ತಲಕಾಡಿನ ವೈಭವದ ಬಗ್ಗೆ ಮಾಹಿತಿ Information About the Splendor of the Talaka Forest Talakadina Vyabavada Bagge Mahiti in Kannada
ತಲಕಾಡಿನ ವೈಭವದ ಬಗ್ಗೆ ಮಾಹಿತಿ
ತಲಕಾಡಿನ ವೈಭವದ ಬಗ್ಗೆ ಹಿರೇಮಲ್ಲೂರು ಈಶ್ವರನ್ ಅವರ ಅಭಿಪ್ರಾಯವನ್ನು ಈ ಕೆಳಕಂಡತೆ ತಿಳಿಸಲಾಗಿದೆ.
ಹಿರೇಮಲ್ಲೂರು ಈಶ್ವರನ್
ಇವರ ಊರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು. ಸಮಾಜಶಾಸ್ತ್ರಜ್ಞರಾದ ಇವರು ಅಂತರಾಷ್ಟೀಯ ಪುರಸ್ಕೃತ ಸಾಹಿತಿ. ಲಿಂಗರಾಜ ಮಹಾವಿದ್ಯಾಲಯದಲ್ಲಿ ಎಂ. ಎ. ಪದವಿ ಪಡೆದ ಇವರು ಕೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಶ್ರೀಯುತರು ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ತಲಕಾಡಿನ ವೈಭವ
೧೯೫೦ ನೇ ಇಸವಿ ಅಕ್ಟೋಬರ್ ತಿಂಗಳು ಮಂಗಳವಾರ ೨೦ ನೇ ಯ ತಾರೀಖು ಶಿವನ ಸಮದ್ರದ ಪ್ರವಾಸಿಗರ ನಿಲ್ ಮನೆಯಲ್ಲಿ ಕುಳಿತುಕೊಂಡು ಈ ದಿನದ ಪಯಣ ವಿವರ ಬರೆಯುತ್ತಿದ್ದೇವೆ. ಈಗ ರಾತ್ರಿ ಹನ್ನೇರಡು ಹೊಡೆದು ಹದಿನೈದು ನಿಮಿಷವಾಗಿದೆ. ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ. ನನ್ನ ಬಳಿ ಈ ತಂಗು ಮನೆಯಲ್ಲಿ ನನ್ನ ಗೆಳೆಯರು, ಕನ್ನಡದ ಯಾತ್ರಿಕರು ಮಲಗಿಕೊಂಡಿದ್ದಾರೆ. ಇಂದು ದಿನವೆಲ್ಲ ಅಲೆದು ಅಲೆದು ಅವರು ದಣಿದು ನಿದ್ರೆ ಹೋಗಿದ್ದಾರೆ.
ಶಿವನ ಸಮುದ್ರವನ್ನು ಒಳಸೇರುವ ಮುನ್ನ ಬಾಗಿಲ ಬಳಿ ನಿಂತ ಸುಬ್ರಹ್ಮಣ್ಯಮ್ ನಮ್ಮನ್ನು ವಿಶ್ವಾಸದಿಂದ ಸ್ವಾಗತಿಸಿದರು. ನಿಲ್ಮನೆಯನ್ನು ಕೂಡಲೆ ಖಾಲಿ ಮಾಡಿಸಿದರು. ಹಾಸಿಗೆ ಹಾಸಿಕೊಟ್ಟರು. ಊಟ ಉಪಚಾರದ ಬಗೆಗೆ ಕೇಳಿದರು. ಕೊನೆಗೆ ಹೋಗುವಾಗ ಗುಡ್ ನೈಟ್ ಅಂದರು. ಸುಬ್ರಮಣ್ಯಮ್ ನೌಕರೇನೋ ಅಹುದು. ಆದರೆ ಅವರಿತ್ತ ಸ್ವಾಗತ, ವಿಶ್ವಾಸದ ನುಡಿ ನೆನೆದರೆ ನಾವು ಸುಬ್ರಮಣ್ಯನಿಗೆ ಸಣ್ಣವರು ಎನ್ನುವಲ್ಲಿ ಸಂದೇಹವಿಲ್ಲ.
ತಲಕಾಡಿನ ಇತಿಹಾಸದಲ್ಲಿ ಗಂಗರ ಇತಿಹಾಸ, ಜೈನಧರ್ಮ ವಿವರಣೆ ಇದೆ. ಕನ್ನಡ ಸಾಹಿತ್ಯದ ಕಥನವಿದೆ. ಹೊಯ್ಸಳ ವಾಸ್ತುಶಿಲ್ಪದ ವಿವರಣೆ ಇದೆ. ಎಲ್ಲಕ್ಕೂ ಮಿಗಿಲಾಗಿ ಕನ್ನಡವೇ ಧರ್ಮ, ಕನ್ನಡವೇ ಬಾಳಿನ ಪರಿಪೂರ್ಣತೆಯೆಂದು ಬಗೆದು ಅದಕ್ಕಾಗಿ ಹೋರಾಡಿ ಮಡಿದ ವೀರರ ಉಜ್ವಲ ಚರಿತ್ರೆ ಇದೆ. ಗಂಗರ ರಾಜ್ಯ ಗಂಗವಾಡಿ ಎಂದು ಹೆಸರಾಗಿದೆ. ಅವರ ಮೊದಲ ರಾಜಧಾನಿ ಕೋಲಾರ. ಸುಮಾರು ಕ್ರಿ. ಶಕ ೫೦೦ ರ ಹೊತ್ತಿಗೆ ಕೋಲಾರದಿಂದ ಹರಿವರ್ಮ ರಾಜಧಾನಿಯನ್ನು ತಲಕಾಡಿಗೆ ತಂದನು. ಅಲ್ಲಿಂದ ಮುಂದಕ್ಕೆ ಐದು ಶತಮಾನಗಳವರೆಗೆ ಅಂದರೆ ಹತ್ತನೆಯ ಶತಮಾನದವರೆಗೂ ಗಂಗರು ಆಳ್ವಿಕೆ ನಡೆಸಿದರು.
ಮಾರಸಿಂಹ, ರಾಚಮಲ್ಲ, ರಕ್ಕಸಗಂಗರ ತಲಕಾಡು ಪುಣ್ಯಭೂಮಿ. ಅವರೊಂದಿಗೆ ಕೊನೆಯವರೆಗೂ ಒಂದು ಹಿರಿಯ ಜೀವ ಇದ್ದಿತು. ಅವನ ಹೆಸರು ಚಾವುಂಡರಾಯ ಆತ ಮಾರಸಿಂಹ, ರಾಚಮಲ್ಲ, ರಕ್ಕಸಗಂಗರ ಮಂತ್ರಿ. ಅವನನ್ನು ಜನ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ರಾಯ ಅಣ್ಣ ಎಂದು ಸಂಭೋಧಿಸುತ್ತಿದ್ದರು. ಅವನಿಗೆ ಕನ್ನಡದ ಏಲ್ಗೆಯ ಹಂಬಲವೇ ಹಂಬಲ. ಸ್ವತಃ ಕವಿ ಚಾವುಂಡರಾಯ ಪುರಾಣ ಎಂಬ ಹೆಸರಿನ ೬೩ ಪುಣ್ಯಪುರುಷರ ಚರಿತ್ರೆ, ಅವನು ಕನ್ನಡಕ್ಕೆ ಕೊಟ್ಟ ಕಾಣಿಕೆ.
ಹತ್ತನೆಯ ಶತಮಾನನ ಕೊನೆಯ ಭಾಗದಲ್ಲಿ ಮುದುವೊಳಲಿನಿಂದ ತಂದೆ ತಾಯಿಯರಿಗೆ ಹೇಳದೆ ಬಳೆಮಾರುವ ಉದ್ಯಮವನ್ನು ಕೃಷ್ಣಾ ತೀರದ ಮಳಲಿನಲ್ಲಿ ಮುಚಿಟ್ಟು ತಲಕಾಡಿಗೆ ರನ್ನ ಓಡಿ ಬಂದನು. ಏನು ನಂಬಿ ಬಂದ ? ತಲಕಾಡಿನ ಮಣ್ಣನ್ನು ಇಲ್ಲಿ ರಾಯನಿದ್ದಾನೆ. ಅತ್ತಿಮಬ್ಬೆ ಇದ್ದಾಳೆ. ಅಜಿತಸೇನ ಗುರುಗಳ ಶಿಷ್ಯವೃಂದವಿದೆ. ಅದು ಕಾಲಾಶ್ರಿ ವಿಹರಿಸುವ ನಂದನವನ.
ಗಂಗವಾಡಿನಯು ಹಬ್ಬಿ, ಕನ್ನಡದನುಡಿ, ಹಾರಿಸಿ, ತೋರಿಸಿ ಕಚ್ಚೇದೆಯ ಬಾವುಟ ಎಂದು ಹಾಡುತ್ತಿರುವ ಹೊತ್ತಿಗೆ ಚೋಳ ದೇಶದ ಕಡೆಯಿಂದ ಬಿರುಗಾಳಿ ಬೀಸಿತು. ಚೋಳರು ಬಂದರು. ಗುಡಿಗೋಪುರಗಳನ್ನು ಕಟ್ಟಿಸಿದರು. ರಾಜೇಶ್ವರ, ವೈಕುಂಟ ನಾರಾಯಣ, ಮರಳೇಶ್ವರ, ಪಾತಾಳೇಶ್ವರ, ವೈದ್ಯೇಶ್ವರ ಗುಡಿಗಳನ್ನು ಕಟ್ಟಿಸಿದರು. ೧೧೧೬, ವಿಷ್ಣುವರ್ಧನ ದೊರೆಯ ಆಳ್ವಿಕೆ ಪ್ರಾರಂಭವಾಯಿತು. ವಿಷ್ಣುವರ್ಧನ ದೊರೆಯ ಕಾರ್ಯವನ್ನು ಕೇಳುತ್ತೀರಾ ?
ನಾ ಮುಂದೆ ನೀ ಮುಂದೆ ಎಂದು ತಲಕಾಡಿನ ಕಡೆಗೆ ಪ್ರವಾಸಿಗರನ್ನು ಹೊತ್ತುಕೊಂಡೊಯ್ಯುತ್ತಿದ್ದ ಎರಡು ಮೋಟಾರುಗಳು ಓಡುತ್ತಿರುವಾಗ ನನ್ನ ಕಣ್ ಮುಂದೆ ತಲಕಾಡಿನ ನೆಲದ ಮೇಲೆ ವೈಭವದಿಂದ ರಾಜ್ಯವಾಳಿದವರ ಕಥೆ ಹಕ್ಕಿಯಂತೆ ಚಲಿಸಿ ಪಾತರಗಿತ್ತಿಯಂತೆ ಕುಣಿದು ಮೃಗಜಲದಂತೆ ಮಾಯವಾಯಿತು. ಇದು ಕೀರ್ತಿನಾರಾಯಣನ ದೇಗುಲ. ಕ್ರಿಸ್ತಶಕಾಬ್ದ ೧೧೧೭ ನೇಯ ವರ್ಷದಲ್ಲಿ ವಿಷ್ಣುವರ್ಧನದೇವ ತಲಕಾಡಿನ ವಿಜಯದ ನಿಮಿತ್ತ ವೀರನಾರಾಯಣನ ಹೆಸರಿನಲ್ಲಿ ಗುಡಿ ಕಟ್ಟಿಸಿದನು.
ಕೀರ್ತಿನಾರಾಯಣ ದೇವಾಲಯದ ಆಚೆಗೆ ೧೫೦ ಗಜದ ಅಂತರದಲ್ಲಿ ವೈದ್ಯೇಶ್ವರ ದೇವಾಲಯ ಈ ದೇವಾಲಯದ ರಚನೆಯ ಕಾಲವನ್ನು ಹದಿಮೂರನೆಯ ಶತಮಾನದ ಪೂರ್ವಕ್ಕೆ ತಂದಿರುವುದು. ದೇವಾಲಯದ ಹೊರವಲಯದಲ್ಲಿ ಇರುವ ಕಲಶಗಳೂ ಗರ್ಭಗುಡಿಯ ಗೋಪುರವೂ ಶಿಲ್ಪದ ನಿರ್ಮಾಣದಲ್ಲಿ ತೋರಿರುವ ಕೆಲವು ವಿಶಿಷ್ಟ ರೂಪಗಳೂ ಟ್ಟಡಕ್ಕೆ ಉಪಯೋಗಿಸಿರುವ ಸಾಮಾಗ್ರಿಯೂ ಈ ಕಾಲವನ್ನು ನಿರ್ದೇಶಿಸುವುವು. ಇವು ಶೃಂಗೇರಿಯ ವಿದ್ಯಾಶಂಕರ ದೇಗುಲ, ಹಂಪೆಯ ಹಜಾರರಾಮರ ಗುಡಿ, ತಾಡಪತ್ರಿಯ ಲೇಪಾಕ್ಷಿ ಮಂದಿರ, ತಲಕಾಡಿನ ವೈದ್ಯೇಶ್ವರ ದೇವಾಲಯಕ್ಕೆ ಸರಿ ಹೊಂದುವ ಕಟ್ಟಡಗಳಾಗಿವೆ.
ಸಂಜೆ ಧಾವಿಸಿ ಬರುತ್ತಲಿದ್ದಿತು. ಕಪ್ಪುಪರದೆ ಇಳೆಯ ಮೇಲೆ ರಭಸದಿಂದ ಇಳಿಯುತ್ತಲಿದ್ದಿತು. ನಾವಾಗ ಪಾತಾಳೇಶ್ವರನ ಗುಡಿಯಿಂದ ಮರಳೇಶ್ವರ ದೇಗುಲದೆಡೆಗೆ, ಮರಳೇಶ್ವರನಿಂದ ಗೋಕರ್ಣೇಶ್ವರ ಅಲ್ಲಿಂದ ವೀರಭದ್ರನೆಡೆಗೆ ಮರಳಿನಲ್ಲಿ ಸಿಕ್ಕಿ ಬೀಳುತ್ತಿದ್ದ ಕಾಲುಗಳನ್ನು ಕಸುವಿನಿಂದ ಕೀಳುತ್ತ ಮುಂದಕ್ಕೆ ಬಾಗಿ ಉದ್ವೇಗ ಅನುತಾಪಗಳನ್ನು ಬೆಂದ ಹೃದಯದಲ್ಲಿರಿಸಿಕೊಂಡು ನಾಗಾಲೋಟಕ್ಕೆ ತೊಡಗಿದ್ದೆವು.
ಮೂರು ಮೈಲುಗಳಾಚೆ ವಿಜಯಪುರ, ವಿಜಯಪುರದ ಆರ್ಕೇಶ್ವರನ ದರ್ಶನವೊಂದು ಮುಗಿದರೆ ತಲಕಾಡಿನ ಪಂಚಲಿಂಗಗಳ ದರ್ಶನ ಪೂರ್ತಿಯಾಗುವುದೆಂದು ನಂಬಿ ಆ ದಾರಿಯಲ್ಲಿ ನಡೆದಾಗ ಮೂಡಣ ದಿಗಂತದಲ್ಲಿ ಕಾರ್ತಿಕ ಮಾಸ ಹುಣ್ಣಿಮೆಯೆಡೆಗೆ ನಡೆದಿದ್ದ ಚಂದ್ರಮ ಮೆಲ್ಲಮೆಲ್ಲಗೆ ಮೇಲೇರುತ್ತಿದ್ದ. ದಾರಿ ಕೊರಕಲು, ಮೋಟಾರು ಓಡಲೊಲ್ಲದು, ಸಾರಥಿ ನಿಲ್ಲಿಸಲಾರ, ಹಳ್ಳವೊಂದು ಇದಿರಾಯಿತು. ಮೋಟಾರು ನಿಂತೇ ಬಿಟ್ಟಿತು. ಸಾರಥಿಗೆ ಹೇಳಿದೆ. ಆರ್ಕೇಶ್ವರ ದೇವಾಲಯ ಕಾಣದೆ ಹೋದರೆ ಮನಸ್ಸಿನಲ್ಲಿ ಕೊನೆಯವರೆಗೂ ಅತೃಪ್ತಿ ಉಳಿಯುತ್ತದೆ. ಏನು ಮಾಡಲಿ ?
ನನ್ನ ಮನದ ಇಂಗಿತವನ್ನು ಅರಿತ ಸಾರಥಿ ಬನ್ನಿ ನಾವಿಬ್ಬರೂ ಮುಂದಕ್ಕೆ ಹೋಗಿ ನೋಡಿಕೊಂಡು ಬರೋಣ, ಸಿಕ್ಕರೆ ತಿರುಗಿ ಬಂದು ಇವರನ್ನು ಕರೆದುಕೊಂಡು ಹೋಗೋಣ ಎಂದನು. ಇಬ್ಬರೂ ಹೋದೆವು. ರಾತ್ರಿ ಒಂದು ಗಂಟೆ. ಎಡಬಲಕ್ಕೆ ಶಾಲಿವನ, ನರಿಗಳು ಬಯಲಾಟ ತಾಳಗತಿಗೆ ತಕ್ಕಂತೆ ಕೂಗುವ ಹಿಮ್ಮೇಳದವರಂತೆ ಕೂಗುತ್ತಲಿದ್ದವು. ಅನತಿ ದೂರ ಹೋಗುವಷ್ಟರಲ್ಲಿ ಗಿಡ ಮರಗಳ ಪೊದೆಯಲ್ಲಿ ಏನೋ ಬೆಳ್ಳಬೆಳ್ಳಗೆ, ಮುಸುಕುಮಸುಕಾಗಿ ಕಂಡಿತು. ಎದೆ ಜೋರಿನಿಂದ ಹಾರತೊಡಗಿತು.
ಹೊಯ್ಸಳ ಬಲ್ಲಾಳರು ಕನ್ನಡದ ಕುಲದೀಪಕರು. ಕ್ರಿಸ್ತಶಕಾಬ್ದ ಸಾವಿರದ ಇಸವಿಯಿಂದ ಹದಿಮೂರು ನೂರರವರೆಗೆ ಎಂದರೆ ಅಖಂಡ ಮೂನ್ನೂರು ವರ್ಷಗಳ ಪರ್ಯಂತ ಕನ್ನಡದ ನಂದಾದೀವಿಗೆಯನ್ನು ಹಚ್ಚಿ ನಾಡುನುಡಿಯನ್ನು ಸಂರಕ್ಷಿಸಿದರು. ಈ ವಂಶದ ಮೂಲಪುರುಷನ ಹೆಸರು ಸ್ಥಳ. ಮೂಡಿಗೆರೆ ತಾಲ್ಲೂಕಿನಲ್ಲಿರುವ ಸೊಸೆವೂರು ಇವನ ಜನ್ಮಸ್ಥಳವಾಗಿದೆ.
ನಮ್ಮ ದೇಗುಲಗಳೇ ನಮ್ಮ ರಾಷ್ಟ್ರದ ಚರಿತ್ರೆಯ ಹೆಗ್ಗುರುತು. ಇಂತಹ ದೇಗುಲಗಳ ಅಭ್ಯಾಸದಿಂದ ನಮ್ಮ ಬದುಕು ನಯನವಾಗುತ್ತದೆ. ನಿರ್ಮಲವಾಗುತ್ತದೆ. ಕವಿಕಂಡ ಸತ್ಯ, ಶಿಲ್ಪ ಕಂಡ ಸೌಂದರ್ಯಗಳೇ ನಮ್ಮ ಬಾಳಿನ ಅಲಂಕಾರ.
FAQ
ಭಾರತದ ಮೊದಲ ಮೆಟ್ರೋ ರೈಲು ಯಾವುದು ?
ಕಲ್ಕತ್ತಾ ಮೆಟ್ರೋ ರೈಲು
ಭಾರತದ ಪ್ರಥಮ ಹಡಗು ಯಾವುದು ?
ಜಲದುರ್ಗ
ಇತರೆ ವಿಷಯಗಳು :