ವಿಶ್ವ ಗ್ರಾಹಕರ ಹಕ್ಕು ದಿನದ ಬಗ್ಗೆ ಮಾಹಿತಿ | Information about World Consumer Rights Day in Kannada

ವಿಶ್ವ ಗ್ರಾಹಕರ ಹಕ್ಕು ದಿನದ ಬಗ್ಗೆ ಮಾಹಿತಿ Information about World Consumer Rights Day Vishva Grahaka hakku Dinada Bagge Mahiti in Kannada

ವಿಶ್ವ ಗ್ರಾಹಕರ ಹಕ್ಕು ದಿನದ ಬಗ್ಗೆ ಮಾಹಿತಿ

Information about World Consumer Rights Day in Kannada
Information about World Consumer Rights Day in Kannada

ಈ ಲೇಖನಿಯಲ್ಲಿ ವಿಶ್ವ ಗ್ರಾಹಕರ ಹಕ್ಕು ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಶ್ವ ಗ್ರಾಹಕರ ಹಕ್ಕು ದಿನದ ಬಗ್ಗೆ ಮಾಹಿತಿ

ವಿಶ್ವ ಗ್ರಾಹಕರ ಹಕ್ಕು

ಗ್ರಾಹಕರ ಹಕ್ಕುಗಳನ್ನು ಅಂಗೀಕರಿಸಲು ಜಾಗತಿಕವಾಗಿ ಮಾರ್ಚ್‌ ೧೫ ರಂದು ವಿಶ್ವ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಪ್ರತಿ ವರ್ಷ, ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲು ನಿರ್ದಿಷ್ಟ ಥೀಮ್‌ ನೊಂದಿಗೆ ಪ್ರತಿ ವರ್ಷವು ಕೂಡ ವಿಶ್ವ ಗ್ರಾಹಕರ ದಿನವನ್ನು ಆಚರಿಸುತ್ತಾರೆ.

೨೦೨೨ ರ ವಿಶ್ವ ಗ್ರಾಹರ ಹಕ್ಕು ದಿನದ ಥೀಮ್‌ :

ಫೇರ್‌ ಡಿಜಿಟಲ್‌ ಪೈನಾನ್ಸ್‌

ವಿಶ್ವ ಗ್ರಾಹಕ ದಿನಾಚರಣೆಯ ಉದ್ದೇಶ

ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು, ಮಾರುಕಟ್ಟೆಯಲ್ಲಿ ದುರುಪಯೋಗದ ಬಗ್ಗೆ ಅರಿವು ಮೂಡಿಸಲು ಜಾಗತಿಕವಾಗಿ ಮಾರ್ಚ್‌ ೧೫ ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ( World Consumer Rights Day ) ಆಚರಿಸಲಾಗುತ್ತದೆ. ಹಣ ಕೊಟ್ಟು ವಸ್ತು ಅಥವಾ ಸೇವೆ ಕೊಂಡುಕೊಳ್ಳುವವರೆಲ್ಲರೂ ಗ್ರಾಹಕರೇ. ಆದರೆ ಹೆಚ್ಚಿನ ಗ್ರಾಹಕರಿಗೆ ತಮಗೆ ಹಕ್ಕುಗಳಿವೆ. ಎಂಬುದೇ ಗೊತ್ತಿರುವುದಿಲ್ಲ. ಇದನ್ನು ಎಲ್ಲರಿಗೂ ತಿಳಿಸುವುದು, ತಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯುವಂತೆ ಮಾಡುವುದೇ ಗ್ರಾಹಕರ ಹಕ್ಕುಗಳ ದಿನದ ಉದ್ದೇಶವಾಗಿದೆ.

ಗ್ರಾಹಕರು ಮತ್ತು ಗ್ರಾಹಕರ ಹಕ್ಕು ದಿನ

ಹಣ ಕೊಟ್ಟು ವಸ್ತು ಅಥವಾ ಸೇವೆ ಕೊಂಡುಕೊಳ್ಳುವವರೆಲ್ಲರೂ ಗ್ರಾಹಕರೇ. ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನ್ಯಾಯ ಸಮ್ಮತವಾದ, ಸುರಕ್ಷಿತವಾದ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗಬೇಕು. ಎಂಬ ಉದ್ದೇಶದಿಂದ ಅಮೇರಿಕದ ಆಗಿನ ಅಧ್ಯಕ್ಷ ಜಾನ್‌ ಎಫ್.‌ ಕೆನಡಿಯವರು ಈ ದಿನದ ಅಗತ್ಯವನ್ನು ಪ್ರತಿಪಾದಿಸಿದರು ತಮ್ಮ ದೇಶದಲ್ಲಿ ವಿಧೇಯಕಗಳನ್ನು ಹಾಗೂ ವಿಶ್ವಸಂಸ್ಥೆಯಲ್ಲಿ ಗೊತ್ತುವಳಿಯಲ್ಲಿ ಗೊತ್ತುವಳಿಗಳನ್ನು ಮಂಡಿಸಿದರು. ೧೯೮೩ ರಲ್ಲಿ ಈ ದಿನಾಚರಣೆ ಆರಂಭವಾಯಿತು.

ಗ್ರಾಹಕ ಹಕ್ಕು ಕಾಯ್ದೆ

ಭಾರತದಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ೧೯೮೬ ರಲ್ಲಿ ಕಾಯ್ದೆಯನ್ನು ರೂಪಿಸಲಾಯಿತು. ( ಗ್ರಾಹಕರ ಸಂರಕ್ಷಣಾ ಕಾಯಿದೆ ೧೯೮೬ ಆ ವರ್ಷ ಡಿಸೆಂಬರ್‌ ೨೪ ರಂದು ಜಾರಿಗೆ ಬಂದಿತು. ಅಂದಿನಿಂದ ನಮ್ಮ ದೇಶದಲ್ಲಿ ಡಿಸೆಂಬರ್‌ ೨೪ ನ್ನು ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸಲಾಯಿತು. )

ಗ್ರಾಹಕರ ಹಕ್ಕುಗಳು

ಸುರಕ್ಷತೆಯ ಹಕ್ಕು :

ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯುಂಟು ಮಾಡುವ ಮತ್ತು ಇತರೆ ನ್ಯೂನತೆಗಳನ್ನು ಹೊಂದಿರುವ ಆಹಾರ ವಸ್ತು, ಔಷಧ, ವಿದ್ಯುತ್‌ ಉಪಕರಣಗಳು, ಗ್ಯಾಸ್‌ ಸಿಲಿಂಡರ್‌, ಕುಕ್ಕರ್‌ಗಳಿಂದ ರಕ್ಷಣೆ ಪಡೆಯುವ ಹಕ್ಕಾಗಿದೆ.

ಮಾಹಿತಿ ಪಡೆಯುವ ಹಕ್ಕು :

ಗ್ರಾಹಕರು ತಾವು ಖರೀದಿಸಲು ಇಚ್ಚಿಸುವ ಸರಕುಗಳ ಪ್ರಮಾಣ, ಗುಣಮಟ್ಟ, ಬೆಲೆ, ಉತ್ಪಾದನೆ ಹಾಗೂ ಕಾಯ್ದೆ ದಿನಾಂಕ ಮುಂತಾದವುಗಳ ಬಗ್ಗೆ ನೈಜ ಹಾಗೂ ಸಂಪೂರ್ಣ ಮಾಹಿತಿ ಪಡೆಯಬಹುದು.

ಆಯ್ಕೆಯ ಹಕ್ಕು :

ಮಾರಾಟಗಾರ ನಿರ್ಧಿಷ್ಟ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸಿದರೂ ವೈವಿದ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗುಣವಾಗಿ ಸರಕು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ.

ದೂರು ನೀಡುವ ಹಕ್ಕು :

ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಖರೀದಿಸಿದ ಸರಕು ಅಥವಾ ಸೇವೆಗಳಿಂದ ಅತೃಪ್ತಿ ಹೊಂದಿದ್ದಲ್ಲಿ ಸಂಬಂದಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ.

ಪರಿಹಾರ ಪಡೆಯುವ ಹಕ್ಕು :

ಗ್ರಾಹಕರು ತಾವು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿ ದೋಷಗಳಿದ್ದಲ್ಲಿ ಅವುಗಳಿಗೆ ಪರಿಹಾರವಾಗಿ ಬದಲಿ ವಸ್ತು ಅಥವಾ ದೋಷರಹಿತ ಸೇವೆ ಪಡೆಯುವ, ನಷ್ಟ ಭರಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.

ಗ್ರಾಹಕರ ಶಿಕ್ಷಣದ ಹಕ್ಕು :

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಉಪಯೋಗಿಸುವ ಸಂದರ್ಭಗಳಲ್ಲಿ ಸಂಪೂರ್ಣ ಜ್ಞಾನ ಹಾಗೂ ಪರಿಣಿತಿಯನ್ನು ಪಡೆಯುವ, ಹಾಗೆ ತಮ್ಮ ಹಕ್ಕುಗಳ ಬಗ್ಗೆ ಕಾನೂನುಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಪ್ರಾತಿನಿಧ್ಯದ ಹಕ್ಕು :

ಆರೋಗ್ಯ ಪೂರ್ಣ ಪರಿಸರದ ಹಕ್ಕು :

ಗ್ರಾಹಕ ನ್ಯಾಯಾಲಯ

ನಮ್ಮ ದೇಶದಲ್ಲಿ ಗ್ರಾಹಕ ನ್ಯಾಯಾಲಯಗಳು ಅತ್ಯುತ್ತಮವಾದ ಸೇವೆಯನ್ನೇ ಗ್ರಾಹಕರಿಗೆ ನೀಡುತ್ತಿವೆ. ಗ್ರಾಹಕ ಕಾಯಿದೆ ಹಾಗೂ ಮಾಹಿತಿ ಹಕ್ಕು ಕಾಯಿದೆಗಳೆರಡನ್ನೂ ಸಮರ್ಪಕವಾಗಿ ಬಳಸಿಕೊಂಡಲ್ಲಿ, ಗ್ರಾಹಕ ತನಗಾದ ಅನ್ಯಾಯಕ್ಕೆ ಸರಿಯಾದ ನ್ಯಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

FAQ

ವಿಶ್ವ ಗ್ರಾಹಕರ ಹಕ್ಕು ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೧೫

ಗ್ರಾಹಕರ ಹಕ್ಕು ಕಾಯ್ದೆಯನ್ನು ಯಾವಾಗ ಜಾರಿಗೆ ಬಂದಿತು ?

೧೯೮೬

ಇತರೆ ವಿಷಯಗಳು :

ವಿಶ್ವ ಜಲ ದಿನದ ಬಗ್ಗೆ ಪ್ರಬಂಧ

GST ಯ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *