲ್ಲಿ ಕಪ್ಪೆ ಅರಭಟ್ಟನ ಶಾಸನ ಕಾಣಬಹುದು.
- ಇಲ್ಲಿ ಪ್ರಸಿದ್ದವಾದ ಬನಶಂಕರಿ ದೇವಸ್ಥಾನವಿದೆ.
ಲಕ್ಕುಂಡಿ :
- ಗದಗ ಜಿಲ್ಲೆಯಲ್ಲಿದೆ.
- ಕಲ್ಯಾಣ ಚಾಲುಕ್ಯರ ಕಾಲದ ಕಾಶಿ ವಿಶ್ವೇಶ್ವರ ದೇವಾಲಯ ಕಂಡು ಬರುತ್ತದೆ.
ಐಹೊಳೆ :
- ಬಾಗಲಕೋಟೆ ಜಿಲ್ಲೆಯಲ್ಲಿದೆ.
- ಇದನ್ನು ಭಾರತದ ದೇವಾಲಯಗಳ ತೊಟ್ಟಿಲೆಂದು ಕರೆಯುತ್ತಾರೆ.
- ದುರ್ಗಾ ದೇವಾಲಯ ಕಂಡು ಬರುತ್ತದೆ.
- ಇದನ್ನು ಶಾಸನಗಳಲ್ಲಿ ಆರ್ಯಪುರವೆಂದು ಉಲ್ಲೇಖವಿದೆ.
- ಇಲ್ಲಿ ರವಿಕೀರ್ತಿ ಹೊರಡಿಸಿದ ಐಹೊಳೆ ಶಾಸನವಿದೆ.
ಇಟಗಿ :
- ಕಲ್ಯಾಣ ಚಾಲುಕ್ಯರ ಮಹಾದೇವ ದೇವಾಲಯವಿದೆ.
- ಇದನ್ನು ಕರ್ನಾಟಕದ ದೇವಾಲಯಗಳ ಚಕ್ರವರ್ತಿ ಎಂದು ಕರೆಯುತ್ತಾರೆ.
- ಇದು ಕೊಪ್ಪಳ ಜಿಲ್ಲೆಯಲ್ಲಿದೆ.
ಬೀದರ್ :
- ಮದರಸ ವಿದ್ಯಾಕೇಂದ್ರವಿದೆ.
- ನಾನಕ ಝರಾ ಗುದ್ವಾರವಿದೆ.
- ನರಸಿಂಹ ದೇವಾಲಯವಿದೆ.
ಶೃಂಗೇರಿ :
- ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠವಿದೆ.ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠವಿದೆ.
- ವಿದ್ಯಾಶಂಕರ ದೇವಾಲಯವಿದೆ.
- ಇದಕ್ಕೆ ಋಗ್ವೇದ ಪೀಠ ಎಂತಲೂ ಕರೆಯುತ್ತಾರೆ.
- ಇದು ತುಂಗಾ ನದಿಯ ದಂಡೆಯ ಮೇಲಿದೆ.
FAQ
ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠವು ಎಲ್ಲಿ ಇದೆ ?
ಶೃಂಗೇರಿ
ದಕ್ಷಿಣ ಭಾರತದ ಚಿರಾಪುಂಜಿ ಎಂದು ಯಾವ ಸ್ಥಳವನ್ನು ಕರೆಯುತ್ತಾರೆ ?
ಆಗುಂಬೆ
ಇತರೆ ವಿಷಯಗಳು :
ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