ಪಂಚಾಯತ್ ರಾಜ್ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಮಾಹಿತಿ Information About Panchayat Raj Development Commissions Panchayt Vikaskke Sambandisida Ayogagala Bagge Mahiti in Kannada
ಪಂಚಾಯತ್ ರಾಜ್ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪಂಚಾಯತ್ ರಾಜ್ ವಿಕಾಸಕ್ಕೆ ಸಂಬಂಧಿಸಿದ ಆಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಬಲವಂತರಾಯ ಮೆಹ್ತಾ ಸಮಿತಿ :
- ನೇಮಕ – ೧೯೫೭ ಜನವರಿ
- ವರದಿ ಸಲ್ಲಿಕೆ – ೨೪ ೨೪/೧೧/೧೯೫೭
- ಶಿಫಾರಸ್ಸುಗಳು – ಈ ಸಮಿತಿಯ ವರದಿಯನ್ನು ೧೯೫೮ ರಲ್ಲಿ NDC ಅಂಗೀಕರಿಸಿತು.
- ಈ ಸಮಿತಿ ಪಂಚಾಯತ್ ರಾಜ್ ಹೆಸರಿನ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣದ ವ್ಯವಸ್ಥೆಯನ್ನು ಜಾರಿಗೊಳಿಸಿತು.
- ಈ ಸಮಿತಿ ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿ, ಜಿಲ್ಲಾ ಪರಿಷತ್ತು ಎಂಬ ಮೂರು ಹಂತದ ಪಂಚಾಯತ್ ವ್ಯವಸ್ಥೆ ಜಾರಿಗೊಳಿಸಲು ಶಿಫಾರಸ್ಸು ಮಾಡಿತು.
- ಜಿಲ್ಲಾಧಿಕಾರಿಯು ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿಬೇಕು.
- ಪಂಚಾಯತ್ ಸಮಿತಿ ಮುಖ್ಯ ಕಾರ್ಯನಿರ್ವಹಣ ಸಂಸ್ಥೆಯಾಗಿರಬೇಕು. ಹಾಗೂ ಜಿಲ್ಲಾ ಪರಿಷತ್ತು ಸಲಹೆ ನೀಡುವ ಮತ್ತು ಮೇಲ್ವಿಚಾರಣ ಸಂಸ್ಥೆಯಾಗಿಬೇಕು.
- ಇದರ ಪರಿಣಾಮ ಈ ಸಮಿತಿಯು ಶಿಫಾರಸ್ಸುಗಳನ್ವಯ ದೇಶದಲ್ಲಿ ಪ್ರಪ್ರಥಮ ಪಂಚಾಯತ್ ರಾಜ್ ಸಂಸ್ಥೆಯನ್ನು ರಾಜಸ್ತಾನ ರಾಜ್ಯದ ನಾಗೂರು ಜಿಲ್ಲೆಯಲ್ಲಿ ೦೨/ ೧೦/ ೧೯೫೯ ರಂದು ನೆಹರು ಉದ್ಗಾಟಿಸಿದರು. ೨ ನೇ ರಾಜ್ಯ ಆಂದ್ರಪ್ರದೇಶಗಳಲ್ಲಿ ಜಾರಿಗೊಳಿಸಿದರು.
ಕೆ ಸಂತಾನಂ ( ಹಣಕಾಸು ವಿಕೇಂದ್ರಿಕರಣ ) :
- ನೇಮಕ – ೧೯೬೩
- ಇದನ್ನು ಪಂಚಾಯಿತಿಗಳಿಗೆ ಹಣಕಾಸನ್ನು ಹಂಚಿಕೆ ಮಾಡಲು ನೇಮಕ ಮಾಡಲಾಯಿತು.
- ಪಂಚಾಯಿತಿಗಳು ಮನೆ, ತೆರಿಗೆ ಬೂಕಂದಾಯ ವಸೂಲಿ ಮಾಡಬಹುದು.
- ರಾಜ್ಯಮಟ್ಟದ ಅನುಧಾನವನ್ನು ಪಂಚಾಯಿತಿಗಳಿಗೆ ವರ್ಗಾಯಿಸುವುದು.
- ಪಂಚಾಯತ್ ರಾಜ್ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಬೇಕು.
ಅಶೋಕ ಮೆಹ್ತಾ ಸಮಿತಿ :
- ನೇಮಕ – ೧೯೭೭
- ೨ ಹಂತದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೊಳಿಸುವುದು.
೧. ಜಿಲ್ಲಾ ಪರಿಷತ್ತು. ೨. ಮಂಡಲ ಪಂಚಾಯತಿ.
- ಒಬ್ಬ ಪಂಚಾಯಿತ್ ರಾಜ್ ಸಚಿವರನ್ನು ನೇಮಿಸುವುದು.
- ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಭಾಗವಹಿಸಬಹುದು.
- SC / ST ಮತ್ತು ಮಹಿಳೆಯರಿಗೆ ಮೀಸಲಾತಿ ನೀಡುವುದು.
- ಅವಧಿ ಮುಗಿದ ೬ ತಿಂಗಳೊಳಗೆ ಚುನಾವಣೆ ನಡೆಯಬೇಕು.
- ಇದರ ಪರಿಣಾಮವಾಗಿ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಹೊಸ ಪಂಚಾಯತ್ ಕಾಯ್ದೆಯನ್ನು ಜಾರಿಗೆ ತಂದವು.
ದಂತವಾಲ ಸಮಿತಿ :
- ನೇಮಕ – ೧೯೭೮
- ಬ್ಲಾಕ್ ಮಟ್ಟದ ಯೋಜನೆಗೆ ಶಿಫಾರಸ್ಸು ಮಾಡಲಾಗಿದೆ.
ಹನುಮಂತರಾವ್ ಸಮಿತಿ :
- ನೇಮಕ – ೧೯೮೪
- ಜಿಲ್ಲಾ ಮಟ್ಟದ ಯೋಜನೆಗೆ ಶಿಫಾರಸ್ಸು ಮಾಡಿದರು.
GVK ರಾವ್ ಸಮಿತಿ :
- ನೇಮಕ – ೧೯೮೫
- ಈ ಸಮಿತಿಯನ್ನು ಆಡಳಿತ ಸಂಯೋಜನೆ ಮತ್ತು ಬಡತನ ನಿರ್ಮೂಲನಾ ಸಮಿತಿ ಎಂದು ಕರೆಯುವರು.
- ಪಂಚಾಯಿತಿಗಳಲ್ಲಿ ಅಧಿಕಾರ ಶಾಹಿಗಳು ಪಾಲ್ಗೋಳ್ಳುವಂತಿಲ್ಲ.
- ಜಿಲ್ಲಾ ಅಭಿವೃದ್ದಿ ಆಯುಕ್ತರ DDC ನೇಮಕ
L M ಸಿಂಗ್ವಿ ಸಮಿತಿ :
- ನೇಮಕ – ೧೯೮೬
- ಪ್ರಜಾಪ್ರಭುತ್ವ ಮತ್ತು ಅಭಿವೃದ್ದಿಗಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತ ಸಮಿತಿ ಎನ್ನುವರು.
- ಪಂಚಾಯತ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವುದು.
- ದೇಶದಾದ್ಯಂತ ೩ ಹಂತಗಳ ಏಕರೂಪದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೊಳಿಸುವುದು.
- ಹಣಕಾಸು ವಿಕೇಂದ್ರಕರಿಸಲು ಹಣಕಾಸು ಆಯೋಗವನ್ನು ರಚಿಸಬೇಕು.
- ಗ್ರಾಮಗಳಲ್ಲಿ ನ್ಯಾಯಪಂಚಾಯಿತಿಗಳನ್ನು ಸ್ಥಾಪಿಸುವುದು.
- ಗ್ರಾಮಸಭೆಗಳನ್ನು ರಚಿಸಿ ಹೆಚ್ಚಿನ ಅಧಿಕಾರ ನೀಡುವುದು.
- ಇದರ ಪರಿಣಾಮವಾಗಿ ೬೪ ನೇ, ೬೫ ನೇ, ೭೩ ನೇ ತಿದ್ದುಪಡಿಗಳನ್ನು ಮಾಡಲಾಗಿದೆ.
P. K ತುಂಗನ್ ಸಮಿತಿ : ( ೧೯೮೮ )
- ಪಂಚಾಯತ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕು.
V. N ಗಾಡ್ಗಿಲ್ ಸಮಿತಿ ( ೧೯೮೯ )
- ೩ ಹಂತದ ಪಂಚಾಯತಿಗಳ ರಚನೆಯಾಗುವುದು.
- ಎಲ್ಲಾ ಪಂಚಾಯತಿಗಳ ಅವಧಿ ೫ ವರ್ಷ ಇರಬೇಕು.
- SC/ ST ಮಹಿಳೆಯರಿಗೆ ಮೀಸಲಾತಿ ನೀಡುವುದು.
FAQ
V. N ಗಾಡ್ಗಿಲ್ ಸಮಿತಿಯು ಯಾವಾಗ ಜಾರಿಗೆ ಬಂದಿತು ?
೧೯೮೯
L. M ಸಿಂಗ್ವಿ ಸಮಿತಿಯು ಯಾವಾಗ ಜಾರಿಗೆ ಬಂದಿತು ?
೧೯೮೬
ಇತರೆ ವಿಷಯಗಳು :
ಮಾನವನ ವಿಕಾಸದ ಹಂತಗಳ ಬಗ್ಗೆ ಮಾಹಿತಿ