ಗಾಂಧಿಯುಗದ ಬಗ್ಗೆ ಮಾಹಿತಿ | Information about Gandhi era in Kannada

ಗಾಂಧಿಯುಗದ ಬಗ್ಗೆ ಮಾಹಿತಿ Information about Gandhi era Gandhi Yugada Bagge Mahiti in Kannada

Information about Gandhi era in Kannada
Information about Gandhi era in Kannada

ಈ ಲೇಖನಿಯಲ್ಲಿ ಗಾಂಧಿಯುಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಗಾಂಧಿಯುಗದ ಬಗ್ಗೆ ಮಾಹಿತಿ

ಭಾರತೀಯ ರಾಷ್ಟ್ರೀಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಇವರು ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯನ್ ಮಾದರಿ ಅಥವಾ ಗಾಂಧಿ ವಿಧಾನವನ್ನು ರೂಪಿಸಿದವರು. ೧೯೨೦ – ೪೭ ರ ಅವಧಿಯಲ್ಲಿ ಗಾಂಧಿಯ ವಿಚಾರಗಳು ಅವರ ಹೋರಾಟದ ಸೈದ್ಧಾಂತಿಕ ತಳಹದಿಯನ್ನು ರೂಪಿಸಿದ ಕಾರಣ ಹಾಗೂ ಅವರ ಹೋರಾಟದ ಮಾದರಿ ಭಾರತದ ರಾಷ್ಟ್ರೀಯ ಹೋರಾಟದ ದಿಕ್ಕನ್ನು ಗಣನೀಯವಾಗಿ ರೂಪಿಸಿದ್ದರಿಂದ ಈ ಅವಧಿಯನ್ನು ಗಾಂಧಿಯುಗವೆಂದು ಕರೆಯುತ್ತೇವೆ.

ಆರಂಭಿಕ ಜೀವನ ಮತ್ತು ಬೆಳವಣಿಗೆ

ಬಾಪು ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ ದಾಸ್‌ ಕರಮಚಂದ್‌ ಗಾಂಧಿ ೧೮೬೯ ಅಕ್ಟೋಬರ್‌ ೨ ರಂದು ಈಗಿನ ಗುಜರಾತ್‌ ನ ಕಾಥೆವಾಡ್‌ ಜಿಲ್ಲೆಯ ಪೋರ್‌ ಬಂದರ್‌ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ ಗಾಂಧಿ. ರಾಜಕೋಟ್‌ ಸಂಸ್ಥಾನದ ದಿವಾನರಾಗಿದ್ದರು. ತಾಯಿ ಪುತಲಿಬಾಯಿ ಇವರು ಗಾಂಧಿಜಿಯವರ ಮೇಲೆ ದಟ್ಟವಾದ ನೈತಿಕ ಪ್ರಭಾವ ಬೀರಿದ್ದರು. ಆರಂಭಿಕ ಶಿಕ್ಷಣವನ್ನು ಪೋರ್‌ ಬಂದರಿನಲ್ಲಿಯೇ ಮುಗಿಸಿದ ಗಾಂಧಿಯವರು ೧೮೮೮ ರಲ್ಲಿ ಇಂಗ್ಲೆಂಡ್‌ ನಲ್ಲಿ ಕಾನೂನು ಅಧ್ಯಯನ ಮಾಡಲು ಹೋಗಿ ಬಾರ್‌ ಅಟ್‌ ಲಾ ಮುಗಿಸಿ ಮತ್ತೆ ಭಾರತಕ್ಕೆ ವಾಪಸ್ಸಾದರು. ೧೮೯೩ ರಲ್ಲಿ ದಾದಾ ಅಬ್ದುಲ್‌ ಮತ್ತು ಕಂಪನಿಯ ವಕಾಲತ್ತು ವಹಿಸಲು ದಕ್ಷಿಣ ಆಫ್ರಿಕಾದ ನಟಾಲ್‌ ಗೆ ಹೋದರು. ಇಲ್ಲಿ ಗಾಂಧಿ ಬರಿ ಮೂರು ತಿಂಗಳು ಇರಬೇಕಾಗಿದ್ದವರು ಸುಮಾರು ಮುಂದಿನ ೨೦ ವರ್ಷಗಳನ್ನು ಕಳೆದರು. ಮುಖ್ಯವಾಗಿ ಅಲ್ಲಿನ ಕರಿಯರ ಮತ್ತು ಭಾರತೀಯರ ಬಗೆಗೆ ಅಲ್ಲಿನ ಬ್ರಿಟಿಷ್‌ ಸರ್ಕಾರ ತೋರಿದ್ದ ಅಸಹನೀಯ ವರ್ಣಭೇಧ ನೀತಿ ಮತ್ತು ಜನಾಂಗೀಯ ತಾರತಮ್ಯದ ನೀತಿಯನ್ನು ವಿರೋದಿಸಿದರು. ಈ ಹೋರಾಟದ ಮೂಲಕ ಗಾಂಧಿಜಿಯವರು ಸತ್ಯಾಗ್ರಹ ಎನ್ನುವ ಹೊಸ ಸಾಮಾಜಿಕ ಆವಿಷ್ಕಾರವನ್ನು ಮಾಡಿ ಅದರ ನೀತಿ ನಿರೂಪಣೆಯನ್ನು ಸೃಷ್ಟಿಸಿದರು. ಅನೇಕ ಆಫ್ರಿಕನ್ನರಿಗೆ ಇರುವ ಹೆಮ್ಮೆಯೆಂದರೆ ನೀವು ಏನು ಆಗಿರದ ಗಾಂಧಿಯನ್ನು ಕಳುಹಿಸಿದಿರಿ, ನಾವು ನಿಮಗೆ ಈ ಗಾಂಧಿಯನ್ನು ಕೊಟ್ಟೆವು ಎಂಬುದು.

ಭಾರತದಲ್ಲಿ ಗಾಂಧಿ ಆರಂಭದ ಹೋರಾಟಗಳು

ಭಾರತಕ್ಕೆ ಬಂದ ಗಾಂಧಿ ತಮ್ಮ ರಾಜಕೀಯ ಗುರು ಗೋಖಲೆಯವರ ಮಾರ್ಗದರ್ಶನದ ಮೇರೆಗೆ ಇಲ್ಲಿಯ ಜನರ ಬದುಕು, ಸಮಾಜ ಮತ್ತು ಆ ಹೊತ್ತಿನ ಸಾಮಾಜಿಕ ವಾಸ್ತವಗಳನ್ನು ತಿಳಿಯುವ ಸಲುವಾಗಿ ರೈಲಿನ ಮೂರನೇ ದರ್ಜೆಯ ಬೋಗಿಯಲ್ಲಿಯೇ ಭಾರತ ದರ್ಶನವನ್ನು ಮಾಡಿದರು. ೧೯೧೬ ರಲ್ಲಿ ಅವರು ಅಹಮ್ಮದಾಬಾದ್‌ನಲ್ಲಿ ಸಬರಮತಿ ಆಶ್ರಮವನ್ನು ಸ್ಥಾಪಿಸುವ ಮೂಲಕ ತಮ್ಮ ಹೋರಾಟಕ್ಕೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟರು. ರೈತರ, ದಲಿತರ, ಬುಡಕಟ್ಟು ಜನರ, ಕಾರ್ಮಿಕರ, ಬಡಜನರ ಸಂಕಷ್ಟ ಮತ್ತು ಸಮಸ್ಯೆಗಳನ್ನು ಆಲಿಸಿದರು. ೧೯೧೭ ರಲ್ಲಿ ಗಾಂಧಿ ಬಿಹಾರದ ಚಂಪಾರಣ್ಯದಲ್ಲಿ, ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಚಂಪಾರಣ್ಯ ಚಳವಳಿ ಆರಂಭಿಸಿ ಯಶಸ್ಸು ಪಡೆದರು. ಇದೇ ವರ್ಷ ಗುಜರಾತ್‌ ನ ಖೇಡ ಎಂಬಲ್ಲಿ ನಡೆದ ರೈತರ ಮೇಲಿನ ತೆರಿಗೆ ಸಂಬಂಧಿತ ಹೋರಾಟವೂ ಕೂಡಾ ಯಶಸ್ವಿಯಾಯಿತು. ಈ ಎಲ್ಲಾ ಹೋರಾಟಗಳಲ್ಲೂ ಗಾಂಧಿ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಮಾರ್ಗವನ್ನು ಪರಿಚಯಿಸಿ ಪ್ರಯೋಗಿಸಿದರು. ಈ ಜೊತೆಗೆ ಭಾರತೀಯ ಜನಸಾಮಾನ್ಯರ ಜೊತೆಗೆ ಸಂವಾದವನ್ನು ಪ್ರಾರಂಭಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ವರೂಪವನ್ನು ಜನಮುಖಿಯಾಗಿ ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಗಾಂಧಿ ಹೋರಾಟದ ಅಂತಃಸತ್ವದ ಸಾಧನಗಳು

ಸತ್ಯಾಗ್ರಹ :

ಗಾಂಧಿಜಿಯವರ ಹೋರಾಟದ ಬಹುಮುಖ್ಯವಾದ ವಿಧಾನವೇ ಸತ್ಯಾಗ್ರಹ. ಸತ್ಯಾಗ್ರಹ ಎನ್ನುವ ಪದದ ಅರ್ಥ, ಸತ್ಯವನ್ನು ಆಗ್ರಹಿಸುವುದು ಅಥವಾ ಒತ್ತಾಯಿಸುವುದೇ ಆಗಿದೆ. ಆಫ್ರಿಕಾದಲ್ಲಿ ಗಾಂಧಿ ಕಂಡುಕೊಂಡು ಬಳಸಿದ ಈ ಅಸ್ತ್ರ ಅವರಿಗೆ ನೈತಿಕ ಶಕ್ತಿಯ ರೂಪವಾಗಿದೆ. ಸತ್ಯಾಗ್ರಹವು ಅಹಿಂಸೆಯನ್ನು ಆಧರಿಸಿದ್ದು, ತಪ್ಪು, ಹಿಂಸೆ ಮತ್ತು ಅಸತ್ಯವನ್ನು ಖಡಾಖಂಡಿತವಾಗಿ ನಿರಾಕರಿಸುವ ಕ್ರಮವೂ ಆಗಿದೆ. ಈ ಅಸ್ತ್ರವನ್ನು ಭಾರತೀಯ ರಾಷ್ಟ್ರೀಯ ಹೋರಾಟದಲ್ಲಿ ನಿರಂತರವಾಗಿ ಬಳಸಿದರು ಇದು ಒಂದು ದೊಡ್ಡ ಸಾಮಾಜಿಕ ಅನ್ವೇಷಣೆಯಾಗಿದೆ.

ಅಹಿಂಸೆ :

ಗಾಂಧಿಜೀಯ ಹೋರಾಟದ ಮೂಲಭೂತ ಆಶಯ ಅಹಿಂಸೆಯಾಗಿದೆ. ಸಶಸ್ತ್ರ ಬಲಪ್ರಯೋಗದ ವಿರುದ್ದ ಅಹಿಂಸೆಯಾಗಿದೆ. ಸಶಸ್ತ್ರ ಬಲಪ್ರಯೋಗದ ವಿರುದ್ದ ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಮುಖಾಮುಖಿಯಾಗಬೇಕೆಂಬುದು ಅವರ ನಿಲುವಾಗಿತ್ತು. ಬ್ರಿಟಿಷ ದರ್ಪದ ಆಯುಧಗಳಾದ ಮಿಲಿಟರಿ, ಪೊಲೀಸ್‌, ಕಾನೂನು ಮುಂತಾದವುಗಳ ವಿರುದ್ದ ಸತ್ಯ, ಅಹಿಂಸೆ, ಉಪವಾಸವೆಂಬ ಮಾತೃತ್ವದ ಮಾಂತ್ರಿಕತೆಯ ಆಯುಧಗಳನ್ನು ಬಳಸಿ ಅವರನ್ನು ಮಣಿಸಿದ್ದು ಗಾಂಧಿಜೀಯವರ ಚಾರಿತ್ರಿಕ ಸಂದೇಶವಾಗಿದೆ.

ಹಿಂದೂ – ಮುಸ್ಲಿಂ ಏಕತೆ :

ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ಹಿಂದೂ – ಮುಸ್ಲಿಂ ಏಕತೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದ ವ್ಯಕ್ತಿಯೆಂದರೆ ಗಾಂಧಿ. ಈ ಸಮುದಾಯಗಳ ನಡುವೆ ಏಕತೆಯಿಲ್ಲದಿದ್ದರೆ ಭಾರತ ಸ್ವಾತಂತ್ರ್ಯ ಸಾಧಿಸುವುದು ಮತ್ತು ಭವಿಷ್ಯದಲ್ಲಿ ರಾಷ್ಟ್ರವಾಗಿ ಬಾಳುವುದು ಕಷ್ಟವೆಂದೇ ಅವರ ನಂಬಿಕೆಯಾಗಿತ್ತು. ಹಿಂದೂ ಮತ್ತು ಮುಸ್ಲಿಂರು ಭಾರತಮಾತೆಯ ಎರಡು ಕಣ್ಣುಗಳೆಂದೂ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ೧೯೧೯ ರ ಸಂಧರ್ಭದಲ್ಲಿ ಖಿಲಾಪತ್‌ ಚಳುವಳಿಗೆ ಕಾಂಗ್ರೇಸ್‌ ಸಂಘಟನೆಯಿಂದ ಬೆಂಬಲವನ್ನು ವ್ಯಕ್ತಪಡಿಸಿದರು.

FAQ

ರಾಷ್ಟ್ರಪಿತ ಎಂದು ಯಾರನ್ನು ಕರೆಯುತ್ತಾರೆ ?

ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧಿಜೀಯವರು ಯಾವಾಗ ಜನಿಸಿದರು ?

ಅಕ್ಟೋಬರ್‌ ೨

ಇತರೆ ವಿಷಯಗಳು :

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

ಸೂರ್ಯನ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *