ದಸರಾ ಬಗ್ಗೆ ಪ್ರಬಂಧ | Essay on Dussehra in Kannada

ದಸರಾ ಬಗ್ಗೆ ಪ್ರಬಂಧ, Essay on Dussehra in Kannada, dasara prabandha in kannada

ದಸರಾ ಬಗ್ಗೆ ಪ್ರಬಂಧ

ಎಲ್ಲರಿಗೂ ನಮಸ್ಕಾರಗಳು, ಪ್ರಸ್ತುತ ಈ ಲೇಖನದಲ್ಲಿ ನೀವು ದಸರಾ ಹಬ್ಬದ ಆಚರಣೆ, ಮಹತ್ವ, ಸಮುದಾಯಕ್ಕೆ ದಸರಾ ಹಬ್ಬದ ಕೊಡುಗೆ, ಪೌರಾಣಿಕ ಹಿನ್ನೆಲೆಗಳ ಬಗ್ಗೆ ಮಾಹಿತಿಯನ್ನು ಪಡೆಯುವಿರಿ. ಅದೇ ರೀತಿ ಮೈಸುರಿನಲ್ಲಿ ದಸರ ಹಬ್ಬದ ಸಂಭ್ರಮ ಸಡಗರದ ಬಗ್ಗೆ ಚುಟುಕಾದ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನವು ಓದುಗರಿಗೆ ಸಹಕಾರಿಯಾಗಬಹುದೆಂದು ಭಾವಿಸುತ್ತೇವೆ.

Essay on Dussehra in Kannada

ಪೀಠಿಕೆ

ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ನಾಡು. ಅದರ ಪ್ರಮುಖ ಹಬ್ಬಗಳಲ್ಲಿ ಒಂದು ದಸರಾ ಅಥವಾ ವಿಜಯ ದಶಮಿ ಹಬ್ಬ. ಇದನ್ನು ಇಡೀ ಹಿಂದೂ ಸಮುದಾಯದವರು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಹಬ್ಬವನ್ನು ಅಶ್ವೀಜ ಮಾಸದಲ್ಲಿ ಮಹಾಲಯ ಅಮಾವಾಸ್ಯೆ, ಪಿತೃಪಕ್ಷ ಕಳದ ಮೇಲೆ ಮಾರನೆಯ ದಿನದಿಂದ ಆಚರಿಸಲಾಗುತ್ತದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ದಸರಾ ಬರುತ್ತದೆ. ಇದನ್ನು ಬಹಳ ಆಡಂಬರ ಮತ್ತು ಪ್ರದರ್ಶನದಿಂದ ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ದಸರಾವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಇದು ವೈಭವದ ಹಬ್ಬವಾಗಿದೆ.

ಆಚರಣೆ

ದುರ್ಗಾ ದೇವಿಯ ಪ್ರತಿಮೆಯ ಮೇಲೆ ಅಪಾರ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಬಳಸುವುದರಿಂದ ಈ ಹಬ್ಬವನ್ನು ಅದ್ದೂರಿ ಮತ್ತು ಸುವರ್ಣಮಯವಾಗಿಸುತ್ತದೆ. ಪೂಜಾ ಮಂಟಪಗಳ ಸುತ್ತಲೂ ತಾತ್ಕಾಲಿಕವಾಗಿ ವಿವಿಧ ಅಂಗಡಿಗಳು ಮತ್ತು ಜಾತ್ರೆಗಳನ್ನು ಸ್ಥಾಪಿಸಲಾಗಿದೆ. ಈ ಅಂಗಡಿಗಳಲ್ಲಿ ಬೀದಿಬದಿಯ ತಿಂಡಿ ತಿನ್ನಲು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಬಲೂನ್‌ಗಳು ಮತ್ತು ಆಟಿಕೆಗಳನ್ನು ಖರೀದಿಸಲು ಮಕ್ಕಳು ಅಂಗಡಿಗಳ ಸುತ್ತಲೂ ಗುಂಪುಗೂಡುತ್ತಾರೆ.

ದುರ್ಗಾ ಪೂಜೆಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಇಡೀ ದೇಶ ಈ ಹಬ್ಬವನ್ನು ಆಚರಿಸುತ್ತದೆ. ಅವರು ಎಲ್ಲಾ ಐದು ದಿನವೂ ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಎಲ್ಲಾ ದಿನಗಳಲ್ಲಿ ಮೆಗಾ ಔತಣಗಳನ್ನು ಮಾಡುತ್ತಾರೆ.

