ಭಾರತದ ಕೆಲವು ಮುಖ್ಯ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ | Information About Some of the Major River Valley Projects in India in Kannada

ಭಾರತದ ಕೆಲವು ಮುಖ್ಯ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ Information About Some of the Major River Valley Projects in India Bharatada kelvu Mukya Nadi Kanive Yojanegala Bagge Mahiti in Kannada

ಭಾರತದ ಕೆಲವು ಮುಖ್ಯ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ

Information About Some of the Major River Valley Projects in India in Kannada
Information About Some of the Major River Valley Projects in India in Kannada

ಈ ಲೇಖನಿಯಲ್ಲಿ ಭಾರತದ ಕೆಲವು ಮುಖ್ಯ ನದಿ ಕಣಿವೆ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ದಾಮೋದರ ನದಿ ಕಣಿವೆ ಯೋಜನೆ :

ದಾಮೋದರ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿಧ್ದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದು ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಜೊತೆಗೂಡಿ ಕೈಗೊಂಡ ಯೋಜನೆಯಾಗಿದೆ. ಈ ನದಿಯ ಪಶ್ಚಿಮ ಬಂಗಾಳದಲ್ಲಿ ಪ್ರವಾಹಗಳಿಂದ ಅಪಾರ ಹಾನಿಯನ್ನುಂಟು ಮಾಡುತ್ತಿದ್ದು, ಇದನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಿದ್ದರು. ಈ ನದಿಯಿಂದ ಆಗುವ ಹಾನಿಯನ್ನು ತಡೆಗಟ್ಟಲು ಈ ಯೋಜನೆಯನ್ನು ಕೈಗೊಳ್ಳಲಾಯಿತು.

ಈ ಯೋಜನೆಯು ಸುಮಾರು ೨೪೯೫ ಕೀ. ಮೀ ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು ಸುಮಾರು ೪.೫ ಲಕ್ಷ ಹೆಕ್ಟರ್‌ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ತಿಲೈಯಾ, ಮೈಥಾನ್‌ ಕೋನಾರ್‌ ಮತ್ತು ಪಂಚೆಟ್‌ ಹಿಲ್‌ಗಳಲ್ಲಿ ದಾಮೋದರ ಹಾಗೂ ಅದರ ಉಪ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಬೋಕಾರೋ, ಚಂದ್ರಪುರ ಹಾಗೂ ದುರ್ಗಾಪುರಗಳಲ್ಲಿ ಶಾಖೋತ್ಪನ್ನ ವಿದ್ಯುದಾರಗಾರಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ಜಾರ್ಖಾಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಉಪಯೋಗವನ್ನು ಪಡೆದಿವೆ.

ಬಾಕ್ರಾ ನಂಗಲ್‌ ಯೋಜನೆ :

ಇದು ಭಾರತದಲ್ಲಿಯೇ ಅತ್ಯಂತ ಎತ್ತರವಾದ ಮತ್ತು ಪ್ರಮುಖವಾದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದು ಪಂಜಾಬ್‌, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ, ಹಿಮಾಲಯ ಪ್ರದೇಶದ ಭಾಕ್ರ ಮತ್ತು ನಂಗಲ್‌ ಎಂಬಲ್ಲಿ ಸಟ್ಲೆಜ್‌ ನದಿಗೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಭಾಕ್ರ ಅಣೆಕಟ್ಟು ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ( ೨೨೬ ಮೀ ) ಅಣೆಕಟ್ಟೆಯಾಗಿದೆ. ಇದು ೩೪೦೨ ಕೀ. ಮೀ. ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು, ೧೪.೬ ಲಕ್ಷ ಹೆಕ್ಟರ್‌ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯಿಂದ ದೆಹಲಿ, ಹಿಮಾಚಲ ಪ್ರದೇಶಗಳು ಸಹ ನೀರಾವರಿ ಮತ್ತು ಜಲ ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆದಿವೆ. ಇದರ ಜಲಾಶಯವನ್ನು ಗೋವಿಂದ ಸಾಗರ ಎಂದು ಕರೆಯುತ್ತಾರೆ.

ಕೋಸಿ ಯೋಜನೆ :

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಪ್ರವಾಹ ನಿಯಂತ್ರಣ. ಕೋಸಿ ನದಿಯನ್ನು ಬಿಹಾರಿನ ಕಣ್ಣೀರಿನ ನದಿ ಎಂದು ಕರೆಯುತ್ತಾರೆ. ಇದು ಭಾರತ ಮತ್ತು ನೇಪಾಳ ರಾಷ್ಟ್ರಗಳ ಜಂಟಿ ಯೋಜನೆಯಾಗಿದೆ. ಭಾರತ ಮತ್ತು ನೇಪಾಳ ಗಡಿಯಲ್ಲಿ ಬರುವ ಹನುಮಾನ ನಗರ ಎಂಬಲ್ಲಿ ಕೋಸಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಯೋಜನೆಯು ಸುಮಾರು ೮.೭೫ ಲಕ್ಷ ಹೆಕ್ಟ್‌ರ್‌ ಭೂಮಿಗೆ ನೀರಾವರಿ ಸೌಲಭ್ಯ ಪಡೆದಿದೆ. ಇದರಿಂದ ಉತ್ಪಾದಿಸಲಾಗುವ ವಿದ್ಯುಚ್ಛಕ್ತಿಯಲ್ಲಿ ೫೦ % ರಷ್ಟನ್ನು ನೇಪಾಳಕ್ಕೆ ಒದಗಿಸಲಾಗುತ್ತಿದೆ.

ಹಿರಾಕುಡ್‌ ಯೋಜನೆ :

ಒರಿಸ್ಸಾದ ಸಾಂಬಾಲಪುರ ಜಿಲ್ಲೆಯಿಂದ ೧೦ ಕೀ. ಮೀ ದೂರದಲ್ಲಿ ಮಹಾನದಿಗೆ ಈ ಅನೆಕಟ್ಟನ್ನು ನಿರ್ಮಿಸಲಾಗಿದೆ. ಈ ನದಿಯು ಓರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯಲಾಗಿದೆ. ಹಿರಾಕುಡ್‌ ೪೮೦೧ ಮೀ. ಉದ್ದವಾಗಿದ್ದು, ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟೆಯಾಗಿದೆ. ಇದು ಒಟ್ಟು ೨.೫೪ ಲಕ್ಷ ಹೆಕ್ಟರ್‌ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ. ಇದರಿಂದ ಒರಿಸ್ಸಾ, ಬಿಹಾರ ಮತ್ತು ಛತ್ತೀಸಗಡ ರಾಜ್ಯಗಳು ನೀರಾವರಿ ಮತ್ತು ಜಲ ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆದಿವೆ.

ತುಂಗಭದ್ರಾ ಯೋಜನೆ :

ನೀರಾವರಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ. ಈ ಅಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ಮಲ್ಲಾಪುರ ಎಂಬಲ್ಲಿ ತುಂಗಾಭದ್ರ ನದಿಗೆ ನಿರ್ಮಿಸಲಾಗಿದೆ. ಈ ಜಲಾಶಯವನ್ನು ಪಂಪ ಸಾಗರ ಎಂದು ಕರೆಯುವರು. ಇದು ಆಂಧ್ರ ಪ್ರದೇಶ ಮತ್ತು ಕರ್ನಾಟಕದ ೫.೫ ಲಕ್ಷ ಹೆಕ್ಟರ್‌ ಭೂಮಿಗೆ ನೀರಾವರಿ ಜಲವಿದ್ಯುತ್‌ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.

ಈ ಅಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೋಸಪೇಟೆ ಬಳಿ ಮಲ್ಲಾಪುರ ಎಂಬಲ್ಲಿ ತುಂಗಾಭದ್ರಾ ನದಿಗೆ ನಿರ್ಮಿಸಲಾಗಿದೆ. ಈ ಜಲಾಶಯವನ್ನು ಪಂಪ ಸಾಗರ ಎಂದು ಕರಯುವರು. ಇದು ಆಂಧ್ರ ಪ್ರದೇಶ ಮತ್ತು ಕರ್ನಾಟಕದ ೫.೫ ಲಕ್ಷ ಹೆಕ್ಟರ್‌ ಭೂಮಿಗೆ ನೀರಾವರಿ ಹಾಗೂ ವಿದ್ಯುಚ್ಛಕ್ತಿ ಒದಗಿಸಿದೆ.

ನಾಗಾರ್ಜುನ ಸಾಗರ ಯೋಜನೆ :

ಆಂಧ್ರ ಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ಉತ್ಪಾದನೆ ಈ ಯೋಜನೆ ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ. ಇದು ಸುಮಾರು ೮.೩೦ ಲಕ್ಷ ಹೆಕ್ಟರ್‌ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ :

ಈ ಯೋಜನೆಯು ಕರ್ನಾಟಕದ ದೊಡ್ಡ ಯೋಜನೆಯಾಗಿದೆ. ವಿಜಾಪುರ, ಬಾಗಲಕೋಟೆ, ರಾಯಚೂರು, ಗುಲ್ಬರ್ಗಾ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರಿನ ಯೋಜನೆಯಾಗಿದೆ. ಇದನ್ನು ಬಿಜಾಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯ ನಿರ್ಮಿತವಾಗಿದೆ. ಹಾಗೂ ನಾರಾಯಣಪುರ ಬಳಿ ಮತ್ತೋಂದು ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯ ನಿರ್ಮಿತವಾಗಿದೆ. ಇದರ ಜಲಾಶಯದ ಹೆಸರು ಬಸವ ಸಾಗರ. ಇವುಗಳಿಂದ ಒಟ್ಟು ೬.೪೭ ಲಕ್ಷ ಹೆಕ್ಟರ್‌ ಭೂಮಿ ನೀರಾವರಿ ಸೌಲಭ್ಯವನ್ನು ಒದಗಿಸಿದೆ. ಹಾಗೂ ಇತ್ತೀಚೆಗೆ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಗುತ್ತಿದೆ.

ನರ್ಮದಾ ಕಣಿವೆ ಯೋಜನೆ :

ಈ ಯೋಜನೆಯ ಪ್ರಾರಂಭದಿಂದಲೂ ವಿವಾದಗಳು ಉಂಟಾಗಿದ್ದರಿಂದ ನರ್ಮದಾ ನದಿ ನೀರಿನ ವಿವಾದದ ಪ್ರಾಧಿಕಾರ ನೇಮಿಸಿ ಮಧ್ಯಪ್ರದೇಶ ಮತ್ತು ಗುಜರಾತ ರಾಜ್ಯಗಳ ನಡುವೆ ಈ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳ ನೀರಿಗೆ ಹಂಚಿಕೆ ವಿವಾದವನ್ನು ತೀರ್ಮಾನಿಸಿತು. ಒಟ್ಟು ೨೩ ಅಣೆಕಟ್ಟಗಳನ್ನು ಹೊಂದಿರುವ ನರ್ಮದಾ ನೀರಾವರಿ ಯೋಜನೆಯಲ್ಲಿ ಸರದಾರ ನರ್ಮದಾ ಮೇಲ್ದಂಡೆ ಯೋಜನೆಗಳು ಪ್ರಮುಖವಾಗಿವೆ. ಈ ಅಣೆಕಟ್ಟುಗಳಿಂದ ಉತ್ತರ ಗುಜರಾತ್‌, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಕೆಲಭಾಗಗಳಿಗೆ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆದಿವೆ.

FAQ

ಬಿಹಾರಿನ ಕಣ್ಣೀರಿನ ನದಿ ಯಾವುದು ?

ಕೋಸಿ

ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಯಾವುದು ?

ಕೆರೆ

ಇತರೆ ವಿಷಯಗಳು :

ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ

ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *