ವಿದ್ಯುತ್ಕಾಂತೀಯ ವಿಕಿರಣದ ಬಗ್ಗೆ ಮಾಹಿತಿ Information About Electromagnetic Radiation Viddyutkantiya Vikiranagala Bagge Mahiti in Kannada
ವಿದ್ಯುತ್ಕಾಂತೀಯ ವಿಕಿರಣದ ಬಗ್ಗೆ ಮಾಹಿತಿ
ಚಲನೆಯಲ್ಲಿ ಶಕ್ತಿಯನ್ನು ವಿಕಿರಣ ಎನ್ನುವರು. ಇವು ಬೆಳಕಿನ ವೇಗಕ್ಕೆ ಸಮನಾದ ವೇಗವನ್ನು ಹೊಂದಿದೆ ಅಲ್ಫಾ ಮತ್ತು ಬೀಟಾ ವಿಕಿರಣಗಳು ಇವು ಬೆಳಕಿನ ವೇಗಕ್ಕೆ ಸಮಾನ ವೇಗವನ್ನು ಹೊಂದಿಲ್ಲ.
ವಿದ್ಯುತ್ಕಾಂತಿಯ ವಿಕಿರಣ :
ಕಾಂತಕ್ಷೇತ್ರ ಮತ್ತು ವಿದ್ಯುತ್ ಕ್ಷೇತ್ರ ಎರಡನ್ನು ಒಳಗೊಂಡಿರುವ ವಿಕಿರಣಗಳಿಗೆ ವಿದ್ಯುತ್ ಕಾಂತಿಯ ವಿಕಿರಣಗಳು ಎನ್ನುವರು. ಉದಾ : ಅವಗೆಂಪು ಕಿರಣಗಳು, ನೇರಳಾತೀತ ಕಿರಣಗಳು, ಗಾಮಾ ಕಿರಣಗಳು, ಸೂಕ್ಷ್ಮ ತರಂಗಗಳು, ರೇಡಿಯೋ ತರಂಗಗಳು, X ಕಿರಣ ಮುಂತಾದವುಗಳು.
ವಿದ್ಯುತ್ ಕಾಂತೀಯ ರೋಹಿತ :
ವಿದ್ಯುತ್ ಕಾಂತೀಯ ವಿಕಿರಣ ಎಂದರೆ ಬೆಳಕು ಮಾತ್ರವಲ್ಲ ಅವಕೆಂಪು ಕಿರಣಗಳು, ನೇರಳಾತೀತ ಕಿರಣಗಳು, X ಕಿರಣಗಳು, ಗಾಮಾ ಕಿರಣಗಳು, ಸೂಕ್ಷ್ಮ ತರಂಗಗಳು, ರೇಡಿಯೋ ತರಂಗಗಳು ವಿದ್ಯುತ್ ಕಾಂತೀಯ ವಿಕಿರಣಗಳಾಗಿವೆ. ಈ ವಿದ್ಯುತ್ ಕಾಂತೀಯ ವಿಕಿರಣಗಳ ವಿಶಾಲಸಾಗರದಿಂದ ಸುತ್ತುವರೆದಿದೆ. ಈ ಸಮಗ್ರ ಗುಂಪಿನ ವಿದ್ಯುತ್ ಕಾಂತೀಯ ರೋಹಿತ ಎಂದುಕರೆಯುವರು. ವಿದ್ಯುತ್ ಕಾಂತೀಯ ವಿಕಿರಣಗಳು ಮತ್ತು ಅವುಗಳ ತರಂಗ ದೂರದ ವ್ಯಾಪ್ತಿ.
ಅವಗೆಂಪು ಕಿರಣಗಳು :
ಅವಗೆಂಪು ಕಿರಣಗಳನ್ನು ೧೮೦೦ ರಲ್ಲಿ ವಿಲಿಯಂ ಹರ್ಷರ್ ವಿಜ್ಞಾನಿಯು ಉಷ್ಣ ಪರಿಣಾಮದಿಂದ ಆವಿಷ್ಕರಿಸಿದನು.
ಅವಗೆಂಪು ಕಿರಣಗಳ ಉಪಯೋಗಗಳು :
ಒಂದು ಸಂಯುಕ್ತ ವಸ್ತುವಿನ ಅಣು ರಚನೆಯನ್ನು ನಿರ್ಧರಿಸಲು ಉಪಯೋಗಿಸುವರು.
ಶತ್ರು ಶಿಬಿರಗಳನ್ನು ಪತ್ತೆ ಹಚ್ಚಲು ಉಪಯೋಗಿಸುವರು.
ದೂರ ವ್ಯಾಪಿ ಬಿಂಬ ಗ್ರಹಣದಲ್ಲಿ ಉಪಯೋಗಿಸುವರು.
ಪುರಾತನ ವರ್ಣ ಚಿತ್ರಗಳನ್ನು ಪರೀಕ್ಷಿಸಲು ಮತ್ತು ಅವು ನಕಲಾಗಿದ್ದರೆ ಅವುಗಳನ್ನು ಪತ್ತೆ ಹಚ್ಚಲು ಉಪಯೋಗಿಸುವರು.
ದೂರದರ್ಶನದ ದೂರ ನಿಯಂತ್ರಣ ಉಪಕರಣದಲ್ಲಿ ಉಪಯೋಗಿಸುವರು.
ಸೂರ್ಯನಿಂದ ಹೊರ ಹೊಮ್ಮುವ ಅವಗೆಂಪು ಕಿರಣಗಳನ್ನು ಸೌರ ಒಲೆಗಳಲ್ಲಿ ಉಪಯೋಗಿಸುತ್ತಾರೆ.
ಸೂರ್ಯನಿಂದ ಹೊರ ಹೊಮ್ಮುವ ಒಟ್ಟು ವಿಕಿರಣಗಳಲ್ಲಿ ಅವಗೆಂಪು ವಿಕಿರಣಗಳ ಪಾಲು ೧/೪ ರಷ್ಟ್ರಿದೆ.
ಉಷ್ಣದ ಅನುಭವವನ್ನು ನೀಡುವ ವಿಕಿರಣದ ವಿಧ ಅವಗೆಂಪು ವಿಕಿರಣ.
ನೇರಳಾತೀತ ವಿಕಿರಣಗಳು :
ನೇರಳಾತೀತ ವಿಕಿರಣಗಳನ್ನು ೧೮೦೧ ರಲ್ಲಿ ಜೆ. ಡಬ್ಲು ರಿಟ್ಟರ್ ಎಂಬ ವಿಜ್ಞಾನಿಯು ಪೋಟೋ ಗ್ರಾಫಿಕ್ ಕ್ರಿಯೆಯಿಂದಾಗಿ ಆವಿಷ್ಕರಿದನು.
ನೇರಳಾತೀತ ಉಪಯೋಗಗಳು :
ಕೆಲವು ವಸ್ತುಗಳಲ್ಲಿ ಪ್ರತಿದೀಪ್ತತೆಯನ್ನು ಚೋಧಿಸುತ್ತವೆ. ಹಾಗಾಗಿ ಪ್ರತಿ ದೀಪಗಳನ್ನು ಆವಿಷ್ಕರಿಸಲು ಉಪಯೋಗಿಸುವರು.
ಕೃತಕ ರತ್ನಗಳು ಮತ್ತು ನೈಸರ್ಗಿಕ ರತ್ನಗಳನ್ನು ಪತ್ತೆ ಹಚ್ಚಲು ಉಪಯೋಗಿಸುವರು.
ಸಮರ್ಥ ವಂಧ್ಯಾಕಾರಕವಾಗಿ ಉಪಯೋಗಿಸುವರು.
ಇವುಗಳನ್ನು ರಿಕೆಟ್ಸ್ ಮತ್ತು ಚರ್ಮ ರೋಗ ಚಿಕಿತ್ಸೆಯಲ್ಲಿ ಉಪಯೋಗಿಸುವರು.
ದ್ಯುತಿ ವಿದ್ಯುತ್, ಎಚ್ಚರಿಕೆ ಗಂಟೆಯಲ್ಲಿ ಉಪಯೋಗಿಸುವರು.
ಕ್ಷ – ಕಿರಣಗಳು ( X – RAYS ) :
X ಕಿರಣಗಳನ್ನು ೧೮೯೫ ರಲ್ಲಿ ಜರ್ಮನ್ ದೇಶದ ವಿಜ್ಞಾನಿಯಾದ ವಿಲಿಯಂ ರಾಂಟಜನ್ ರವರು ಆವಿಷ್ಕರಿಸಿದರು. ಇದಕ್ಕಾಗಿ ೧೯೦೧ ರಲ್ಲಿ ಇವರಿಗೆ ನೊಬೆಲ್ ಪಾರಿತೋಷಕ ದೊರೆಯಿತು.
ಕ್ಷ – ಕಿರಣಗಳು ( X – RAYS ) ಉಪಯೋಗಗಳು :
X ಕಿರಣಗಳ ಸಹಾಯದಿಂದ ಮೂಳೆ ಮುರಿತವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಮಾನವನ ಶರೀರದಲ್ಲಿ ಹೊಕ್ಕಿರಬಹುದುದಾದ ಬಂದೂಕಿನ ಗುಂಡು, ನಾಣ್ಯ, ಪಿನ್ನು ಮತ್ತಿತ್ತರ ವಸ್ತುಗಳನ್ನು ಪತ್ತೆ ಹಚ್ಚಲು ಉಪಯೋಗಿಸುವರು.
ಕ್ಯಾನ್ಸರ್ ಮತ್ತು ಚರ್ಮರೋಗ ಚಿಕಿತ್ಸೆಯಲ್ಲಿ ಉಪಯೋಗಿಸುವರು.
ರೇಡಿಯೋ ಛಾಯಾ ಬಿಂಬದಲ್ಲಿ ಉಪಯೋಗಿಸುವರು.
ಗಾಮಾ ಕಿರಣಗಳು :
ಗಾಮಾ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಉಪಯೋಗಿಸುವರು.
ರಾಸಾಯನಿಕಗಳ ತಯಾರಿಕೆಯಲ್ಲಿ ಕ್ರಿಯಾವರ್ಧಕವಾಗಿ ವರ್ತಿಸುತ್ತವೆ.
ದ್ಯುತಿ ವಿದ್ಯುತ್ ಪರಿಣಾಮವನ್ನುಂಟು ಮಾಡಲು ಉಪಯೋಗಿಸುವರು.
ರೇಡಿಯೋ ಛಾಯಾ ಬಿಂಬನದಲ್ಲಿ ಉಪಯೋಗಿಸುವರು.
ಸೂಕ್ಷ್ಮ ತರಂಗಗಳು :
ಇವುಗಳನ್ನು ರಾಡಾರ ವ್ಯವಸ್ಥೆ ಉಪಗ್ರಹ ಸಂಪರ್ಕ ವ್ಯವಸ್ಥೆ ಸೂಕ್ಷ್ಮ ತರಂಗ ಒಲೆಗಳಲ್ಲಿ ಉಪಯೋಗಿಸುವರು.
ರೇಡಿಯೋ ತರಂಗಗಳು :
ಇವುಗಳನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಉಪಯೋಗಿಸುವುದರಿಂದ ಇವುಗಳಿಗೆ ರೇಡಿಯೋ ತರಂಗಗಳು ಎನ್ನುವರು.
ಇವುಗಳನ್ನು ರೇಡಿಯೋ ಮತ್ತು T V ಪ್ರಸಾರದಲ್ಲಿ ಉಪಯೋಗಿಸುವರು.
ದ್ಯುತಿ ವಿದ್ಯುತ್ ಪರಿಣಾಮ :
ಬೆಳಕಿನ ವರ್ತನೆಯಿಂದ ವಸ್ತುಗಳು ಎಲೆಕ್ಟ್ರಾನಿಕ್‌ಗಳನ್ನು ಉತ್ಸರ್ಜಿಸುವದನ್ನು ದ್ಯುತಿ ವಿದ್ಯುತ್ ಪರಿಣಾಮ ಎನ್ನುವರು. ಹೀಗೆ ಉತ್ಸರ್ಜಿಸಲ್ಪಟ್ಟ ಎಲೆಕ್ಟ್ರಾನ್ ಗಳಿಗೆ ಪೋಟೋ ಎಲೆಕ್ಟ್ರಾನ್ಗಳು ಎನ್ನುವರು.
FAQ
ಗಾಮಾ ಕಿರಣಗಳನ್ನು ಯಾವ ರೋಗ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ ?
ಕ್ಯಾನ್ಸರ್
ಮೂಳೆ ಮುರಿತವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ಕಿರಣ ಯಾವುದು ?
ಕ್ಷ ಕಿರಣ
ಇತರೆ ವಿಷಯಗಳು :
ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ಬಗ್ಗೆ ಮಾಹಿತಿ