ಎಲ್ಲಾ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು ಕೆಲವು ದಿನಗಳವರೆಗೆ ಮುಚ್ಚಲ್ಪಟ್ಟಿವೆ. ಒಂದು ವಾರದವರೆಗೆ ಎಲ್ಲರೂ ಹಬ್ಬದ ಉತ್ಸಾಹದಲ್ಲಿ ಇರುತ್ತಾರೆ. ಅವರು ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ವಿಶ್ರಾಂತಿ ಆನಂದಿಸುತ್ತಾರೆ. ಈ ಹಬ್ಬದ ಸಮಯದಲ್ಲಿ ಅನೇಕರು ತಮ್ಮ ದೂರದ ಸಂಬಂಧಿಕರನ್ನು ಭೇಟಿಯಾಗುತ್ತಾರೆ. ರಸ್ತೆಗಳು, ಕಟ್ಟಡಗಳು, ಮನೆಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ.

ನವರಾತ್ರಿ ಎಂದರೆ “ಒಂಬತ್ತು ರಾತ್ರಿಗಳು”(nine nights), ನಡೆಯುವ ಕಾಯ೯ಕ್ರಮವಾಗಿದ್ದು ಬಹಳ ಭವ್ಯತೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ನವರಾತ್ರಿ ಹಬ್ಬಕ್ಕೆ ಮಹಾನವಮಿ ಎಂದೂ ಕರೆಯುವರು. ಈ ಸಂದರ್ಭದಲ್ಲಿ, ರಾಕ್ಷಸ ರಾಜ ಮಹಿಷಾಸುರನನ್ನು ಗೆದ್ದ ದುಗಾ೯ ದೇವಿಯನ್ನು (Durga Puja) ಪೂಜಿಸಲಾಗುತ್ತದೆ; ಅವಳು ಶಕ್ತಿಯ ಸಂಕೇತ. ದಸರಾ ಹಿಂದೂ ಧಮ೯ದ ಒಂದು ಮಹತ್ವದ ಹಬ್ಬ.ದುಷ್ಠರ ಶಿಕ್ಷೆ ಮತ್ತು ಶಿಷ್ಠರ ರಕ್ಷಣೆ ಮಾಡಲು ದುಗಾ೯ ದೇವಿಯು ಒಂಭತ್ತು ಅವತಾರಗಳನ್ನು ಎತ್ತಿದಳು.

ದಸರಾ ಹಬ್ದದ ಮಹತ್ವ

ದಸರಾ ಹಿಂದುಗಳ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ಇದು ನಮ್ಮ ನಾಡ ಹಬ್ಬವೂ ಹೌದು. ಅನಾದಿ ಕಾಲದಿಂದಲೂ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹಿಂದೆ ವಿಜಯನಗರದ ಕಾಲದಿಂದಲೂ ದಸರಾ ಆಚರಣೆ ನಡೆದುಕೊಂಡು ಬಂದಿದೆ. ಇದಕ್ಕೆ ಹಂಪೆಯಲ್ಲಿರುವ ಮಹಾನವಮಿ ದಿಬ್ಬವು ಸಾಕ್ಷಿಯಾಗಿದೆ. ಮಹಾನವಮಿ ದಿಬ್ಬದ ಮೇಲೆ ಕುಳಿತು ರಾಜರು ದಸರಾ ಉತ್ಸವವನ್ನು ವೀಕ್ಷಿಸುತ್ತಿದ್ದರು. ಈ ಹಬ್ಬದಲ್ಲಿ ನವ ದುಗಿ೯ಯರನ್ನು ಪೂಜೆ ಮಾಡಲಾಗುವುದು. ಈ ಆಚರಣೆ ದೈವೀ ಶಕ್ತಿಯ ದ್ಯೋತಕವೆಂದು ಭಾವಿಸಿ ಭಿನ್ನ ರೂಪಗಳಲ್ಲಿ ದುಗಾ೯ ಮಾತೆಯನ್ನು ಆರಾಧಿಸುತ್ತಾರೆ. ಇನ್ನು ನವರಾತ್ರಿ ಒಂಭತ್ತು ದಿನಗಳಲ್ಲಿ ದುಗಾ೯ದೇವಿಯ ಒಂಭತ್ತು ಅವತಾರಗಳನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಪೂಜಜಿಸಲಾಗುತ್ತದೆ.

ಮೊದಲ ದಿನ ಶೈಲಪುತ್ರಿ ಪೂಜೆಯಿಂದ ಆರಂಭಗೊಂಡು ನಂತರ ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾಧ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿಧ್ಧಿಧಾತ್ರಿ ಅಲಮಕಾರದಲ್ಲಿ ದೇವಿ ಕಂಗೊಳಿಸುತ್ತಾಳೆ. ಹೀಗೆ ಈ ಪ್ರತೀ ಅವತಾರಕ್ಕೂ ಒಂದು ಶಕ್ತಿ ಇದೆ ಎಂದು ಭಾವಿಸುತ್ತಾರೆ. ಇನ್ನು ದುಗಾ೯ದೇವಿಯ ಒಂಭತ್ತು ಅವತಾರಗಳಿಗೆ ಈ ನವರಾತ್ರಿಗಳನ್ನು ಮೀಸಲಿಡಲಾಗುತ್ತದೆ. ಒಂದೊಂದು ದಿನದಂದು ಒಂದೊಂದು ದೇವಿಯ ಸ್ವರೂಪ ಶಕ್ತಿ ಮೆರೆಯುತ್ತದೆ. ಮೊದಲ ದಿನ ದೇವಿಯನ್ನು ಶೈಲಪುತ್ರಿಯ ಅವತಾರದಲ್ಲಿ ಪೂಜಿಸಲಾಗುತ್ತದೆ. ಶೈಲಪುತ್ರಿಯು ಶಿವನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಾಳೆ. ನಂದಿ ಮೇಲೆ ಸವಾರಿ ಮಡುತ್ತಾ ಎಡಗೈಯಲ್ಲಿ ಕಮಲ ಬಲಗೈಯಲ್ಲಿ ತ್ರಿಶೂಲ ಇರುವಂತೆ ದೇವಿಯನ್ನು ಅಲಂಕರಿಸಲಾಗುತ್ತದೆ. ಇನ್ನು ಎರಡನೇಯ ದಿನ ದೇವಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪಜಿಸಲಾಗುತ್ತದೆ. ಮೋಕ್ಷ ಹಾಗು ಶಾಂತಿ ಸೌಹಾಧ೯ತೆಯ ಅವತಾರವಾಗಿ ಈ ದೇವಿಯು ಅಂದು ಕಾಣಿಸಿಕೊಳ್ಳುತ್ತಾಳೆ. ಇನ್ನು ಮೂರನೇಯ ದಿನ ಚಂದ್ರಘಂಟ ರೂಪದಲ್ಲಿ ದೇವಿಯನ್ನು ಅಲಮಕರಿಸಲಾಗುತ್ತೆ. ದೇವಿಯ ಹನೆಯ ಮೇಲೆ ಅಧ೯ ಚಂದ್ರ ಇದ್ದು ಸೌಂದಯ೯ ಹಾಗೂ ಧೈಯ೯ದ ಸಂಕೇತವಾಗಿ ದೇವಿಯು ಕಾಣಿಸಿಕೊಳ್ಳುತ್ತಾಳೆ. ಇನ್ನು ನಲ್ಕನೇಯ ದಿನ ಕೂಷ್ಮಾಂಡ ರೂಪದಲ್ಲಿ ಪೂಜಿಸಲಾಗುತ್ತದೆ. ಭೂಮಿಯ ಮೇಲಿನ ಸಸ್ಯವಗ೯ವನ್ನು ಈ ದೇವಿ ಪ್ರತಿನಿಧಿಸುತ್ತಾಳೆ. ಇನ್ನು ಐದನೇಯ ದಿನ ಸ್ಕಂದಮಾತಾ ರೂಪದಲ್ಲಿದ್ದು, ಸ್ಕಂದ ಎಂದರೆ ಕಾತಿ೯ಕೇಯನ ತಾಯಿಯಾಗಿ ಕಾಣಿಸಿಕೊಳ್ಳುತ್ತಾಳೆ. ಇನ್ನು ಆರನೇಯ ಅವತಾರ ಕಾಧ್ಯಾಯನಿಯಾಗಿದ್ದು, ಏಳನೇಯ ದಿನ ಕಾಲರಾತ್ರಿ ದೇವಿಯದ್ದಾಗಿದೆ. ಕಣ್ಣಿನಲ್ಲಿ ಉಗ್ರತೆ ತುಂಬಿಕೊಂಡಿಉ ಈ ದೇವಿಗೆ ಬಿಳಿ ಬಣ್ನದಲ್ಲಿ ಅಲಂಕಾರ ಮಾಟಲಾಗುತ್ತದೆ. ಉಗ್ರವಾಗಿದ್ದರೂ ತನ್ನ ಭಕ್ತರಿಗೆ ಧೈಯ೯ವನ್ನು ಈಕೆ ನೀಡುತ್ತಾಳೆ. ಅವರ ರಕ್ಷಣೆಗೆ ನಿಲ್ಲುತ್ತಾಳೆ ಎಂಬ ನಂಬಿಕೆ ಭಕ್ತರದಾಗಿದೆ. ಇನ್ನು ಎಂಡನೇಯ ದಿನ ಮಹಾಗೌರಿಯ ದಿನವಾಗಿದ್ದು, ಬುದ್ಧಿ ಹಾಗೂ ಶಾಂತಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ. ಇನ್ನು ಒಂಭತ್ತನೇಯ ದಿನ ಸಿದ್ಧಿಧಾತ್ರಿ ಇದ್ದು, ಈಕೆ ಹಲವು ಶಕ್ತಿಗಳನ್ನು ತನ್ನ ಭಕ್ತರಿಗೆ ನೀಡುತ್ತಾಳೆ ಎಂಬ ನಂಬಿಕೆ ಇದೆ. ಇನ್ನು ಕೊನೆಯ ದಿನ ದೇವಿಯು ಮಹಿಷಾಸುರ ಎನ್ನುವ ದುಷ್ಟನನ್ನು ದುಗಿ೯ಯು ಕೊಲ್ಲುವಳು. ಈ ಒಂಭತ್ತು ದಿನಗಳ ಕಾಲ ದೇವಿಗೆ ವಿಶೇಷ ಪೂಜೆ, ವಿಷೇಶ ಅಲಂಕಾರ ಮತ್ತು ಪ್ರಸಾದವನ್ನು ಸಮಪಿ೯ಸಿ ಕೊನೆಯ ದಿನ ವಿಜಯ ದಶಮಿಯನ್ನು ಆಚರಿಸಿ ಬನ್ನಿ ಮುರಿದು ಹಬ್ಬವನ್ನು ಪೂಣ೯ಗೊಳಿಸುವರು.

