ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ Information About the Economy Arthavyavsteya Bagge Mahiti in Kannada
ಈ ಲೇಖನಿಯಲ್ಲಿ ಅರ್ಥವ್ಯವಸ್ಥೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಸಮಾಜವಾದಿ ಅರ್ಥವ್ಯವಸ್ಥೆ
ಇದರ ಪರಿಕಲ್ಪನೆ ಕೊಟ್ಟವರು – ಕಾರ್ಲ್ ಮಾರ್ಕ್ಸ್
ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ
ಪ್ರಥಮ ರಾಷ್ಟ್ರ – ರಷ್ಯಾ ( ೧೯೧೭ )
೨ ನೇ ರಾಷ್ಟ್ರ – ಚೀನಾ ( ೧೯೪೯ )
ಎಲ್ಲಾ ಉತ್ಪಾದನಾ ಸಂಪನ್ಮೂಲಗಳನ್ನು ಸರ್ಕಾರದ ಒಡೆತನಕ್ಕೆ ಮತ್ತು ಮಿಯಂತ್ರಣಕ್ಕೆ ಒಳಪಟ್ಟಿದ್ದರೇ ಅದನ್ನು ಸಮಾಜವಾದಿ ಅರ್ಥವ್ಯವಸ್ಥೆ ಎನ್ನುವರು.
ಈ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದರಿಂದ ಖಾಸಗಿ ವ್ಯಕ್ತಿಗಳಿಗೆ ಅವಕಾಶವಿಲ್ಲ.
ಈ ಅರ್ಥವ್ಯವಸ್ಥೆಯಲ್ಲಿ ಸರ್ಕಾರದ ಅರ್ಥವ್ಯವಸ್ಥೆ / ಕೇಂದ್ರಿಯ ಯೋಜಿತ ಅರ್ಥವ್ಯವಸ್ಥೆ ಎನ್ನುವರು.
ಇಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಅವಕಾಶವಿಲ್ಲ.
ಉದಾಹರಣೆಗೆ : ರಷ್ಯಾ, ಚೀನಾ, ದಕ್ಷಿಣ ಕೋರಿಯಾ, ಉತ್ತರ ಕೋರಿಯಾ ಮುಂತಾದವುಗಳು.
ಬಂಡವಾಳಶಾಹಿ ಅರ್ಥವ್ಯವಸ್ಥೆ
ಇದರ ಪರಿಕಲ್ಪನೆ ನೀಡಿದವರು – ಆಡಂ ಸ್ಮಿತ್
ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಪ್ರಥಮ ರಾಷ್ಟ್ರ – ಅಮೇರಿಕಾ ( ೧೭೭೬ )
ಎಲ್ಲಾ ಉತ್ಪಾದನಾ ಸಂಪನ್ಮೂಲಗಳು ಖಾಸಗಿಯವರ ಒಡೆತನ ಮತ್ತು ನಿಯಂತ್ರನಕ್ಕೆ ಒಳಪಟ್ಟಿರುತ್ತದೆ.
ಇಲ್ಲಿ ಖಾಸಗಿ ವ್ಯಕ್ತಿಗಳಿಗೂ ಇರುವುದರಿಂದ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ.
ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಅವಕಾಶವಿದೆ.
ಉದಾಹರಣೆ : ಅಮೇರಿಕ, ಇಂಗ್ಲೆಂಡ್, ಜಪಾನ್, ಜರ್ಮನ್, ಪ್ರಾನ್ಸ್, ನಾರ್ವೆ, ಇಟಲಿ ಮುಂತಾದವುಗಳು.
ಮುಂದುವರೆಗೆ ರಾಷ್ಟ್ರಗಳು ಈ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ಮಿಶ್ರ ಅರ್ಥವ್ಯವಸ್ಥೆ
ಇದರ ಪರಿಕಲ್ಪನೆ ನೀಡಿದವರು – J M ಕೇನ್ಸ್
ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಪ್ರಥಮ ರಾಷ್ಟ್ರ – ಭಾರತ ( ೧೯೪೮ )
ಭಾರತವು ೧೯೪೮ ರ ಪ್ರಥಮ ಕೈಗಾರಿಕಾ ನೀತಿಯಲ್ಲಿ ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿತು.
ಮುಂದುವರೆಯುತ್ತಿರುವ ರಾಷ್ಟ್ರಗಳು ಈ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿತು.
ಮುಂದುವರೆಯುತ್ತಿರುವ ರಾಷ್ಟ್ರಗಳು ಈ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿರುತ್ತವೆ.
ಎಲ್ಲಾ ಉತ್ಪಾದನಾ ಸಂಪನ್ಮೂಲಗಳು ಸರ್ಕಾರ ಮತ್ತು ಖಾಸಗಿಯವರ ಒಡೆತನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ಮುಕ್ತ ಅರ್ಥವ್ಯವಸ್ಥೆ
ಇತರ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿರುವ ಅರ್ಥವ್ಯವಸ್ಥೆಯನ್ನು ಮುಕ್ತ ಅರ್ಥವ್ಯವಸ್ಥೆ ಎನ್ನುವರು.
ಈ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆಯು ಸುಂಕ, ಕೋಟಾ ಮೊದಲಾದ ವ್ಯಾಪಾರ ನಿರ್ಭಂದಗಳಿಂದ ಮುಕ್ತವಾಗಿರುತ್ತದೆ.
ಹಾಗೆಯೇ ಜಿಡಿಪಿಯಲ್ಲಿ ರಫ್ತು ಮತ್ತು ಆಮದುಗಳಿಗೆ ಅವಕಾಶವಿರುವುದಿಲ್ಲ.
ಮುಚ್ಚಿದ ಅರ್ಥವ್ಯವಸ್ಥೆ
ಇತರ ರಾಷ್ಟ್ರಗಳೊಂದಿಗೆ ಯಾವುದೇ ವ್ಯಾಪಾರ ಸಂಪರ್ಕವನ್ನು ಹೊಂದಿರದ ಹಾಗೂ ರಾಷ್ಟ್ರದ ಒಳಗೆ ವ್ಯಾಪಾರ ವಲಯವನ್ನು ಹೊಂದಿರುವ ಅರ್ಥ ವ್ಯವಸ್ಥೆಯನ್ನು ಮುಚ್ಚಿದ ಅರ್ಥ ವ್ಯವಸ್ಥೆ ಎನ್ನುವರು.
ಈ ಅರ್ಥವ್ಯವಸ್ಥೆಯಲ್ಲಿ ಅನುಭೋಗಿಗಳು ಎಲ್ಲವನ್ನು ರಾಷ್ಟ್ರದ ಒಳಗೆ ಪಡೆಯುತ್ತಾರೆ.
ಸರ್ಕಾರವು ವ್ಯಾಪಾರವನ್ನು ನಿಯಂತ್ರಿಸುತ್ತದೆ.
ರಫ್ತು ಮತ್ತು ಆಮದುಗಳಿಗೆ ಅವಕಾಸವಿರುವುದಿಲ್ಲ.
ಮುಕ್ತ ಮಾರುಕಟ್ಟೆಯಾಧಾರಿತ ಅರ್ಥ ವ್ಯವಸ್ಥೆ
ಸರ್ಕಾರದ ಮಧ್ಯ ಪ್ರವೇಶ ಅಥವಾ ನಿಯಂತ್ರಣ ಅತಿ ಕಡಿಮೆ ಇರುವ ಅರ್ಥ ವ್ಯವಸ್ಥೆಯನ್ನು ಮುಕ್ತ ಮಾರುಟ್ಟೆಯಾಧಾರಿತ ಅರ್ಥವ್ಯವಸ್ಥೆ ಎಂದು ಕರೆಯುತ್ತಾರೆ.
ಈ ವ್ಯವಸ್ಥೆಯಲ್ಲಿ ಎಲ್ಲಾ ಆರ್ಥಿಕ ತೀರ್ಮಾನಗಳನ್ನು ಮಾರುಕಟ್ಟೆ ತತ್ವಗಳ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ.
ಇಲ್ಲಿ ಉದ್ಯಮಗಳ ನಡುವೆ ತೀವ್ರ ಪೈಪೋಟಿ ಇದ್ದು, ಅನುಭೋಗಿಗಳಿಗೆ ಬಹು ಆಯ್ಕೆಗಳು ಲಭ್ಯವಿರುತ್ತವೆ.
ಉತ್ಪಾದನಾಂಗಗಳು ಖಾಸಗಿಯವರ ಒಡೆತನದಲ್ಲಿರುತ್ತದೆ.
ಮತ್ತು ಅವರು ಗರಿಷ್ಟ ಲಾಭಳಿಸುವ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ.
ನಿಯಂತ್ರಿತ ಅರ್ಥವ್ಯವಸ್ಥೆ
ನಿಯಂತ್ರಿತ ಅರ್ಥವ್ಯವಸ್ಥೆಯಲ್ಲಿ ಎಲ್ಲಾ ಉತ್ಪಾದನಾ ಸಂಪನ್ಮೂಲಗಳು ಸರ್ಕಾರದ ಒಡೆತನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.
ಪೈಪೋಟಿಯ ಕೊರತೆಯಿಂದ ಸಂಪನ್ಮೂಲಗಳನ್ನು ದಕ್ಷವಾಗಿ ಬಳಕೆಯಾಗುವುದಿಲ್ಲ.
ಮತ್ತು ಅನುಭೋಗಿಗಳ ಆಯ್ಕೆಗಳು ಕಡಿಮೆ ಇರುತ್ತವೆ.
ರಷ್ಯಾ ಒಕ್ಕೂಟ, ಕ್ಯೂಬಾ, ಉತ್ತರ ಕೋರಿಯಾಗಳನ್ನು ಉದಾಹರಣೆಯಾಗಿ ನೀಡಬಹುದು.
FAQ
ಸಮಾಜವಾದಿ ಅರ್ಥವ್ಯವಸ್ಥೆ ಎಂಬ ಪರಿಕಲ್ಪನೆಯನ್ನ ಯಾರು ನೀಡಿದರು?
ಕಾರ್ಲ್ ಮಾರ್ಕ್ಸ್
ಮುಕ್ತ ಅರ್ಥವ್ಯವಸ್ಥೆ ಎಂದರೇನು ?
ಇತರ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿರುವ ಅರ್ಥವ್ಯವಸ್ಥೆಯನ್ನು ಮುಕ್ತ ಅರ್ಥವ್ಯವಸ್ಥೆ ಎನ್ನುವರು.
ಇತರೆ ವಿಷಯಗಳು :
ಅಂತರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ಮಾಹಿತಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