ಶಾಲಾ ಸಂಸತ್ತಿನ ಕಾರ್ಯ ಚಟುವಟಿಕೆಗಳು ಪ್ರಬಂಧ | School Parliament Working Activities Essay in Kannada

ಶಾಲಾ ಸಂಸತ್ತಿನ ಕಾರ್ಯ ಚಟುವಟಿಕೆಗಳು ಪ್ರಬಂಧ, School Parliament Working Activities Essay in Kannada, shala samsattina karya chatuvatikegalu prabandha

ಶಾಲಾ ಸಂಸತ್ತಿನ ಕಾರ್ಯ ಚಟುವಟಿಕೆಗಳು ಪ್ರಬಂಧ

ಈ ಲೇಖನಿಯಲ್ಲಿ ಶಾಲಾ ಸಂಸತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಪೀಠಿಕೆ

ಶಾಲಾ ಸಂಸತ್ತಿ ಕಾಯ೯ ಚಟುವಟಿಕೆಗಳಲ್ಲಿ ವಿದ್ಯಾಥಿ೯ಗಳ ಮುಖ್ಯ ಪಾತ್ರವೇನು?, ಚುನಾವಣೆಯಲ್ಲಿ ಭಾಗವಹಿಸಲು ವಿದ್ಯಾಥಿ೯ಗಳಲ್ಲಿ ಇರಬೇಕಾದ ಪ್ರಮುಖ ಗುಣಗಳೇನು?, ಚುನಾವಣೆಯಲ್ಲಿ ಭಾಗವಹಿಸುವುದರಿಂದ ವಿದ್ಯಾಥಿ೯ಗಳಲ್ಲಾಗುವ ಬದಲಾವಣೆಗಳೇನು?, ಶಾಲಾ ಸಂಸತ್ತಿನ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ, ರಾಜಕೀಯ ಹಸ್ತಕ್ಷೇಪ ವಿದ್ಯಾಥಿ೯ಗಳ ಮೇಲೆ ಬೀರುವ ಪರಿಣಾಮವೇನು, ಶಾಲಾ ಸಂಸತ್ತಿನಲ್ಲಿ ಚುನಾವಣಾ ರಚನೆ, ನಾಯಕತ್ವದ ಬಗ್ಗೆ ಸಂಪೂಣ೯ ಮಾಹಿತಿ ತಿಳಿಯಬಹುದಾಗಿದೆ.

School Parliament Working Activities Essay in Kannada

ಭಾರತದ ಸಂಸತ್ ರಚನೆ:

ಭಾರತ ಗಣರಾಜ್ಯದ ಸಕಾ೯ರದ ಎರಡು ಶಾಸನಗಳುಳ್ಳ (ಉಭಯ ಸದನಿಕ) ಸವೊ೯ಚ್ಛ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ,ʼʼರಾಜ್ಯಸಭಾʼʼ ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಮೇಲ್ಮನೆ, ಮತ್ತು ʼʼಲೋಕಸಭಾʼʼ ಎಂದು ಕರೆಯಲ್ಪಡುವ ಕೆಳಮನೆಯನ್ನು ಇದು ಒಳಗೊಂಡಿದೆ. ಇದು ಪ್ರಜಾಪ್ರತಿನಿಧಿಗಳ ಸಭೆಯೂ ಆಗಿದೆ. ಈ ಎರಡೂ ಸದನಗಳು ನವದೆಹಲಿಯಲ್ಲಿನ ಭವನದಲ್ಲಿರುವ ಪ್ರತ್ಯೇಕ ಶಾಸನಸಭೆಗಳಲ್ಲಿ ಸಭೆ ಸೇರುತ್ತವೆ.ಎರಡು ಸದನಗಳ ಯಾವುದಾದರೂ ಒಂದಕ್ಕೆ ಸೇರಿದ ಸದಸ್ಯರನ್ನು‌ ಸಂಸತ್ ಸದಸ್ಯ ಎಂಬುದಾಗಿ ಉಲ್ಲೇಖಿಸಲಾಗಿದೆ. ಲೋಕಸಭೆಯ MPಗಳು ನೇರ ಚುನಾವಣೆಯಿಂದ ಚುನಾಯಿಸಲ್ಪಡುತ್ತಾರೆ.

ಪ್ರತೀ ಶಾಲೆಗಳಲ್ಲಿ ಸಂಸತ್ತನ್ನು ರಚಿಸಲಾಗುತ್ತದೆ. ಪ್ರತೀ ವಷ೯ ವಿದ್ಯಾಥಿ೯ಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತೀ ವಿಭಾಗವು ಸಂಸತ್ತಿನಲ್ಲಿ ಪ್ರತಿನಿಧಿಸಲು ಇಬ್ಬರು ಸದಸ್ಯರನ್ನು ಆಯ್ಕೆ ಮಾಡುತ್ತದೆ.ಸಂಸತ್ತು ಪ್ರತೀ ತಿಂಗಳು ಅಧಿವೇಶನ ನಡೆಸುತ್ತದೆ. ಅಧಿವೇಶನವು ಪ್ರಾರಂಭವಾಗುವ ಒಂದು ವಾರದ ಮೊದಲು ವಿದ್ಯಾಥಿ೯ಗಳ ಕಲ್ಯಾಣಕ್ಕೆ ಪ್ರಶ್ನೆಗಳನ್ನು ಕಳುಹಿಸುತ್ತಾರೆ.ಶಾಲಾ ಚಟುವಟಿಕೆಗಳ ವಿವಿಧ ಇಲಾಕೆಗಳ ಉಸ್ತುವಾರಿ ಸಚಿವರು ಅವರಿಗೆ ಉತ್ತರಿಸುತ್ತಾರೆ.

ಸಂಸತ್ತಿಗೆ ಚುನಾವಣೆಯು ಒಂದು ದೊಡ್ಡ ಘಟಕವಾಗಿದೆ. ವಿದ್ಯಾಥಿ೯ಗಳನ್ನು ಇಲ್ಲಿ ವಿವಿಧ ಪಕ್ಷಗಳಾಗಿ ವಿಭಜಿಸುತ್ತಾರೆ. ಚುರುಕಾದ ಪ್ರಚಾರವನ್ನು ಅಭ್ಯಥಿ೯ಗಳು ನಡೆಸುತ್ತಾರೆ. ಉದಾಹರಣೆಗೆ ಹಳೇ ಹುಬ್ಬಳ್ಳಿಯ ಶ್ರೀ ಸಿದ್ದಾರೂಢಸ್ವಾಮಿ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ ಚುನಾವಣೆ ಮೂಲಕ ನಡೆಯಿಯತು. ಚುನಾವಣ ಪ್ರಕ್ರಿಯೆ ಸಂಪೂಣ೯ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಸಲಾಯಿತು. ಮತದಾರರ ಪಟ್ಟಿ, ಬ್ಯಾಲೆಟ್‌ ಪೇಪರ್‌, ಮತ ಮುದ್ರೆ, ಶಾಹಿ,ಗುರುತಿನ ಚೀಟಿ, ಮತ ಪೆಟ್ಟಿಗೆ ಎಲ್ಲವೂ ಅಚ್ಚುಕಟ್ಟಾಗಿದ್ದವು.

ಪತೀ ಶಾಲೆಯಲ್ಲಿ ಪ್ರಜಾಪ್ರಭುತ್ವದ ತತ್ವ ವಿದ್ಯಾಥಿ೯ಗಳಿಗೆ ತಿಳಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ರಚನೆ ಮಾಡಲಾಗುತ್ತದೆ. ಇದರಿಂದ ಚುನಾವಣೆ ಪ್ರಕ್ರಿಯೆ ಅಚ್ಚುಕಟ್ಟಾಗಿ ಪಾಲಿಸುವುದರ ಜೊತೆಗೆ ಶಾಲಾ ವಿದ್ಯಾಥಿ೯ಗಳಿಗೆ ಸಂಸತ್ತಿನ ರಚನೆ ಮತ್ತು ಮತದಾನದ ಅರಿವನ್ನು ಮೂಡಿಸಿದಂತಾಗುತ್ತದೆ. ಇದರ ಜೊತೆಗೆ ಮಕ್ಕಳು ಸ್ಪಧಾ೯ತ್ಮಕ ಗುಣಗಳನ್ನು ಅಳವಡಿಸಿಕೊಳ್ಳಲು ಈ ಶಾಲಾ ಸಂಸತ್‌ ರಚನೆ ಸಹಕಾರಿಯಾಗಿದೆ. ಹಾಗೂ ಇದರ ಜೊತೆಗೆ ವಿದ್ಯಾಥಿ೯ಗಳ ನಾಯಕತ್ವ ಗುಣ ಅಭಿವೃದ್ಧಿಯಾಗುತ್ತದೆ.

ಭಾರತವು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು ಇಲ್ಲಿ ಸಂಸದೀಯ ಆಡಳಿತವೂ ಚಾಲ್ತಿಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಈ ವ್ಯವಸ್ಥೆಯ ಕಾಯ೯ನಿವ೯ಹಣೆಯನ್ನು ತಿಳಿದುಕೊಳ್ಳಬೇಕಾಗಿದೆ. ಸಂಸತ್ತಿನ ಸದಸ್ಯರನ್ನು ಮತದಾನದ ಮೂಲಕ ಮಾಡಲಾಗುತ್ತದೆ. ಪ್ರತೀ ಜೂನ್ ತಿಂಗಳಲ್ಲಿ ಶಾಲೆಗಳು ಪ್ರಾರಂಭವಾದ ನಂತರ, ಶಾಲಾ ಸಂಸತ್ತಿನ ರಚನೆಗೆ ಚುನಾವಣೆಗಳು ನಡೆಯುತ್ತವೆ. ಶಾಲೆಗಳಲ್ಲಿ ಸಂಸತ್ತಿನ ರಚನೆಗೆ ವಗ೯ ನಾಯಕರನ್ನು ಅಯ್ಕೆ ಮಾಡಲಾಗುತ್ತದೆ. ಇದರಲ್ಲಿ ಅಧ್ಯಕ್ಷರು, ಶಾಲಾ ಮುಖಂಡರು ಮುಂತಾದ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.ಶಾಲಾ ನಾಯಕ ಮುಖ್ಯಮಂತ್ರಿಯಾಗಿದ್ದರೆ, ಮುಖ್ಯಮಂತ್ರಿಗಳು ಸಂಪುಟದ ಇತರ ಸದಸ್ಯರನ್ನು ನಾಮ ನಿದೇ೯ಶನ ಮಾಡುತ್ತಾರೆ. ಹಾಗು ಅವರಿಗೆ ಖಾತೆಗಳನ್ನು ನೀಡಲಾಗುತ್ತದೆ. ಶಿಸ್ತು, ನೈಮ೯ಲ್ಯ, ಗ್ರಂಥಾಲಯ ಮತ್ತು ವಾಚನಾಲಯಗಳ ನಿವ೯ಹಣೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅವರಿಗೆ ವಹಿಸಲಾದ ಕೆಲವು ಖಾತೆಗಳು ಶಾಲೆಯ ಮುಖ್ಯೋಪಾಧ್ಯಾಯರು ಅಧ್ಯಕ್ಷತೆ ವಹಿಸುವರು.ಸಂಸತ್ತಿನ ಎರಡು ಅಥವಾ ಮೂರು ಅಧಿವೇಶನಗಳನ್ನು ಪ್ರತೀ ವಷ೯ ನಡೆಸಲಾಗುತ್ತದೆ.

ಶಾಲಾ ಸಂಸತಿನಲ್ಲಿ ರಾಜಕೀಯ ಹಸ್ತಕ್ಷೇಪ:

ಶಾಲಾ ಸಂಸತ್ತಿನ ಚುನಾವಣೆ ಇಂದು ಒಂದು ದೊಡ್ಡ ಘಟನೆಯಾಗಿದೆ. ಏಕೆಂದರೆ ರಾಜಕೀಯ ಪಕ್ಷಗಳು ಇದರಲ್ಲಿ ಆಸಕ್ತಿ ವಹಿಸುತಿವೆ. ಕೆಲವು ರಾಜಕೀಯ ಪಕ್ಷಗಳು ಅಧಿಕಾರಿಗಳ ವಿರುದ್ಧ ಅಥವಾ ಪ್ರತಿಸ್ಪಧಿ೯ ರಾಜಕೀಯ ಪಕ್ಷಗಳ ವಿರುದ್ಧ ವಿದ್ಯಾಥಿ೯ಗಳನ್ನು ಬೆಂಬಲಿಸುತ್ತವೆ. ಅವರು ತಮ್ಮ ರಾಜಕಿಯ ಉದ್ದೇಶಗಳಿಗಾಗಿ ವಿದ್ಯಾಥಿ೯ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.ಈ ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಅಮಾಯಕ ವಿದ್ಯಾಥಿ೯ಗಳ ಜೀವನ ಮತ್ತು ವೃತ್ತಿಯೊಂದಿಗೆ ಆಟವಾಡುತ್ತಾರೆ. ಇದು ವಿದ್ಯಾಥಿ೯ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ ಆಗಾಗ್ಗೆ ರಾಜಕೀಯ ಪಕ್ಷಗಳಿಗೆ ಸೇರಿದ ವಿದ್ಯಾಥಿ೯ಗಳ ನಡುವೆ ಘಷ೯ಣೆ ನಡೆಯುತ್ತವೆ ಮತ್ತು ಇದಕ್ಕೆ ಆಯಾ ರಾಜಕೀಯ ಯಜಮಾನರು ಬೆಂಬಲ ನೀಡುತ್ತಾರೆ. ಇದರಿಂದಾಗಿ ಮುಷ್ಕರಗಳು ಮತ್ತು ಕೆಲವೊಮ್ಮೆ ಅಮಾಯಕ ವಿದ್ಯಾಥಿ೯ಗಳ ಸಾವು ಕೂಡ ಸಂಭವಿಸುತ್ತದೆ. ರಾಜಕೀಯ ಗುಂಪುಗಳ ಹಸ್ತಕ್ಷೇಪವು ಶಾಲಾ ಸಂಸತ್ತಿನ ಒಳ್ಳೆಯ ಹೆಸರನ್ನು ಹಾಳು ಮಾಡುವ ಉದ್ದೇಶವನ್ನು ಇಟ್ಟುಕೊಂಡಿರುತ್ತವೆ.

ಶಾಲಾ ಸಂಸತ್ತಿನ ಕಾಯ೯ ಚಟುವಟಿಕೆ:

ಶಾಲೆಯ ವಿವಿಧ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಊಟ ಇನ್ನಿತರ ಚಟುವಟಿಕೆಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ಅದರಲ್ಲಿನ ನ್ಯೂನತೆಗಳನ್ನು ಮುಖ್ಯ ಶಿಕ್ಷಕರಿಗೆ ತೋರಿಸಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಈ ಚುನಾವಣೆ ನಡೆಸಲಾಗಿದೆ.ಅಲ್ಲದೇ ಪಠ್ಯದಲ್ಲದ್ದನ್ನು ಪ್ರತ್ಯೇಕವಾಗಿ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಸಂಸತ್‌ ರಚನೆ ಚುನಾವಣೆಯ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ಎಲ್ಲರನ್ನು ಸಂಬಾಳಿಸುವ ಶಕ್ತಿಯ ವೃದ್ಧಿ ಶಾಲಾ ಸಂಸತ್‌ ಚುನಾವಣೆಯ ಮುಖ್ಯ ಗುರಿಯಾಗಿದೆ.

ವಿದ್ಯಾಥಿ೯ಗಳೇ ಎಲ್ಲಾ ಕಾಯ೯ಗಳಲ್ಲಿ ಭಾಗಿಯಾಗಿ ಮೊದಲ ಬಾರಿಗೆ ಚುನಾವಣೆಯ ಅನುಭವವನ್ನು ಪಡೆಯುತ್ತಾರೆ. ನಿಜವಾದ ವಿಧಾನ ಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯಥಿ೯ಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದುಕೊಳ್ಳುವಿಕೆ,ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏಪ೯ಡುತ್ತದೆ. ಇದರಿಂದ ಪ್ರಜಾಪ್ರಭುತ್ವ ಎಂದರೇನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು, ಸಂಸತ್‌ ಹೇಗಿರುತ್ತದೆ, ಮುಖ್ಯಮಂತ್ರಿಗಳ ಕೆಲಸ, ಮಂತ್ರಿಗಳ ಕಾಯ೯ಗಳ ಕುರಿತು ಎಲ್ಲದರ ಬಗ್ಗೆ ವಿದ್ಯಾಥಿ೯ಗಳು ಇನ್ನಷ್ಟು ಮಾಹಿತಿ ಪಡೆಯುತ್ತಾರೆ.

ಪ್ರಜೆಗಳೇ ಪ್ರಭುಗಳಾಗುವ ʼಪ್ರಜಾಪ್ರಭುತ್ವʼ ವ್ಯವಸ್ಥೆಯನ್ನು ಬಲಗೊಳಿಸುವ ದೃಷ್ಠಿಯಲ್ಲಿ ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದೆಸೆಯಲ್ಲಿ ಪ್ರತಿ ವಷ೯ ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ ಶಾಲಾ ಸಂಸತ್‌ ರಚನೆ ಮತ್ತು ಮತದಾನ ಚುನಾವಣೆಯನ್ನು ನಡೆಸಲಾಗುತ್ತದೆ. ಈ ಶಾಲಾ ಸಂಸತ್‌ ರಚನೆಯ ಮುಖ್ಯ ಉದ್ದೇಶವೇನೆಂದರೆ ಮಕ್ಕಳಲ್ಲಿ ಈಗಿನಿಂದಲೇ ಸಂಸದೀಯ ವ್ಯವಸ್ಥೆಯ ಬಗೆಗೆ ತಿಳುವಳಿಕೆ ನೀಡುವುದಾಗಿದೆ.ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ.

ಚುನಾವಣೆಗೆ ಸ್ಪಧಿ೯ಸುವ ಅಭ್ಯಥಿ೯ಗಳು ಪ್ರಧಾನಮಂತ್ರಿ ಸ್ಥಾನಕ್ಕೆ Rs25 ಹಾಗೂ ಸಚಿವ ಸ್ಥಾನಗಕ್ಕೆ Rs20 ಠೇವಣಿ ಇಡಬೇಕು. ಮತದಾರರಿಗೆ ಆಸೆ ಆಮಿಷಗಳನ್ನು ಒಡ್ಡಬಾರದು. ಬೆದರಿಕೆ ಹಾಕಬಾರದು. ಪರಸ್ಪರ ಟೀಕೆ ಮಾಡಿಕೊಳ್ಳಬಾರದು. ಸ್ಪಧೆ೯ ಚುನಾವಣೆಗಷ್ಟೇ ಸೀಮಿತವಾಗಬೇಕು.

ಉಪಸಂಹಾರ:

ಶಾಲಾ ಸಂಸತ್ತಿನ ಕಾಯ೯ ಚಟುವಟಿಕೆಗಳು ಪ್ರತೀ ಶಾಲೆಗಳಲ್ಲಿ ವಷ೯ಕೊಮ್ಮೆ ನಡೆಯುವುದರಿಂದಾಗಿ ವಿದ್ಯಾಥಿ೯ಗಳಲ್ಲಿ ರಾಜಕೀಯ ನಾಯಕತ್ವದ ಬಗ್ಗೆ ಅರಿವು ಮೂಡುತ್ತದೆ. ಹಾಗೂ ಭಾರತದ ಸಂಸತ್ತಿನ ರಚನೆಯ ಬಗೆಗಿನ ಜ್ಞಾನ ಇನ್ನಷ್ಟು ಹೆಚ್ಚವುದರ ಜೊತೆಗೆ ವಿದ್ಯಾಥಿ೯ಗಳಲ್ಲಿರುವ ಭಯವನ್ನು ಹೋಗಲಾಡಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಶಾಲಾ ಸಂಸತ್ತಿನ ರಚನೆಯ ಕಾಯ೯ ಚಟುವಟಿಕೆಯು ಪ್ರತೀ ವಿದ್ಯಾಥಿ೯ಯಲ್ಲೂ ಚುನಾವಣೆಯಲ್ಲಿ ಭಾಗವಹಿಸುವ ಆಸೆಯನ್ನು ಹೆಚ್ಚಿದುತ್ತದೆ.

ಇತರೆ ವಿಷಯಗಳು :

ನನ್ನ ಕನಸಿನ ಭಾರತದ ಬಗ್ಗೆ ಪ್ರಬಂಧ

ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *