ರಾಷ್ಟ್ರಪತಿಗಳ ಬಗ್ಗೆ ಮಾಹಿತಿ | Information About the President in Kannada

ರಾಷ್ಟ್ರಪತಿಗಳ ಬಗ್ಗೆ ಮಾಹಿತಿ Information About the President Rashtrapatigala Bagge Mahiti in Kannada

ರಾಷ್ಟ್ರಪತಿಗಳ ಬಗ್ಗೆ ಮಾಹಿತಿ

Information About the President in Kannada

ಈ ಲೇಖನಿಯಲ್ಲಿ ರಾಷ್ಟ್ರಪತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ರಾಷ್ಟ್ರಪತಿ

ನಮ್ಮ ಸಂವಿಧಾನವು ೫೨ ನೇ ಯ ವಿಧಿಯು ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಭಾರತದ ರಾಷ್ಟ್ರಪತಿಯವರು ಸಂವಿಧಾನ ಮುಖ್ಯಸ್ಥರೂ, ರಾಷ್ಟ್ರದ ಪ್ರಥಮ ಪ್ರಜೆಯೂ, ಕಾರ್ಯಾಂಗದ ನಾಮಮಾತ್ರ ಮುಖ್ಯಸ್ಥರೂ ಹಾಗೂ ಮೂರು ಸೇನಾಪಡೆಗಳ ( ವಾಯುಪಡೆ, ಭೂಪಡೆ, ನೌಕಾಪಡೆ ) ಮಹಾದಂಡನಾಯಕರು ಆಗಿರುತ್ತಾರೆ. ರಾಷ್ಟ್ರದ ಸಮಸ್ತ ಅಧಿಕಾರವೆಲ್ಲವೂ ಇವರ ಹೆಸರಿನಲ್ಲಿದ್ದು, ಇವರು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ.

ರಾಷ್ಟ್ರಪತಿಯವರ ಚುನಾವಣಾ ವಿಧಾನ :

ಸಂವಿಧಾನ ೫೪ ಮತ್ತು ೫೫ ನೇ ವಿಧಿಯಲ್ಲಿ ರಾಷ್ಟ್ರಪತಿಯವರನ್ನು ಚುನಾಯಿಸುವ ವಿಧಾನವನ್ನು ಅಳವಡಿಸಲಾಗಿದೆ. ರಾಷ್ಟ್ರಪತಿಯವರನ್ನು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು, ಎಲ್ಲಾ ರಾಜ್ಯಗಳ ಮತ್ತು ದೆಹಲಿ, ಪುದುಚೇರಿ ವಿಧಾನಸಭಾ ಚುನಾಯಿತ ಸದಸ್ಯರಿಂದ ಕೂಡಿದ ಮತದಾರ ವರ್ಗ ಚುನಾಯಿಸುತ್ತದೆ. ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಧೀಶರು ಇವರಿಗೆ ಪ್ರಮಾಣ ವಚನ ಬೋಧಿಸುತ್ತಾರೆ.ಇವರ ಅಧಿಕಾರವಧಿ ೫ ವರ್ಷವಾಗಿದ್ದು, ಪುನರಾಯ್ಕೆಗೆ ಅರ್ಹರಾಗಿರುತ್ತಾರೆ. ಸಂವಿಧಾನವನ್ನು ಉಲ್ಲಂಘಿಸಿದಲ್ಲಿ ರಾಷ್ಟ್ರಪತಿಯವರನ್ನು ಮಹಾಭಿಯೋಗಗೊಳಿಸುವ ಅಧಿಕಾರ ಸಂಸತ್ತಿಗಿರುತ್ತದೆ.

ಮಹಾಭಿಯೋಗ :

ರಾಷ್ಟ್ರಪತಿಗಳು ಸಂವಿಧಾನವನ್ನು ಉಲ್ಲಂಘಿಸಿದರೆ ಸಂಸತ್ತು ಯಾವುದೇ ಸದನದಲ್ಲಿ ಮಹಾಭಿಯೋಗ ಗೊತ್ತುವಳಿಯನ್ನು ಮಂಡಿಸಬಹುದಾಗಿದೆ. ಗೊತ್ತುವಳಿಯನ್ನು ಮಂಡಿಸಿದ ಸದನದ ಕನಿಷ್ಟ ೧/೪ ರಷ್ಟು ಸದಸ್ಯರ ಬೆಂಬಲದ ನೋಟಿಸನ್ನು ೧೪ ದಿನ ಮುಂಚಿತವಾಗಿ ರಾಷ್ಟ್ರಪತಿಗೆ ನೀಡಬೇಕು. ಸಂಸತ್ತಿನ ಎರಡೂ ಸದನಗಳಲ್ಲಿ ಒಟ್ಟು ಸದಸದ್ಯರ ಬಹುಮತ ಮತ್ತು ಹಾಜರಿರುವ ಸದಸ್ಯರ ಕನಿಷ್ಟ ೨/೩ ರಷ್ಟು ಸದಸ್ಯರ ಬಹುಮತದಿಂದ ಸ್ವೀಕೃತವಾದರೆ ರಾಷ್ಟ್ರಪತಿಯ ಸ್ಥಾನವು ಖಾಲಿಯಾಯಿತೆಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ರಾಷ್ಟ್ರಪತಿಯನ್ನು ಮಹಾಭಿಯೋಗಗೊಳಿಸಲಾಗಿರುವುದಿಲ್ಲ.

ರಾಷ್ಟ್ರಪತಿಗಳ ಅರ್ಹತೆಗಳು

  • ಭಾರತದ ಪ್ರಜೆಯಾಗಿರಬೇಕು.
  • ಕನಿಷ್ಟ ೩೫ ವರ್ಷ ವಯೋಮಿತಿಯನ್ನು ಹೊಂದಿರಬೇಕು.
  • ಲೋಕಸಭೆಯ ಸದಸ್ಯರಾಗಲು ಅರ್ಹತೆ ಹೊಂದಿರಬೇಕು.
  • ಯಾವುದೇ ಲಾಭಧಾಯಕ ಹುದ್ದೆಯಲ್ಲಿ ಇರಬಾರದು.

ರಾಷ್ಟ್ರಪತಿಯವರ ಅಧಿಕಾರಗಳು

ಕಾರ್ಯಾಂಗಾಧಿಕಾರ :

ರಾಷ್ಟ್ರದ ಎಲ್ಲಾ ಆಡಳಿತವು ರಾಷ್ಟ್ರಪತಿಯವರ ಹೆಸರಿನಲ್ಲಿಯೇ ನಡೆಯುತ್ತಿದೆ. ಪ್ರಧಾನಮಂತ್ರಿಯವರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ನಂತರ ಪ್ರಧಾನಮಂತ್ರಿ ಸಲಹೆ ಮೇರೆಗೆ ಇತರೆ ಮಂತ್ರಿಗಳನ್ನು ನೇಮಿಸುತ್ತಾರೆ. ಭಾರತದ ಉನ್ನತ ಹುದ್ದೆಗಳಾದ ಅಟಾರ್ನಿ ಜನರಲ್‌, ಕಂಟ್ರೋಲರ್‌ ಅಂಡ್‌ ಆಡಿಟರ್‌ ಜನರಲ್‌, ಸುಪ್ರೀಂಕೋರ್ಟ ನ ಕೋರ್ಟ್ ನ ನ್ಯಾಯಾಧೀಶರು, ಹೈಕೋರ್ಟ್‌ ನ್ಯಾಯಾಧೀಶರು, ರಾಜ್ಯಪಾಲರುಗಳು, ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು, ಚುನಾವಣಾ ಆಯುಕ್ತರು, ರಕ್ಷಣಾ ಪಡೆಗಳ ದಂಡನಾಯಕರು ಹಾಗೂ ವಿವಿಧ ರಾಷ್ಟ್ರಗಳಿಗೆ ರಾಯಭಾರಿಗಳನ್ನು ನೇಮಿಸುವ ಅಧಿಕಾರಿ ರಾಷ್ಟ್ರಪತಿಗಳಿಗೆ ಇದೆ.

ಶಾಸನಾಧಿಕಾರ :

ರಾಷ್ಟ್ರಪತಿಗಳು ಸಂಸತ್ತಿನ ಅಧಿವೇಶನ ಕರೆಯುವುದು, ಮುಂದೂಡುವುದು, ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಹಾಗೂ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ. ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟ ಮಸೂದೆಗಳಿಗೆ ಒಪ್ಪಿಗೆ ನೀಡುವ, ಪುನರ್‌ ಪರಿಶೀಲಿಸುವ, ಹಿಂದಿರುಗಿಸುವ ಅಥವಾ ತಡೆಹಿಡಿಯುವ ಅಧಿಕಾರ ಹೊಂದಿದ್ದಾರೆ. ಲೋಕಸಭೆಗೆ ಇಬ್ಬರು ಆಂಗ್ಲೋ – ಇಂಡಿಯನ್ ರನ್ನು ಮತ್ತು ರಾಜ್ಯಸಭೆಗೆ ೧೨ ಜನ ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರವಿದೆ. ಈ ಎಲ್ಲಾ ಅಧಿಕಾರಗಳನ್ನು ಮಂತ್ರಿಮಂಡಲದ ಸಲಹೆಯಂತೆ ನಿರ್ವಹಿಸುತ್ತಾರೆ.

ನ್ಯಾಯಾಂಗಾಧಿಕಾರ :

ನ್ಯಾಯಾಲಯಗಳು ಅಪರಾಧಿಗಳಿಗೆ ನೀಡಿದ ಶಿಕ್ಷೆಯನ್ನು ಕಡಿಮೆ ಮಾಡುವ, ಮರಣ ದಂಡನೆಯಂತಹ ಕಠಿಣ ಶಿಕ್ಷೆಯನ್ನು ರದ್ದುಪಡಿಸುವ ಅಧಿಕಾರ ಹೊಂದಿದ್ದಾರೆ. ರಾಷ್ಟ್ರದ ಕಾನೂನಿಗೆ ಸಂಬಂಧಿಸಿದ ಮಹತ್ವದ ವಿಷಯಗಳಿಗೆ ಸರ್ವೋಚ್ಚ ನ್ಯಾಯಾಲಯದ ಸಲಹೆ ಕೇಳಬಹುದು.

ಹಣಕಾಸಿನ ಅಧಿಕಾರ :

ರಾಷ್ಟ್ರಪತಿಯವರ ಅನುಮತಿ ಇಲ್ಲದೆ ಹಣಕಾಸಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ. ಹಣಕಾಸು ಆಯೋಗದ ವರದಿ, ಮಹಾಲೇಖಪಾಲರು ಮತ್ತು ಪರಿಶೋಧಕರು ನೀಡಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲ. ಹಣಕಾಸು ಆಯೋಗದ ವರದಿ, ಮಹಾಲೇಖಪಾಲರು ಮತ್ತು ಪರಿಶೋಶಧಕರು ನೀಡಿದ ವರದಿಯನ್ನು ಸಂಸತ್ತಿನಲ್ಲಿ ಚರ್ಚಿಸುವಂತೆ ರಾಷ್ಟ್ರಪತಿಗಳು ಶಿಫಾರಸ್ಸು ಮಾಡುತ್ತಾರೆ. ಒಟ್ಟಾರೆ ಹಣಕಾಸು ಮಸೂದೆ ಕಾಯ್ದೆಯಾಗಬೇಕಾದರೆ ಅವರ ಒಪ್ಪಿಗೆ ಅವಶ್ಯಕ.

ಮಿಲಿಟರಿ ಅಧಿಕಾರಗಳು :

ರಾಷ್ಟ್ರಪತಿಗಳು ಸಮಸ್ತ ಸೇನಾ ಪಡೆಗಳ ಮಹಾದಂಡನಾಯಕರಾಗಿರುತ್ತಾರೆ. ಭೂಪಡೆ, ವಾಯುಪಡೆ ಮತ್ತು ನೌಕಾಪಡೆಯ ದಂಡನಾಯಕರನ್ನು ಸಚಿವ ಸಂಪುಟದ ಸಲಹೆ ಸಂಪುಟದ ಸಲಹೆ ಮೇರೆಗೆ ಇವರೇ ನೇಮಿಸುತ್ತಾರೆ. ಸಂಸತ್ತಿನ ಒಪ್ಪಿಗೆ ಮೇರೆಗೆ ಯುದ್ದ ಮತ್ತು ಶಾಂತಿಯನ್ನು ಘೋಷಿಸುವ ಅಧಿಕಾರ ಹೊಂದಿದ್ದಾರೆ.

FAQ

ಎಷ್ಟನೇಯ ವಿಧಿಯು ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.

೫೨ ನೇ ಯ ವಿಧಿಯು ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.

ರಾಷ್ಟ್ರಪತಿಯವರ ಅರ್ಹತೆಗಳನ್ನು ತಿಳಿಸಿ ?

* ಭಾರತದ ಪ್ರಜೆಯಾಗಿರಬೇಕು.
* ಕನಿಷ್ಟ ೩೫ ವರ್ಷ ವಯೋಮಿತಿಯನ್ನು ಹೊಂದಿರಬೇಕು.
* ಲೋಕಸಭೆಯ ಸದಸ್ಯರಾಗಲು ಅರ್ಹತೆ ಹೊಂದಿರಬೇಕು.
* ಯಾವುದೇ ಲಾಭಧಾಯಕ ಹುದ್ದೆಯಲ್ಲಿ ಇರಬಾರದು.

ಇತರೆ ವಿಷಯಗಳು :

ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ 

ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *