ಮಾರುತಗಳ ಬಗ್ಗೆ ಮಾಹಿತಿ | Information About the Winds in Kannada

ಮಾರುತಗಳ ಬಗ್ಗೆ ಮಾಹಿತಿ Information About the Winds Marutagala Bagge Mahiti in Kannada

ಮಾರುತಗಳ ಬಗ್ಗೆ ಮಾಹಿತಿ

Information About  the Winds in Kannada
Information About the Winds in Kannada

ಮಾರುತಗಳ ಬಗ್ಗೆ ಮಾಹಿತಿ

ಅಧಿಕ ಒತ್ತಡ ಪಟ್ಟಿಯಿಂದ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಸಮತಲವಾಗಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನ ಕಡೆಗೆ ವಾಯು ಚಲಿಸುವ ಪ್ರಕ್ರಿಯೆಗೆ ಮಾರುತಗಳು ಎಂದು ಕರೆಯುವರು.

ಗಾಳಿಯನ್ನು ಅಳೆಯುವ ಸಾಧನ – ಪವನ ಮಾಪಕ ಅಥವಾ ಅನಿಮೋ‌ ಮೀಟರ್

ಗಾಳಿಯ ದಿಕ್ಕನ್ನು ಸೂಚಿಸುವ ಸಾಧನ – ಪವನ ದಿಕ್ಸೂಚಿ

ಮಾರುತಗಳ ವಿಧಗಳು

೧. ನಿರಂತರ ಮಾರುತ :

ಭೂಮಿಯನ್ನು ಸಂಪೂರ್ಣವಾಗಿ ಒಳಗೊಂಡು ಅಧಿಕ ಒತ್ತಡ ಪಟ್ಟಿಯಿಂದ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಯಾವಾಗಲೂ ಬೀಸುವ ಮಾರುತಗಳನ್ನು ನಿರಂತರ ಅಥವಾ ಭೂ ಮಂಡಳಿಯ, ಪ್ಲಾನೇಟರಿ ವಿಂಡ್‌ ಎಂದು ಕರೆಯುವರು. ಇದರಲ್ಲಿ ೩ ಪ್ರಕಾರಗಳಿವೆ.

ವಾಣಿಜ್ಯ :

ಎರಡು ಗೋಳಾರ್ಧದಲ್ಲಿ ಉಪ ಉಷ್ಣ ವಲಯದ ಅಧಿಕ ಒತ್ತಡ ಪಟ್ಟಿಯಿಂದ ಸಮಭಾಜಕ ವೃತ್ತದ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಬೀಸುತ್ತದೆ. ಈ ಮಾರುತಗಳ ಉತ್ತರ ಗೋಳಾರ್ಧದಲ್ಲಿ ಈಶಾನ್ಯ ದಿಕ್ಕಿನಿಂದ ನೈಋತ್ಯ ದಿಕ್ಕಿನ ಕಡೆಗೂ ದಕ್ಷಿಣ ಗೋಳಾರ್ಧದಲ್ಲಿ ಆಗ್ನೇಯಿಂದ ವಾಯುವ್ಯ ದಿಕ್ಕಿನ ಕಡೆಗೂ ದಕ್ಷಿಣ ಗೋಳಾರ್ಧದಲ್ಲಿ ಆಗ್ನೆಯಿಂದ ವಾಯುವ್ಯ ದಿಕ್ಕಿನ ಕಡೆಗೆ ಬಂದಂತೆ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಉಷ್ಣವಲಯದ ಮರಭೂಮಿಗಳು ಪಶ್ಚಿಮ ದಿಕ್ಕಿನಲ್ಲಿದೆ.

ಪ್ರತಿ ವಾಣಿಜ್ಯ ಮಾರುತಗಳು :

ಎರಡು ಗೋಳಾರ್ಧಗಳಲ್ಲಿ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿಯಿಂದ ಉಪ ಧ್ರುವೀಯ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಬೀಸುತ್ತವೆ. ಈ ಮಾರುತಗಳು ಉತ್ತರ ಗೋಳಾರ್ಧದಲ್ಲಿ ನೈಋತ್ಯ ದಿಕ್ಕಿನಿಂದ ಈಶಾನ್ಯ ದಿಕ್ಕಿನ ಕಡೆಗೂ ದಕ್ಷಿಣ ಗೋಳಾರ್ಧದಲ್ಲಿ ವಾಯುವ್ಯ ದಿಕ್ಕಿನಿಂದ ಆಗ್ನೇಯ ದಿಕ್ಕಿನ ಕಡೆಗೆ ಬೀಸುತ್ತವೆ. ಇವುಗಳನ್ನು ಪಶ್ಚಿಮ ಮಾರುತಗಳು ಎನ್ನುವರು.

ಧ್ರುವಿಯ ಗಾಳಿಗಳು :

ಎರಡು ಗೋಳಾರ್ಧಗಳಲ್ಲಿ ಧ್ರುವೀಯ ಅಧಿಕ ಒತ್ತಡ ಪಟ್ಟಿಯಿಂದ ಉಪ ಧ್ರುವಿಯ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಬೀಸುತ್ತವೆ. ಈ ಮಾರುತಗಳು ಉತ್ತರ ಗೋಳಾರ್ಧದಲ್ಲಿ ಈಶಾನ್ಯದಿಂದ ನೈರುತ್ಯ ದಿಕ್ಕಿನ ಕಡೆಗೂ ದಕ್ಷಿಣ ಗೋಳಾರ್ಧದಲ್ಲಿ ಆಗ್ನೇಯಯಿಂದ ವಾಯುವ್ಯ ದಿಕ್ಕಿನ ಕಡೆಗೂ ಅಂದರೆ ಪೂರ್ವದಿಂದ ಪಶ್ಚಿಮ ದಿಕ್ಕಿನ ಕಡೆಗೆ ಬೀಸುತ್ತವೆ.

೨. ಮಾನ್ಸೂನ್‌ ಮಾರುತಗಳು :

ವಿಸ್ತಾರವಾದ ಪ್ರದೇಶದಲ್ಲಿ ಅಧಿಕ ಒತ್ತಡ ಪಟ್ಟಿಯಿಂದ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಋತುಮಾನಗಳಿಗೆ ಅನುಸಾರವಾಗಿ ಬೀಸುವ ಮಾರುತಗಳಿಗೆ ಮಾನ್ಸೂನ್‌ ಮಾರುತಗಳು ಅಥವಾ ನಿಯತಕಾಲಿಕ ಮಾರುತಗಳು ಅಥವಾ ಋತುಕಾಲಿಕ ಮಾರುತಗಳು ಅಥವಾ ಕ್ಲುಪ್ತ ಮಾರುತಗಳು ಎಂದು ಕರೆಯುತ್ತಾರೆ.

ಏಷ್ಯಾದ ಆಗ್ನೇಯ ಮತ್ತು ದಕ್ಷಿಣ ರಾಷ್ಟ್ರಗಳಾದ ಭಾರತ, ವಿಯೆಟ್ನಾಂ, ಥೈಲ್ಯಾಂಡ ಕಾಂಬೋಡಿಯಾ, ಪಾಕಿಸ್ತಾನ, ಅಫಘಾನಿಸ್ತಾನ ಮುಂತಾದ ರಾಷ್ಟ್ರಗಳಲ್ಲಿ ಈ ಮಾರುತಗಳು ಬೀಸುತ್ತವೆ.

ಮಾನ್ಸೂನ್‌ ಎಂಬ ಪದವು ಅರೇಬಿಕ ಭಾಷೆಯ ಮೌಸಿಂ ಎಂಬ ಪದದಿಂದ ಬಂದಿದೆ. ಇದರ ಅರ್ಥ ಋತುಕಾಲಿಕ ಅಥವಾ ನಿಯತಕಾಲಿಕ ಎಂದು ಕರೆಯುವರು.

೩. ಸ್ಥಳೀಯ ಮಾರುತಗಳು :

ನಿರಂತರ ಮಾರುತಗಳು ಮತ್ತು ನಿಯತಕಾಲಿಕ ಮಾರುತಗಳು ಬೀಸುವ ಸ್ಥಳಗಳಲ್ಲಿಯೇ ಕೆಲವೊಂದು ಸ್ಥಳೀಯ ಕಾರಣಗಳಿಂದ ಉಗಮವಾಗುವ ಮಾರುತಗಳಿಗೆ ಸ್ಥಳೀಯ ಮಾರುತಗಳು ಎಂದು ಕರೆಯುವರು. ಇದರಲ್ಲಿ ೨ ವಿಧಗಳಿವೆ.

ಸಮುದ್ರ ಮತ್ತು ಭೂಮಂದ ಮಾರುತಗಳು :

ಹಗಲಿನವಧಿಯಲ್ಲಿ ಮಾರುತಗಳು ಜಲಭಾಗದಿಂದ ಭೂ ಭಾಗದ ಕಡೆಗೆ ಮತ್ತು ರಾತ್ರಿ ಅವಧಿಯಲ್ಲಿ ಭೂಭಾಗದಿಂದ ಜಲಭಾಗದ ಕಡೆಗೂ ಬೀಸುವ ಮಾರುತಗಳಿಗೆ ಭೂ ಸಮುದ್ರದ ಮಂದ ಮಾರುತಗಳು ಎಂದು ಕರೆಯುವರು.

ಪರ್ವತ ಮತ್ತು ಕಣಿವೆ ಮಾರುತಗಳು :

ಹಗಲಿನ ಅವಧಿಯಲ್ಲಿ ಕಣಿವೆಯಿಂದ ಪರ್ವತದ ಕಡೆಗೂ ರಾತ್ರಿ ಅವಧಿಯಲ್ಲಿ ಪರ್ವತದಿಂದ ಕಣಿವೆ ಕಡೆಗೂ ಬೀಸುವಂತ ಮಾರುತಗಳಿಗೆ ಪರ್ವತ ಮತ್ತು ಕಣಿವೆಯ ಮಾರುತ ಎಂದು ಕರೆಯುವರು.

ಪರ್ವತ ಮಾರುತಗಳಿಗೆ ಕಾಟಾಬೇಟಿಕ ಮತ್ತು ಕಣಿವೆ ಮಾರುತಗಳಿಗೆ ಅನಾಬೇಟಿಕ ಎಂದು ಕರೆಯುವರು.

ಸ್ಥಳೀಯ ಮಾರುತಗಳಿಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಳಿಂದ ಕರೆಯುವರು.

೪. ಅನಿಶ್ಚಿತ ಮಾರುತ :

ನಿರಂತರ ಮಾರುತಗಳು ಮತ್ತು ನಿಯತಕಾಲಿಕ ಮಾರುತಗಳು ಬೀಸುವ ಸ್ಥಳಗಳಲ್ಲಿಯೇ ಒಮ್ಮಿಂದೊಮ್ಮೆಲೆ ವೃತ್ತಾಕಾರದಲ್ಲಿ ಬೀಸುವ ಮಾರುತಗಳಿಗೆ ಅನಿಶ್ಚಿತ ಮಾರುತಗಳು ಎಂದು ಕರೆಯುವರು.

ಇದರಲ್ಲಿ ಎರಡು ವಿಧಗಳಿವೆ

ಆವರ್ತ ಮಾರುತ :

ಸುತ್ತಲಿನ ಅಧಿಕ ಒತ್ತಡ ಪಟ್ಟಿಯಿಂದ ಕೇಂದ್ರದ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ವೃತ್ತಾಕಾರದಲ್ಲಿ ಬೀಸುವ ಮಾರುತಗಳಿಗೆ ಆವರ್ತ ಮಾರುತಗಳು ಎನ್ನುವರು.

ಈ ಮಾರುತಗಳು ಉತ್ತರ ಗೋಳಾರ್ಧದಲ್ಲಿ ತಮ್ಮ ಎಡಗಡೆಗೂ ಮತ್ತು ದಕ್ಷಿಣ ಗೋಳಾರ್ಧದಲ್ಲಿ ತಮ್ಮ ಬಲಗಡೆಗೂ ಬೀಸುತ್ತದೆ.

ಪ್ರತ್ಯಾವರ್ತ ಮಾರುತಗಳು :

ಕೇಂದ್ರದ ಅಧಿಕ ಒತ್ತಡ ಪಟ್ಟಿಯಿಂದ ಸುತ್ತಲಿನ ಕಡಿಮೆ ಒತ್ತಡ ಪಟ್ಟಿಯ ಕಡೆಗೆ ಆವರ್ತ ಮಾರುತಗಳಿಗೆ ವಿರುದ್ದವಾಗಿ ಬೀಸುವ ಮಾರುತಗಳಾಗಿವೆ.

ಇವುಗಳನ್ನು ಉತ್ತರ ಗೋಳಾರ್ಧದಲ್ಲಿ ಬಲಗಡೆಗೂ ದಕ್ಷಿಣ ಗೋಳಾರ್ಧದಲ್ಲಿ ಎಡಗಡೆಗೂ ಬೀಸುತ್ತವೆ.

FAQ

ಮಾರುತಗಳ ವಿಧಗಳನ್ನು ತಿಳಿಸಿ

ನಿರಂತರ ಮಾರುತ, ಮಾನ್ಸೂನ್‌ ಮಾರುತ, ಸ್ಥಳೀಯ ಮಾರುತ, ಅನಿಶ್ಚಿತ ಮಾರುತ

ಸಹರಾದಲ್ಲಿ ಯಾವ ಮಾರುತವಾಗುತ್ತದೆ ?

ಸಿರಾಕೋ

ಇತರೆ ವಿಷಯಗಳು :

ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಮಾಹಿತಿ

ಭೂಕಂಪದ ಬಗ್ಗೆ ಮಾಹಿತಿ‌

Leave a Reply

Your email address will not be published. Required fields are marked *