ಬನ್ನಿ ವೃಕ್ಷದ ಮಹತ್ವ

ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೇವರೆಂದು ಆರಾಧಿಸಲಾಗುತ್ತದೆ. ನಾವು ಪ್ರಕೃತಿಯಲ್ಲಿರುವಂತಹ ಕೆಲವು ವೃಕ್ಷಗಳಿಗೆ ಸನಾತನ ಹಿಂದೂ ಧಮ೯ದಲ್ಲಿ ಪೂಜ್ಯನೀಯ ಸ್ಥಾನವನ್ನು ನಿಡಿದೇವೆ. ವೃಕ್ಷಗಳಲ್ಲಿಯೇ ಅತೀ ಶ್ರೇಷ್ಠವಾದ ವೃಕ್ಷಗಳೆಂದರೆ ಅರಳಿ ಮರ, ಅವದುಂಬರ ವೃಕ್ಷ, ತೆಂಗಿನ ಮರ ಹಾಗೂ ಬನ್ನಿ ವೃಕ್ಷ. ಇದಕ್ಕೆ ಶಮಿ ವೃಕ್ಷ ಎಂಬ ಹೆಸರೂ ಇದೆ. ಈ ವೃಕ್ಷದ ಎಲೆಗಳನ್ನು ಬಂಗಾರಕ್ಕೆ ಹೋಲಿಸುತ್ತಾರೆ. ಈ ವೃಕ್ಷವು ನವಗ್ರಹಗಳಲ್ಲಿಯೇ ತುಂಬಾ ಶಕ್ತಿಶಾಲಿ ಗ್ರಹವಾದಂತಹ ಶನಿ ದೇವರನ್ನು ಪ್ರತಿನಿಧಿಸುತ್ತದೆ. ಈ ವೃಕ್ಷವನ್ನು ಪೂಜಿಸಿದರೆ ಶನಿ ದೇವರನ್ನು ಪೂಜಿಸಿದಷ್ಟು ಸಂಪೂಣ೯ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಇದನ್ನು ಶನಿ ದೇವರ ದೇವಾಲಯಗಳಲ್ಲಿ ಬೆಳೆಸಿರುತ್ತಾರೆ. ಸಾಡೇಸಾತು ಅಂದರೆ ಶನಿ ದೇವರ ಪ್ರಭಾವ ಇರುವವರು ಶಮಿ ವೃಕ್ಷದ ದಶ೯ನ ಹಾಗು ಮಾಡುವುದರಿಂದ ಶನಿಯ ಪ್ರಭಾವ ಕಡಿಮೆ ಆಗುತ್ತದೆ. ನವರಾತ್ರಿಯ ವಿಜಯ ದಶಮಿಯ ದಿನ ಈ ವೃಕ್ಷವನ್ನು ಪುಜೆ ಮಾಡಿ ಬನ್ನಿ ಬಂಗಾರವಾಗಲಿ ಎಂದು ಹಾರೈಸಿ, ಹಿರಿಯರಿಗೆ ಕೊಟ್ಟು ನಮಸ್ಕರಿಸಿ ಆಶೀವಾ೯ದವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಬನ್ನಿ ವೃಕ್ಷದಲ್ಲಿ ಔಷಧೀಯ ಗುಣಗಳೂ ಸಹ ಇವೆ.

ದಸರಾ ಹಬ್ಬವು ಸಮುದಾಯಕ್ಕೆ ನೀಡುವ ಕೊಡುಗೆ

ಹತ್ತು ದಿನಗಳ ಕಾಲ ನಡೆಯುವ ಈ ಮಹಾ ಹಬ್ಬ ದೇಶದ ಆರ್ಥಿಕತೆಗೂ ದೊಡ್ಡ ಕೊಡುಗೆ ನೀಡುತ್ತದೆ. ಈ ಹಬ್ಬದ ಸಮಯದಲ್ಲಿ ಪೆಂಡಾಲ್‌ಗಳು, ಮೂರ್ತಿಗಳು, ವಿಗ್ರಹಗಳು ಮತ್ತು ಅಲಂಕಾರಿಕರನ್ನು ತಯಾರಿಸುವಲ್ಲಿ ಅನೇಕ ಜನರು ಕೆಲಸ ಮಾಡುತ್ತಾರೆ.

ಸ್ಥಳೀಯ ಸಿಹಿ ಅಂಗಡಿಗಳು, ಸ್ಥಳೀಯ ಮಾರಾಟಗಾರರು, ಪುರೋಹಿತರು, ರಂಗಭೂಮಿ ಜನರು ಈ ಉತ್ಸವದಿಂದ ಪ್ರಯೋಜನ ಪಡೆಯುತ್ತಾರೆ.

ಉತ್ಸವದ ಮೊದಲು ಮತ್ತು ನಂತರ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಬಗ್ಗೆಯೂ ಸರ್ಕಾರ ಕಾಳಜಿ ವಹಿಸುತ್ತದೆ.

ಉಪಸಂಹಾರ

ವಿಜಯನಗರದ ಅರಸರು ಹೇಗೆ ಆಚರಿಸುತ್ತಿದ್ದರೋ ಅದೇ ರೀತಿ ಮುಂದಿನ ಪೀಳಿಗೆಯೂ ಈ ಹಬ್ಬವನ್ನು ಆಚರಿಸಬೇಕು ಎಂಬುದು ರಾಜ ಒಡೆಯರ್ ಅವರ ಆಶಯವಾಗಿತ್ತು. ಸಾಮಾನ್ಯವಾಗಿ ಮೈಸೂರಿನ ಹವಾಮಾನದ ವೈಶಿಷ್ಟ್ಯವು ಇತರ ಭಾರತೀಯ ನಗರಗಳಿಗಿಂತ ಆರಾಮದಾಯಕ ಮತ್ತು ಉತ್ತಮವಾಗಿರುತ್ತದೆ. ಮೈಸೂರಿನಲ್ಲಿ ಕೆಲವು ಮಧ್ಯಮ ಶ್ರೇಣಿಯ ಕೈಗಾರಿಕೆಗಳು ಸಹ ಗಮನಕ್ಕೆ ಬಂದಿವೆ. ಹತ್ತು ದಿನಗಳ ಅವಧಿಯಲ್ಲಿ ಆಚರಿಸಲಾಗುವ ದಸರಾ ಅವಧಿಯಲ್ಲಿ ನಡೆಯುವ ಉತ್ಸವಗಳಿಂದಾಗಿ ನಗರವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೂ ಕರೆಯುತ್ತಾರೆ.

ಹಿಂದೂಗಳಿಗೆ ಬಹಳ ಮುಖ್ಯವಾದ ಮತ್ತು ಮಂಗಳಕರವಾದ ಹಬ್ಬವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ದಸರಾವನ್ನು ವಿಭಿನ್ನವಾಗಿ, ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆಯಾದರೂ ಈ ಹಬ್ಬದಲ್ಲಿ ಅನೇಕ ದುಘ೯ಟನೆಗಳೂ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದು ಒಂದು ದುಃಖದ ಸಂಗತಿಯಾಗಿದೆ.

ಇತರೆ ವಿಷಯಗಳು:

ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಮಾಹಿತಿ

ಸಮಾಜ ಸುಧಾರಕರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *